Featured
ಆಗಸ್ಟ್ 2ಕ್ಕೆ ಐಪಿಎಲ್ ವೇಳಾಪಟ್ಟಿ – ಮಹತ್ವದ ಸಭೆಯಲ್ಲಿ ರೂಪುರೇಷೆ ನಿರ್ಧಾರ..!

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
IPL ಸಮಿತಿ ಆಗಸ್ಟ್ 2ರಂದು ಮಹತ್ವದ ಸಭೆ ಕರೆದಿದೆ. IPL ಸೀಸನ್ 13ರ ಪಂದ್ಯಾವಳಿಗಳ ವೇಳಾಪಟ್ಟಿಗೆ ಅಂತಿಮ ರೂಪ, ಮತ್ತಿತರ ವ್ಯವಸ್ಥೆಗಾಗಿ ನಡೆಯಲಿರುವ ಸಭೆ ಇದಾಗಿದೆ. ಈ ಸಭೆಯಲ್ಲಿ ಐಪಿಎಲ್ನ ಎಲ್ಲಾ ಫ್ರಾಂಚೈಸಿಗಳು ಟೂರ್ನಿಯ ರೂಪುರೇಷಗಳ ಕುರಿತು ಸ್ಪಷ್ಟನೆ ಸಿಗಲಿದೆ ಎಂದು ತಿಳಿದುಬಂದಿದೆ.
13ನೇ ಆವೃತ್ತಿಗೆ ಇನ್ನೇನು ಒಂದೂವರೆ ತಿಂಗಳಷ್ಟೇ ಬಾಕಿಯಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯಲಿರುವ ಐಪಿಎಲ್ 2019ಕ್ಕೆ ದಿನಾಂಕ ಕೂಡ ನಿಗದಿಯಾಗಿದ್ದು, ಸೆಪ್ಟೆಂಬರ್ 19ರಂದು ಆರಂಭವಾಗಿ ನವೆಂಬರ್ 8ರಂದು ಮುಕ್ತಾಯಗೊಳ್ಳಲಿದೆ ಎಂದು ಬಿಸಿಸಿಐ ತಿಳಿಸಿದೆ.

ಇನ್ನೂ 51 ದಿನಗಳ ಕಾಲ ದುಬೈನಲ್ಲಿ ಐಪಿಎಲ್ ಆಯೋಜಿಸಲು ವೇಳಾಪಟ್ಟಿ ಕೂಡ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ. ಆಗಸ್ಟ್ 2 ರಂದು ನಡೆಯಲಿರುವ ಆಡಳಿತ ಮಂಡಳಿಯ ಈ ಪ್ರಮುಖ ಸಭೆಯಲ್ಲಿ ಐಪಿಎಲ್ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಉದ್ಘಾಟನಾ ಪಂದ್ಯ ಬಲಿಷ್ಠ ಎರಡು ತಂಡಗಳ ಮಧ್ಯೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಹತ್ವದ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಐಪಿಎಲ್ ಅಧ್ಯಕ್ಷ ಬ್ರಿಜೇಷ್ ಪಟೇಲ್, ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಬಿಸಿಸಿಐನ ಹಿರಿಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ವಿವಿಧ ಪಾಲುದಾರರೊಂದಿಗೆ ಮಾತನಾಡುವ ನಿರೀಕ್ಷೆಯಿದೆ. ಆಟಗಾರರ ಕುಟುಂಬದವರಿಗೆ ಅವಕಾಶ ಕಲ್ಪಿಸುವುದರ ಕುರಿತಂತೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಟೂರ್ನಿಯ ವೇಳೆ ಜೈವಿಕ-ಸುರಕ್ಷಾ ವಾತಾವರಣವನ್ನು ನಿರ್ಮಿಸಿಕೊಳ್ಳಲು ಆಟಗಾರರ ಪತ್ನಿ-ಮಕ್ಕಳು ಅಥವಾ ಗೆಳತಿಗೆ ನಿರ್ಬಂಧ ಹೇರುವ ಬಗ್ಗೆ ಚಿಂತನೆಗಳು ಕೂಡ ನಡೆದಿವೆಯಂತೆ. ಇದಕ್ಕೆ ಕಾರಣ ಕೊರೋನಾ. ಆಟಗಾರರೊಂದಿಗೆ ಕುಟುಂಬದವರೂ ಯುಎಇಗೆ ಪ್ರಯಾಣಿಸಿದರೆ ಆಗ ಹೋಟೆಲ್ ರೂಂಗಳಲ್ಲಿ ಜಾಗದ ವ್ಯವಸ್ಥೆ ಮಾಡುವುದು ಕಷ್ಟಕರವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ಆಟಗಾರರು ಯುಎಇಗೆ ತೆರಳಲು ಕಾತುರರಾಗಿದ್ದು, ಬಹುತೇಕ ಎಲ್ಲ ಫ್ರಾಂಚೈಸಿ ಆಗಸ್ಟ್ 20ರ ಹೊತ್ತಿಗೆ ಯುಎಇ ತಲುಪಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?