Featured
ಭಾರತೀಯ ಚಿತ್ರರಂಗದ ಈ ಸೂಪರ್ ಸ್ಟಾರ್ ಯಾರು ಗೊತ್ತಾ? ಬಾಲ್ಯದ ನೆನಪಲ್ಲಿ ತೇಲಿದ ನಟ..!
ರೈಸಿಂಗ್ ಕನ್ನಡ :
ಕೊರೊನಾದಿಂದಾಗಿ ಜಗತ್ತೆ ನಿಂತೋಗಿದೆ. ಎಲ್ಲವೂ ಸೈಲೆಂಟಾಗಿದೆ. ಆದ್ರೆ, ಕಿಚ್ಚ ಸುದೀಪ್ ಮಾತ್ರ ಸದಾ ಕ್ರಿಯಾಶೀಲಾರಾಗಿರ್ತಾರೆ. ಕುಟುಂಬದ ಜೊತೆ, ಸ್ನೇಹಿತರ ಜೊತೆ, ಹಿತೈಷಿಗಳ ಜೊತೆ ಉತ್ತಮ ಸಮಯ ಕಳೆಯುತ್ತಾರೆ. ಮೊನ್ನೆ ಮೊನ್ನೆಯಷ್ಟೇ ತಮ್ಮ ಚಿತ್ರರಂಗದ ಕೆಲ ಸ್ನೇಹಿತರ ಜೊತೆ ಸೇರಿ ಕಿಚ್ಚ ಸುದೀಪ್ ಕ್ರಿಕೆಟ್ ಆಡಿದ್ದರು. ಇದೀಗ ಸ್ಯಾಂಡಲ್‌ವುಡ್ ಬಾದ್ ಷಾ ಅಭಿಮಾನಿಗಳನ್ನ ತಮ್ಮ ಬಾಲ್ಯಕ್ಕೆ ಕರೆದುಕೊಂಡು ಹೋಗಿದ್ದಾರೆ.
ಯೆಸ್, ಬಾಲ್ಯದಲ್ಲಿ ತಮ್ಮ ಕುಟುಂಬದ ಜೊತೆ ತೆಗೆದ ಫೋಟೋವೊಂದನ್ನ ಈ ಸೂಪರ್ ಸ್ಟೋರ್ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಈ ಫೋಟೋವನ್ನ ಹಂಚಿಕೊಂಡು, ತಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಸುದೀಪ್ ತಮ್ಮ ತಾಯಿ ಸರೋಜಾ, ಸಹೋದರಿಯರಾದ ಸುರೇಖಾ ಹಾಗೂ ಸುಜಾತಾ ಅವರೊಂದಿಗೆ ತೆಗೆಸಿಕೊಂಡ ಹಳೆಯ ಬ್ಲ್ಯಾಕ್ ಅಂಡ್ ವೈಟ್ ಫೋಟೋ ಇದಾಗಿದೆ. ಫೋಟೋ ಜೊತೆಯಲ್ಲೇ, ಆ ದಿನಗಳನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ. ಜೊತೆಗೆ ಪ್ರಸ್ತುತ ದಿನಗಳಲ್ಲಿ ಕುಟುಂಬದ ಜೊತೆಗೆ ಇಂತಹ ಅಪರೂಪದ ಫೋಟೋಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಕಷ್ಟವಾಗುತ್ತಿದೆ. ಬದಲಿಗೆ ಸೆಲ್ಫಿಗಳೇ ಹೆಚ್ಚಾಗುತ್ತಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಅಭಿಮಾನಿಗಳಿಗೆ ಸದಾ ಒಂದಿಲ್ಲೊಂದು ಸಂದೇಶವನ್ನ ನೀಡೋ ಕಿಚ್ಚ ಸುದೀಪ್, ಈ ಫೋಟೋದ ಮೂಲಕ, ಕೌಟುಂಬಿಕ ಮೌಲ್ಯದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?