Featured
ವಿಡೀಯೋ ನೋಡಿ ಹೆಮ್ಮೆ ಪಡಿ- ಸೇನೆ ಸೇರಿಕೊಂಡ ಧ್ರುವಾಸ್ತ್ರ- ಪವರ್ಫುಲ್ ಆಗಿದೆ ಮೇಕ್ ಇನ್ ಇಂಡಿಯಾ ಕ್ಷಿಪಣಿ
ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಕ್ ಗಡಿಯಲ್ಲಿ ಸೇನೆ ಜಮಾವಣೆಗೊಳ್ಳುತ್ತಿದೆ. ಅತ್ತ ಸೇನೆ 40,000 ಸೈನಿಕರನ್ನು ಭಾರತದ ಗಡಿಯತ್ತ ಕಳುಹಿಸಿಕೊಟ್ಟಿದ್ದರೆ ಇತ್ತ ಭಾರತ ಕೂಡ ಯುದ್ಧಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. ಯುದ್ಧ ಆಗದೇ ಇದ್ದರೂ ಚೀನಾಕ್ಕೆ ಸೆಡ್ಡು ಹೊಡೆಯಲು ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಇನ್ನೊಂದು ಕಡೆ ಪಾಕಿಸ್ತಾನದ ಮೇಲೂ ಗಮನ ಇಟ್ಟಿದೆ. ಚೀನಾ ಮತ್ತು ಪಾಕ್ ಕಿತಾಪತಿಗಳು ಮುಂದುವರೆಯುತ್ತಿರುವ ಬೆನ್ನಲ್ಲೇ ಭಾರತೀಯ ಸೇನೆಗೆ ಹೊಸ ಅಸ್ತ್ರ ಸೇರ್ಪಡೆಯಾಗಿದೆ.
ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಷೇಷನ್ ಮೇಕ್ ಇನ್ ಇಂಡಿಯಾ ಅಭಿಯಾನದಡಿ ನಿರ್ಮಿಸಿರುವ ಧ್ರವಾಸ್ತ್ರ ಮಿಸೈಲ್ ಅನ್ನು ಪರೀಕ್ಷ ಮಾಡಲಾಗಿದೆ. ಒಡಿಶಾದ ಇಂಟರಿಮ್ ಟೆಸ್ಟ್ ರೇಂಜ್ನಲ್ಲಿ ನಡೆದ ಪರೀಕ್ಷೆ ಯಶಸ್ವಿಯಾಗಿದೆ. ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ನಲ್ಲಿ ಅಳವಡಿಸಿದ್ದ ಧ್ರುವಾಸ್ತ್ರ 3ನೇ ತಲೆಮಾರಿನ ಆ್ಯಂಟಿ ಟ್ಯಾಮಕ್ ಗೈಡೆಡ್ ಕ್ಷಿಪಣಿಯಾಗಿದೆ.
ಭಾರೀ ಸಾಮರ್ಥ್ಯದ ಧ್ರುವಾಸ್ತ್ರ ಸಾಂಪ್ರಾದಾಯಿ ಯುದ್ಧ ಟ್ಯಾಂಕ್ಗಳನ್ನು ಧ್ವಂಸಗೊಳಿಸುವ ಜೊತೆಗೆ ಸ್ಪೋಟಕ ರಕ್ಷಣಾ ಕವಚಗಳನ್ನು ಕೂಡ ಹೊಂದಿದೆ. ಡೈರೆಕ್ಟ್ ಹಾಗೂ ಟಾಪ್ ಅಟ್ಯಾಕ್ ಮೋಡ್ ನಲ್ಲಿ ಜುಲೈ 15 ಮತ್ತು 16ರಂದು ಧ್ರುವಾಸ್ತ್ರ ಕ್ಷಿಪಣಿಯ ಪರೀಕ್ಷೆ ನಡೆಸಲಾಗಿತ್ತು. ಈ ವಿಡೀಯೋ ಈಗ ಲಭ್ಯವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?