Featured
ಐಪಿಎಲ್ ಕ್ವಾಲಿಫೈಯರ್ 1 ಫೈಟ್: ಮುಂಬೈ ಮಣಿಸೋಕೆ ಡೆಲ್ಲಿ ಸಜ್ಜು

ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಸೀಸನ್ 13ರ ಐಪಿಎಲ್ ಟೂರ್ನಿ ರೋಚಕ ಘಟ್ಟ ತಲುಪಿದೆ. ನಾಲ್ಕು ತಂಡಗಳು ಪ್ಲೇ ಆಫ್ಗೆ ಎಂಟ್ರಿಕೊಟ್ಟಿವೆ. ಇಂದು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಕ್ವಾಲಿಫೈಯರ್ನಲ್ಲಿ ಹೋರಾಡಲಿವೆ.
ಗೆದ್ದ ತಂಡ ನೇರವಾಗಿ ಫೈನಲ್ಗೆ ಹೋಗುತ್ತೆ ಸೋತ ತಂಡ ಎಲಿಮಿನೇಟರ್ ಪಂದ್ಯದಲ್ಲೆ ಗೆಲ್ಲುವ ತಂಡದ ವಿರುದ್ಧ ಗೆದ್ದು ಫೈನಲ್ಗೆ ಬರಬೇಕು. ಇಂದು ದುಬೈ ಅಂಗಳದಲ್ಲಿ ಡೆಲ್ಲಿ ಮತ್ತು ಮುಂಬೈ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ.

ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣುವ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ತಂಡವನ್ನ ಸವಾರಿ ಮಾಡುತ್ತೇ ಎಂದು ಹೇಳಲು ಅಸಾಧ್ಯ ಯಾಕಂದ್ರೆ ಮುಂಬೈ ಇಂಡಿಯನ್ಸ್ ಇದುವರೆಗಿನ ಕ್ವಾಲಿಫೈಯರ್ ಸುತ್ತಿನಲ್ಲಿ5 ಬಾರಿ ಗೆದ್ದ ಇತಿಹಾಸವನ್ನ ಹೊಂದಿದೆ.
ಇನ್ನು ಡೆಲ್ಲಿ ತಂಡ ಮೊನ್ನೆ ನಡೆದ ಲೀಗ್ನಲ್ಲಿ ಸತತ ನಾಲ್ಕು ಪಂದ್ಯಗಳನ್ನ ಸೋತು ನಂತರ ಆರ್ಸಿಬಿ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಐಪಿಎಲ್ನಲ್ಲಿ ಇದುವರೆಗೂ ಮುಂಬೈ ಮತ್ತು ಡೆಲ್ಲಿ 26 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 14 ಬಾರಿ ಮುಂಬೈ ಗೆದ್ರೆ 12 ಬಾರಿ ಡೆಲ್ಲಿ ಗೆದ್ದಿದೆ. ಇಂದಿನ ಪಂದ್ಯ ದುಬೈನಲ್ಲಿ ನಡೆಯುತ್ತೆ. ದುಬೈ ಅಂಗಳ ಬೌಲರ್ಸ್ಗಳ ಪಾಲಿಗೆ ಸ್ವರ್ಗವಿದ್ದಂತೆ. ಇಂದಿನ ಪಂದ್ಯದಲ್ಲಿ ಉಭಯ ತಂಡಗಳ ಬೌಲರ್ಸ್ಗಳೇ ಗೇಮ್ ಚೇಂಜರ್ಸ್.
ಡೆಲ್ಲಿ ತಂಡದಲ್ಲಿ ಕಗಿಸೊ ರಬಾಡ ಮತ್ತು ಹೆನ್ರಿ ನಾರ್ಟ್ಜೆ ಪ್ರಮುಖ ಬೌಲರ್ಸ್ಗಳಾದ್ರೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಜಸ್ಪ್ರೀತ್ ಬೂಮ್ರಾ ಮತ್ತು ಟ್ರೆಂಟ್ ಬೌಲ್ಟ್ ಮುಂಬೈ ತಂಡದ ಬ್ರಹ್ಮಾಸ್ತ್ರಗಳಾಗಿದ್ದಾರೆ. ಒಟ್ಟಾರೆ ದುಬೈ ಅಂಗಳದಲ್ಲಿ ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯ ಕ್ರಿಕೆಟ್ ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?