Featured
ಭಾರತೀಯ ಸೇನೆಗೆ ಭೀಮಬಲ- ಇಸ್ರೇಲ್ನಿಂದ ಬರಲಿದೆ ಅತ್ಯಾಧುನಿಕ ಶಸ್ತ್ರಾಸ್ತ್ರ- ಚೀನಾ, ಪಾಕ್ಗೆ ಗಡಿಯಲ್ಲೇ ಟಕ್ಕರ್..!
ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಗಲ್ವಾನ್ ಗಡಿ ಸಂಘರ್ಷದ ಬಳಿಕ ಚೀನಾ ಮತ್ತು ಭಾರತ ನಡುವೆ ಶೀತಲ ಸಮರ ಜೋರಾಗಿ ನಡೆಯುತ್ತಿದೆ. ಇತ್ತ ಪಾಕಿಸ್ತಾನ ಗಡಿಯಲ್ಲೂ ನಿರಂತರ ದಾಳಿಗಳು ನಡೆಯುತ್ತಿವೆ. ಹೀಗಾಗಿ ಭಾರತೀಯ ಸೇನೆ ಹಿಮಾಲಯ ಕಣಿವೆ ಭಾಗದಲ್ಲಿ ಸೇನೆಯನ್ನು ಬಲಿಷ್ಠಗೊಳಿಸಲು ನಿರ್ಧರಿಸಿದೆ. ತನ್ನ ಅತ್ಯಾಪ್ತ ದೇಶಗಳ ಪೈಕಿ ಒಂದಾಗಿರುವ ಇಸ್ರೇಲ್ನಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಗೆ ಮುಂದಾಗಿದೆ.
ಭಾರತೀಯ ಸೇನೆ ಇಸ್ರೇಲ್ನಿಂದ 200ಕ್ಕು ಹೆಚ್ಚು ಆ್ಯಂಟಿ-ಟ್ಯಾಂಕರ್ ಕ್ಷಿಪಣಿ ಮತ್ತು 12 ಸ್ಟ್ರೈಕ್ಲಾಂಚರ್ಗಳಿಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ. ಇದನ್ನು ಚೀನಾ ಮತ್ತು ಪಾಕ್ ಗಡಿಭಾಗದಲ್ಲಿ ಬಳಸಿಕೊಳ್ಳಲು ಯೋಜನೆಗಳನ್ನೂ ರೂಪಿಸಲಾಗಿದೆ. ಈ ಮೂಲಕ ಎರಡೂ ದೇಶಗಳಿಂದ ನಿರಂತರವಾಗಿ ಬರುತ್ತಿರುವ ಬೆದರಿಕೆಗಳನ್ನು ತಕ್ಕ ಮಟ್ಟಿಗೆ ಕಡಿಮೆ ಗೊಳಿಸಲು ಭಾರತೀಯ ಸೇನೆ ನಿರ್ಧರಿಸಿದೆ.
ತಿಂಗಳ ಹಿಂದೆ ಚೀನಾ ಮತ್ತು ಭಾರತೀಯ ಸೇನೆ ನಡುವೆ ಗಲ್ವಾನ್ನಲ್ಲಿ ದೈಹಿಕ ಫೈಟಿಂಗ್ ನಡೆದಿತ್ತು ಎಂದು ವರದಿಯಾಗಿತ್ತು. ಆ ಬಳಿಕ ಚೀನಾ ಮತ್ತು ಭಾರತ ಗಡಿ ಭಾಗದಲ್ಲಿ ಯುದ್ದೋನ್ಮದ ಸ್ಥಿತಿ ಕೂಡ ಇತ್ತು. ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ಮೂಲಕ ಸದ್ಯಕ್ಕೆ ವಿವಾದ ಬಗೆಹರಿದಿದೆ. ಅದ್ರೆ ಚೀನಾ ಜೊತೆಗಿನ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಎಮರ್ಜೆನ್ಸಿ ಆರ್ಮ್ಸ್ ಪರ್ಚೇಸ್ಗಾಗಿ 500 ಕೋಟಿ ರೂಪಾಯಿಗಳನ್ನು ಮೀಸಲಿರಿಸಿತ್ತು. ಈಗ ಇದನ್ನೇ ಬಳಿಸಿಕೊಂಡು ಇಸ್ರೇಲ್ನಿಂದ ಶಸ್ತ್ರಾಸ್ತ್ರ ಖರೀದಿ ಮಾಡಲು ಸೇನೆ ತಯಾರಿ ನಡೆಸಿದೆ. ಇಸ್ರೇಲ್ ವಿಶ್ವದ ಬಲಿಷ್ಠ ಸೈನ್ಯ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಇದನ್ನು ಬಳಸಿಕೊಳ್ಳಲು ಭಾರತ ನಿರ್ಧಾರ ಮಾಡಿದೆ.
ಇತ್ತೀಚೆಗೆ ವಾಯುಸೇನೆ ಕೂಡ ಮಿಗ್ ಹಾಗೂ ಸುಖೋಯ್ ಯುದ್ಧ ವಿಮಾನಗಳನ್ನು ಖರೀದಿ ಮಾಡಲು ತಯಾರಿ ನಡೆಸಿತ್ತು. ಈಗ ಭೂ ಸೇನೆ ಕೂಡ ಶಸ್ತ್ರಾಸ್ತ್ರ ಖರೀದಿಗೆ ಮುಂದಾಗಿದೆ. ಇಸ್ರೇಲ್ ಕೂಡ ಭಾರತಕ್ಕೆ ತಾನು ಬಳಸಿಕೊಳ್ಳುವ ಟೆಕ್ನಾಲಜಿಗಳನ್ನು ಭಾರತಕ್ಕೆ ಹಸ್ತಾಂತರ ಮಾಡುತ್ತಿದೆ. ಇಸ್ರೇಲ್ ಜೊತೆಗಿನ ಸಂಬಂಧದಿಂದ ಚೀನಾ ಹಾಗೂ ಪಾಕಿಸ್ತಾನದ ಕಣ್ಣು ಕೆಂಪಗಾಗಿರುವುದು ಸುಳ್ಳಲ್ಲ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್