Featured
ಕೊರೊನಾಗೆ ಕಡಿವಾಣ ಹಾಕಲು ಪೈಪೋಟಿ ..? ರೇಸ್ನಲ್ಲಿದೆ ಭಾರತದ 7 ಮೆಡಿಸಿನ್ ಕಂಪನಿಗಳು..!
![](https://risingkannada.com/wp-content/uploads/2020/07/CORONA-VACCINE-2.jpg)
ರೈಸಿಂಗ್ ಕನ್ನಡ, ನ್ಯೂಸ್ ಡೆಸ್ಕ್:
ವಿಶ್ವವೇ ಕೊರೊನಾದಿಂದ ಕಂಗಾಲಾಗಿದೆ. ಚೀನಾದ ವುಹಾನ್ನಲ್ಲಿ ಹುಟ್ಟಿದ ಮಾರಣಂತಿಕ ವೈರಸ್ ಈಗ ಜಗತ್ತಿನಲ್ಲಿರುವ ಪ್ರತೀ ಮನೆ ಮನೆಗೂ ತಲುಪಿರುವ ಭೀತಿ ಇದೆ. ಕಳೆದ ಡಿಸೆಂಬರ್ನಲ್ಲಿ ಮೊದಲ ಬಾರಿಗೆ ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್19 ವೈರಸ್, ಮೂರೇ ಮೂರು ತಿಂಗಳುಗಳಲ್ಲಿ ಇಡೀ ಜಗತ್ತನ್ನು ಆವರಿಸಿದೆ. ಆದರೆ ಇಲ್ಲಿ ತನಕ ಕೊರೊನಾಗೆ ಮೆಡಿಸಿನ್ ಯಾವುದು ಅನ್ನೋದು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ನಡುವೆ ಕೊರೊನಾ ವ್ಯಾಕ್ಸಿನ್ ಸಂಶೋಧನೆ ಮಾಡಲು ವಿಶ್ವದ ಎಲ್ಲಾ ರಾಷ್ಟ್ರಗಳು ಪೈಪೋಟಿಗೆ ಬಿದ್ದಿವೆ. ಭಾರತವೂ ಕೊರೊನಾಗೆ ಲಸಿಕೆ ಕಂಡುಹಿಡಿಯುವ ರೇಸ್ನಲ್ಲಿದೆ.
ಕೊರೊನಾಗೆ ಲಸಿಕೆ ಕಂಡುಹಿಡಿಯಲು ಭಾರತದ ಭಾರತದ 7 ಫಾರ್ಮಾ ಕಂಪನಿಗಳು ಪೈಪೋಟಿಯಲ್ಲಿವೆ. ಜಾಗತಿಕ ಮಟ್ಟದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಭಾರತ್ ಬಯೋಟೆಕ್, ಸೆರಮ್ ಇನ್ಸ್ಟಿಟ್ಯೂಟ್, ಝೈಡಸ್ ಕ್ಯಾಡಿಲಾ, ಪ್ಯಾನೇಸಿಯಾ ಬಯೋಟೆಕ್, ಇಂಡಿಯನ್ ಇಮ್ಯುನೊಲಾಜಿಕಲ್ಸ್, ಮೈನ್ವಾಕ್ಸ್ ಹಾಗೂ ಬಯೋಲಾಜಿಕಲ್ ಇ ಅನ್ನುವ 7 ಭಾರತೀಯ ಫಾರ್ಮಾ ಕಂಪನಿಗಳು ಕೊರೊನಾ ಮೆಡಿಸಿನ್ ಕಂಡುಹಿಡಿಯುವಲ್ಲಿ ಬ್ಯೂಸಿಯಾಗಿವೆ.
![](https://risingkannada.com/wp-content/uploads/2020/07/FULL-PLATE-11-1024x576.png)
WHO ಕೂಡ ಎಲ್ಲಾ ದೇಶಗಳ ಬಯೋ ಕಂಪನಿಗಳ ಜೊತೆ ನಿರಂತರ ಸಂಪರ್ಕದಲ್ಲಿದೆ. ಕೊರೊನಾ ಲಸಿಕೆಯ ಟ್ರಯಲ್ಗಳ ಮೇಲೆ ಕಣ್ಣಿಟ್ಟಿದೆ. ಸಾಮಾನ್ಯವಾಗಿ ಯಾವುದೇ ಲಸಿಕೆಯ ಪರೀಕ್ಷೆಗೆ ಒಂದೂವರೆ ವರ್ಷ ಸಮಯಾವಕಾಶ ಬೇಕು. ಅಷ್ಟೇ ಅಲ್ಲ ಅದನ್ನು ತಯಾರಿಸಲು ಮತ್ತು ಹಂಚಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಈಗ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಫಾರ್ಮಾ ಸಂಸ್ಥೆಗಳು ವೇಗವಾಗಿ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿವೆ.
ಕೊವ್ಯಾಕ್ಸಿನ್ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆ. ಇದರ ಮೊದಲ ಹಾಗೂ 2 ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿ ನೀಡಲಾಗಿದೆ. ಮನುಷ್ಯರ ಮೇಲಿನ ಕ್ಲಿನಿಕಲ್ ಟ್ರಯಲ್ಸ್ ಕೂಡ ನಡೆಯುತ್ತಿದೆ.
ಸೆರಮ್ ಇನ್ಶ್ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆ ತಯಾರಿಕೆ ಬಗ್ಗೆ ಮಾಹಿತಿ ನೀಡಿದ್ದು ಕೋವಿಡ್-19 ಗೆ ವರ್ಷಾಂತ್ಯದ ವೇಳೆಗೆ ಲಸಿಕೆ ಕಂಡುಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದೆ.
ಅಸ್ಟ್ರಾಜೆನೆಕಾ ಆಕ್ಸ್‌ಫರ್ಡ್ ಲಸಿಕೆಯ ಮೇಲೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದ್ದೇವೆ. ಇದರ ಜೊತೆಗೆ ಆಗಸ್ಟ್ 2020 ರ ವೇಳೆಗೆ ಭಾರತದಲ್ಲಿ ಮನುಷ್ಯರ ಮೇಲೂ ಈ ಲಸಿಕೆಯ ಪ್ರಯೋಗ ನಡೆಯಲಿದೆ ಎಂದು ಸೆರಮ್ ಇನ್ಸ್ಟಿಟ್ಯೂಟ್ ನ ಸಿಇಒ ಅದಾರ್ ಪೂನಾವಾಲ ತಿಳಿಸಿದ್ದಾರೆ.
![](https://risingkannada.com/wp-content/uploads/2020/07/rising-kannada-add-33.png)
ಅಮೆರಿಕ ಮೂಲದ ಬಯೋಟೆಕ್ ಸಂಸ್ಥೆ ಕೊಡಜೆನಿಕ್ಸ್ ಜೊತೆಗೂಡಿ ಲೈವ್ ಅಟೆನ್ಯುವೇಟೆಡ್ ಲಸಿಕೆಯನ್ನೂ ಈ ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆ. ಈ ಸಂಸ್ಥೆಗಳು ತಯಾರಿಸುತ್ತಿರುವ ಲಸಿಕೆ ಭಾರತದ ಜೊತೆಗೆ ಮಧ್ಯಮ ಹಾಗೂ ಕಡಿಮೆ ಆದಾಯ ಹೊಂದಿರುವ ದೇಶಗಳಿಗೆ ಸಹಕಾರಿ ಎಂದು ಪೂನಾವಾಲ ತಿಳಿಸಿದ್ದಾರೆ. ಇನ್ನು ಝೈಡಸ್ ಕ್ಯಾಡಿಲಾ ಸಂಸ್ಥೆ ಕ್ಯಾಂಡಿಡೇಟ್ ಝೈಕೋವಿ-ಡಿ ಲಸಿಕೆಯ ಕ್ಲಿನಿಕಲ್ ಟ್ರಯಲ್ ನ್ನು 7 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಿದೆ. ಒಟ್ಟಿನಲ್ಲಿ ಕೊರೊನಾ ಕಾಟದಿಂದ ಮುಕ್ತಿಪಡೆಯಲು ಎಲ್ಲೆಡೆ ಸಂಶೋಧನೆಗಳು ನಡೆಯುತ್ತಿವೆ.
You may like
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
3 ತಿಂಗಳ ಬಳಿಕ ರಾಜ್ಯದಲ್ಲಿ ಕೊರೋನಾ ಭಾರೀ ಏರಿಕೆ : ಇದೇನಾ 3ನೇ ಅಲೆ.?