Featured
ಉತ್ತರ ಕೊರಿಯಾಕ್ಕೆ ಭಾರತದ ನೆರವಿನ ಹಸ್ತ: 10 ಲಕ್ಷ ಡಾಲರ್ ಮೊತ್ತದ ಕ್ಷಯರೋಗ ಔಷಧ ನೀಡಲು ಒಪ್ಪಿಗೆ
![](https://risingkannada.com/wp-content/uploads/2020/07/tb-tablets.jpg)
ರೈಸಿಂಗ್ ಕನ್ನಡ :
ದೆಹಲಿ :
ಮಾನವೀಯತೆಯ ದೃಷ್ಟಿಯಿಂದ ಉತ್ತರ ಕೊರಿಯಾಕ್ಕೆ ಭಾರತ ಸರ್ಕಾರ 10ಲಕ್ಷ ಡಾಲರ್ ಮೊತ್ತದ ಕ್ಷಯ ರೋಗದ ಔಷಧ ಮತ್ತು ಉಪಕರಣಗಳನ್ನ ಕಳುಹಿಸಿಕೊಡಲು ನಿರ್ಧರಿಸಿದೆ.
ಉತ್ತರ ಕೊರಿಯಾ ಔಷಧಗಳ ಕೊರತೆ ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತಕ್ಕೆ 10 ಲಕ್ಷ ಡಾಲರ್ ಮೊತ್ತದ ಔಷಧಗಳ ಕೊಡುವಂತೆ ಭಾರತಕ್ಕೆ ಮನವಿ ಮಾಡಿತ್ತು. ಮನವಿ ಸ್ವೀಕರಿಸಿದ ಭಾರತ ಸರ್ಕಾರ ಔಷಧಗಳನ್ನ ಕಳುಹಿಸಿ ಕೊಡುವುದಾಗಿ ಹೇಳಿದೆ.
![](https://risingkannada.com/wp-content/uploads/2020/07/t-b-tablets.jpg)
ಉತ್ತರ ಕೊರಿಯಾದ ಜೊತೆ ಯಾವುದೇ ವ್ಯವಹಾರ ಮಾಡಬೇಕಾದರೆ ಅಮೆರಿಕದ ನಿರ್ಬಂಧಗಳನ್ನು ಮುರಿಯಬೇಕಿದೆ. ಆದ್ರೆ ಕ್ಷಯ ರೋಗ ನಿರ್ಮೂಲನೆ ಮಾಡಲು ಉತ್ತರ ಕೊರಿಯಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚಟುವಟಿಕೆ ಮಾಡುತ್ತಿದೆ. ಹೀಗಾಗಿ ಈ ಔಷಧಗಳನ್ನ ಕಳುಹಿಸಿಕೊಡಲು ಯಾವುದೇ ಸಮಸ್ಯೆ ಇಲ್ಲ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಯ ಉಪಸ್ಥಿತಿಯಲ್ಲಿ ಉತ್ತರ ಕೊರಿಯಾದಲ್ಲಿರುವ ಭಾರತದ ರಾಯಭಾರಿ ಮಲ್ಹಾರಿ ಗೊಟ್ಸುರ್ವೆ ಕೆಲವು ಔಷಧಗಳನ್ನ ಕೊರಿಯಾ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?