Featured
ಕೊರೊನಾ ಕಾಟಕ್ಕೆ ಸಿಲಿಕಾನ್ ಸಿಟಿ ಕಂಗಾಲು- 50ಸಾವಿರ ಕೇಸ್ಗಳತ್ತ ಬೆಂಗಳೂರು ದಾಪುಗಾಲು- ಎಲ್ಲೆಲ್ಲೂ ಕೊರೊನಾ ಕಾಟ..!
ರೈಸಿಂಗ್ ಕನ್ನಡ:
ಬೆಂಗಳೂರು:
ಲಾಕ್ಡೌನ್ ಆಯಿತು, ಸೀಲ್ ಡೌನ್ ಕೂಡ ಆಗ್ತಾಯಿದೆ.. ಕಂಟೈನ್ಮೆಂಟ್ ಝೋನ್, ಫ್ರೀ ಝೋನ್ ಎಲ್ಲವೂ ಇದೆ. ಆದರೆ ಕೊರೊನಾ ಮಾತ್ರ ಕಂಟ್ರೋಲ್ಗೆ ಸಿಗುತ್ತಿಲ್ಲ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿತ್ಯವೂ ಕೊರೊನಾ ಕಂಟ್ರೋಲ್ ಮಾಡೋ ಬಗ್ಗೆಯೇ ಮಾತು. ಆದ್ರೆ ಮಹಾಮಾರಿ ಮಾತ್ರ ಕೈಗೇ ಸಿಗುತ್ತಿಲ್ಲ. ಅಷ್ಟೇ ಅಲ್ಲ ಕರ್ನಾಟಕದಲ್ಲಿ ಒಟ್ಟು ಕೇಸ್ಗಳ ಸಂಖ್ಯೆ 1 ಲಕ್ಷದತ್ತ ಮುಖ ಮಾಡಿದ್ದರೆ, ರಾಜಧಾನಿ ಬೆಂಗಳೂರು 50ಸಾವಿರ ಕೇಸ್ಗಳತ್ತ ದಾಪುಗಾಲಿಡುತ್ತಿದೆ.
ಇಡೀ ಕರ್ನಾಟಕದಲ್ಲಿ 50%, ಬೆಂಗಳೂರಿನಲ್ಲಿ 50%..!
ಕರ್ನಾಟಕದಲ್ಲಿ ಒರುವ ಒಟ್ಟು ಸೋಂಕಿತರು 96141. ಈ ಪೈಕಿ ಬೆಂಗಳೂರಿನಲ್ಲೇ 45453 ಜನ ಸೋಂಕಿತರಿದ್ದಾರೆ. ಸರಿಸುಮಾರು ಶೇಕಡಾ 50ರಷ್ಟು ಸೋಂಕಿತರು ಬೆಂಗಳೂರಿನವರೇ ಆಗಿದ್ದಾರೆ. ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಟ್ಟು ಸೋಂಕಿತರ ಪೈಕಿ ಸರಿಸುಮಾರು ಶೇಕಡಾ 50ರಷ್ಟಿದ್ದಾರೆ. ಹೀಗಾಗಿ ರಾಜಧಾನಿ ಬೆಂಗಳೂರು ಅಪಾಯದಲ್ಲಿದೆ.
ಬೆಂಗಳೂರಿನಲ್ಲಿ 33156 ಆ್ಯಕ್ಟೀವ್ ಕೇಸ್ಗಳಿವೆ. 891 ಮರಣಗಳು ಬೆಂಗಳೂರಿನಲ್ಲೇ ಆಗಿದೆ. ಬೆಂಗಳೂರು ಬಿಟ್ಟು ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಒಟ್ಟು ಆ್ಯಕ್ಟೀವ್ ಕೇಸ್ಗಳ ಸಂಖ್ಯೆ 25261. ಎಲ್ಲಾ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡು ನೋಡಿದರೆ ಉದ್ಯಾನ ನಗರಿ ಬೆಂಗಳೂರು ಕೊರೊನಾ ಹಾಟ್ಸ್ಪಾಟ್ನಂತೆ ಕಾಣುತ್ತಿದೆ.
ಎಸ್ಕೇಪ್ ಆದವರಿಂದ ಅಪಾಯ..?
ಕೊರೊನಾ ಪರೀಕ್ಷೆಗೆ ಒಳಪಟ್ಟು ಪಾಸಿಟಿವ್ ಬಂದಿರುವ 3,338 ಜನರನ್ನು ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ. ಸೋಂಕು ಟೆಸ್ಟಿಂಗ್‌ಗೆ ಹೋದ ಸಂದರ್ಭದಲ್ಲಿ ಫಾರ್ಮ್ ತುಂಬುವಾಗ ತಪ್ಪು ವಿಳಾಸ, ತಪ್ಪು ಫೋನ್ ನಂಬರ್ ಕೊಟ್ಟಿರುವ ಕಾರಣ ಸೋಂಕಿತರನ್ನು ಪತ್ತೆ ಮಾಡಲಾಗುತ್ತಿಲ್ಲ. ಹೀಗಾಗಿ, ಅವರನ್ನು ಸಂಪರ್ಕಿಸಲು ಪ್ರಯತ್ನಗಳು ನಡೆದಿವೆ. ಅಲ್ಲದೆ, ಪತ್ತೆ ಮಾಡಲು ಪರ್ಯಾಯ ಮಾರ್ಗಗಳನ್ನು ಕೂಡ ಬಿಬಿಎಂಪಿ ಹುಡುಕುತ್ತಿದೆ ಎಂದು ತಿಳಿದು ಬಂದಿದೆ. ಆದ್ರೆ ಎಸ್ಕೇಪ್ ಆದವರಿಂದಲೇ ಕೊರೊನಾ ಹರಡುತ್ತಿದೆ ಅನ್ನುವ ಅನುಮಾನಗಳು ಹೆಚ್ಚಾಗಿವೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!