Featured
ಭಾರತೀಯ ಸೇನೆಗೆ ಭೀಮಬಲ- ಚೀನಾ, ಪಾಕ್ಗೆ ನಡುಕ ಹುಟ್ಟಿಸಿದ “ಬ್ರಹ್ಮಾಸ್ತ್ರ”
![](https://risingkannada.com/wp-content/uploads/2020/07/BIGbreaking.jpg)
ರೈಸಿಂಗ್ ಕನ್ನಡ:
ಬೆಂಗಳೂರು:
ಭಾರತ-ಪಾಕ್ ಗಡಿಯಲ್ಲಿ ಮತ್ತು ಭಾರತ-ಚೀನಾ ಗಡಿಯಲ್ಲಿ ಜಟಾಪಟಿ ನಡೆಯುತ್ತಲೇ ಇದೆ. ಭಾರತೀಯ ಸೈನಿಕರು ಅತ್ತ ಪಾಕಿಸ್ತಾನ ಸೈನಿಕರನ್ನು ಹೊಡೆದುರುಳಿಸ್ತಾ ಇದ್ರೆ, ಲಡಾಕ್ ಗಡಿಯಲ್ಲಿ ಡ್ರ್ಯಾಗನ್ ದೇಶ ಚೀನಾದ ಸೈನಿಕರಿಗೂ ಟಾಂಗ್ ಕೊಡುತ್ತಿದ್ದಾರೆ. ಈ ಮಧ್ಯೆ ಭಾರತೀಯ ಸೈನ್ಯಕ್ಕೆ ಈಗ ಮತ್ತೊಂದು ಬ್ರಹ್ಮಾಸ್ತ್ರ ಎಂಟ್ರಿಯಾಗಲಿದೆ. “ರಫೇಲ್” ಅನ್ನುವ ದೈತ್ಯ ಯುದ್ಧವಿಮಾನ ಭಾರತೀಯ ಸೈನ್ಯಕ್ಕೆ ಎಂಟ್ರಿ ಕೊಡ್ತಾ ಇರುವುದು ಶತ್ರು ದೇಶಗಳ ಎದೆಯಲ್ಲಿ ನಡುಕ ಉಂಟು ಮಾಡುತ್ತಿದೆ.
ಡಸಾಲ್ಟ್ ಏವಿಯೇಷನ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಕೇಂದ್ರ ಸರಕಾರ ವಾಯುಸೇನೆಗೆ ಬಲ ನೀಡಬಲ್ಲ ಫೈಟರ್ ಜೆಟ್ ಅನ್ನು ಜುಲೈ 27ರಂದು ಫ್ರಾನ್ಸ್ ನಿಂದ ಭಾರತಕ್ಕೆ ತರಿಸಿಕೊಳ್ಳಲಿದೆ. ಹರಿಯಾಣದ ಅಂಬಾಲ ವಾಯುನೆಲೆಗೆ ರಾಕ್ಷಸ ಶಕ್ತಿಯ ರಫೇಲ್ ಬಂದಿಳಿಯಲಿದೆ. ಆಗಸ್ಟ್ ಮೊದಲ ವಾರದಿಂದಲೇ ವಾಯುಸೇನೆಯಲ್ಲಿ ರಫೇಲ್ ಕಾರ್ಯನಿರ್ವಹಿಸಲಿದೆ.
ವಾಯುಸೇನೆಯಲ್ಲಿ ರಫೇಲ್ಗೆ ಗೋಲ್ಡನ್ ಆರೋಸ್ ಸ್ಕ್ವಾಡ್ರನ್ ಎಂದು ನಾಮಕರಣ ಮಾಡಲಾಗಿದೆ. ಫ್ರಾನ್ಸ್ನಿಂದ ಯುಎಇ ಮೂಲಕ ಹರಿಯಾಣಕ್ಕೆ ಈ ಯುದ್ಧವಿಮಾನಗಳು ಎಂಟ್ರಿಕೊಡಲಿವೆ. ಭಾರತ ಸರಕಾರ ಒಟ್ಟು 36 ರಫೇಲ್ ವಿಮಾನ ಖರೀದಿಗೆ ಮುಂದಾಗಿದೆ. ಈ ಪೈಕಿ 6 ಫೈಟರ್ ಜೆಟ್ಗಳು ಮೊದಲ ಹಂತದಲ್ಲಿ ಬರಲಿದ್ದು, ಈ ವರ್ಷಾಂತ್ಯದ ವೇಳೆಗೆ ಉಳಿದ ಫೈಟರ್ ಜೆಟ್ಗಳು ವಾಯುಸೇನೆಯನ್ನು ಸೇರಿಕೊಳ್ಳಲಿವೆ.
![](https://risingkannada.com/wp-content/uploads/2020/07/TEMPLET-0-00-02-15-1024x576.jpg)
ಈಗಾಗಲೇ ವಾಯುಸೇನೆಯ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಫ್ರಾನ್ಸ್ಗೆ ಹೋಗಿ ದೈತ್ಯಶಕ್ತಿಯ ಈ ಜೆಟ್ ಬಗ್ಗೆ ತರಬೇತಿ ಪಡೆದುಕೊಂಡಿದ್ದಾರೆ. ಮೊದಲ ಸ್ಕ್ವಾಡ್ರನ್ ಹರಿಯಾಣಾದ ಅಂಬಾಲಾ ಹಾಗೂ 2ನೇ ಸ್ಕ್ವಾಡ್ರನ್ ವೆಸ್ಟ್ ಬೆಂಗಾಲ್ನಲ್ಲಿ ನಿಯೋಜನೆ ಮಾಡಲಾಗಿದೆ.
ಭಾರತ ಮತ್ತು ಚೀನಾ ಗಡಿಗೆ ಹತ್ತಿರದಲ್ಲೇ ಅಂಬಾಲಾ ವಾಯುನೆಲೆ ಇರುವುದರಿಂದ ರಫೇಲ್ ಎಂಟ್ರಿ ಶತ್ರು ದೇಶಗಳಿಗೆ ಕೊಂಚ ಅಸಮಾಧಾನ ತಂದಿದೆ. ಆದ್ರೆ ಭಾರತೀಯ ಸೇನೆ ಮತ್ತು ಸರಕಾರ ಎಲ್ಲಾ ಸಮಯದಲ್ಲೂ ಎಚ್ಚರಿಕೆಯಿದ ಇರುವಂತೆ ಸೇನೆಗೆ ಸೂಚಿಸಿದೆ.
![](https://risingkannada.com/wp-content/uploads/2020/07/rising-kannada-add-9.png)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?