Featured
ಅಮೆರಿಕದಿಂದ ಯುದ್ಧ ವಿಮಾನ ಖರೀದಿಗೆ ಭಾರತ ತಯಾರಿ- ವೈರಿ ಎದೆ ನಡುಗಿಸುವ ಪೋಸಿಡಾನ್ ಮೇಲೆ ಭಾರತಕ್ಕೆ ಕಣ್ಣು..!

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಇಸ್ರೇಲ್ನಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಗೆ ಭಾರತ ಮುಂದಾಗಿದೆ. ಈಗ ಅಮೆರಿಕದಿಂದಲೂ ಯುದ್ಧವಿಮಾನಗಳನ್ನು ಖರೀದಿ ಮಾಡಲು ಮಾತುಕತೆ ನಡೆಸುತ್ತಿದೆ. ಭಾರತದ ಸಮುದ್ರಗಳ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಅಮೆರಿಕದಿಂದ ಪೋಸಿಡಾನ್ -8 ಐ ವಿಮಾನಗಳ ಖರೀದಿಗೆ ಭಾರತ ಮುಂದಾಗಿದೆ. ಒಟ್ಟು ಆರು ಪೋಸಿಡಾನ್ -8 ಐ ವಿಮಾನಗಳನ್ನ ಖರೀದಿಸುವ ಬಗ್ಗೆ ಅಮೆರಿಕ ಸರಕಾರದೊಂದಿಗೆ ಭಾರತ ಚರ್ಚೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಭಾರತ ಸಮುದ್ರಗಳ ಮೇಲಿನ ನಿಗಾಕ್ಕಾಗಿ ಅಮೆರಿಕದಿಂದ ಈಗಾಗಲೇ 6 ಪ್ರಿಡೆಟರ್ ಬಿ ಶಸ್ತ್ರಸಜ್ಜಿತ ಡ್ರೋನ್ ಖರೀದಿ ಪಕ್ಕಾ ಆಗಿದೆ. ಈಗ ಪೋಸಿಡಾನ್8-ಐ ವಿಮಾನಗಳ ಖರೀದಿಗೆ ಮುಂದಾಗಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಸಮುದ್ರ ಮೇಲಿನ ನಿಗಾ ಅತ್ಯಾವಶ್ಯಕ ಆಗಿರುವುದರಿಂದ ಈ ಖರೀದಿಗೆ ಭಾರತ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಚೀನಾ ಜೊತೆಗಿನ ಗಡಿ ಸಂಘರ್ಷವೂ, ಶಸ್ತ್ರಾಸ್ತ್ರ ಹಾಗೂ ಯುದ್ಧ ಸಾಮಾಗ್ರಿಗಳ ಖರೀದಿಗೆ ಮನಸ್ಸು ಮಾಡುವಂತೆ ಮಾಡಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಸಮುದ್ರ ಹಾಗೂ ಲಡಾಕ್‌ನಲ್ಲಿ ಕಣ್ಗಾವಲಿಗಾಗಿ ಭಾರತದ ಸೇನೆ ಬಳಸುತ್ತಿದೆ ಸದ್ಯ ಇಂತಹ ವಿಮಾನಗಳನ್ನು ಬಳಸಿಕೊಳ್ಳುತ್ತಿದೆ. ಈ ವಿಮಾನಗಳು, ಕ್ಷಿಪಣಿ, ಟಾರ್ಪಂಡೋಗಳನ್ನು ಕೂಡ ಬಳಸಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಈ ವಿಮಾನಗಳ ಮೇಲೆ ಭಾರತ ಹೆಚ್ಚು ಆಸಕ್ತವಾಗಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















