Featured
ಅಧಿಕಾರಕ್ಕೆ ಬಂದ್ರೆ, ಮತ್ತೆ ಬರಲಿದೆ ಹೆಚ್-1 ಬಿ ವೀಸಾ – ಜೋ ಬಿಡೆನ್ ಘೋಷಣೆ
![](https://risingkannada.com/wp-content/uploads/2020/07/106574326-1591897119315biden-1.jpg)
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ವಾಷಿಂಗ್ಟನ್ : ಅಮೆರಿಕದಾದಲ್ಲಿ ಕೊರೊನಾ ವೈರಸ್‌ಗಿಂತ ಹೆಚ್ಚಾಗಿ, ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯದ್ದೇ ಕಾವು ಜೋರಾಗಿದೆ. ಟ್ರಂಪ್ ಮತ್ತು ಬಿಡೆನ್ ನಡುವೆ ಭಾರೀ ಪೈಪೋಟಿ ಶುರುವಾಗಿದೆ. ಇಬ್ಬರು ನಿರಂತರ ಪ್ರಚಾರದಲ್ಲಿ ತೊಡಗಿದ್ದು, ಭಾರೀ ಭರವಸೆಗಳನ್ನ ನೀಡುತ್ತಿದ್ದಾರೆ.
ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಅಧಿಕಾರಕ್ಕೆ ಬಂದ್ರೆ, ಟ್ರಂಪ್ ಆಡಳಿತ ಹೇರಿರುವ ಹೆಚ್-1ಬಿ ವೀಸಾ ರದ್ಧತಿ ಆದೇಶವನ್ನ ಹಿಂಪಡೆಯುವುದಾಗಿ ಜೋ ಬಿಡೆನ್ ಘೋಷಿಸಿದ್ದಾರೆ. ಹೆಚ್-1 ಬಿ ವೀಸಾ ರದ್ಧತಿ ಟ್ರಂಪ್ ಸರ್ಕರಾದ ಬಹುದೊಡ್ಡ ತಪ್ಪು ನಿರ್ಧಾರ ಎಂದಿರುವ ಜೋ ಬಿಡೆನ್, ತಾವು ಅಧಿಕಾರಕ್ಕೆ ಬಂದ್ರೆ ಈ ಆದೇಶವನ್ನ ಹಿಂಪಡೆಯುವುದಾಗಿ ಘೋಷಿಸಿದ್ದಾರೆ.
ಟ್ರಂಪ್ ಸರ್ಕಾರ ಕೈಗೊಂಡಿರೋ ಈ ವೀಸಾ ರದ್ದತಿ ಕ್ರಮದಿಂದಾಗಿ, ಅಮೇರಿಕ್ಕಾಕೆ ನಷ್ಟ ಹೊರತು ವಿದೇಶಿಗರಿಗಲ್ಲ. ಇದರಿಂದಾಗಿ ಭಾರತ ಸೇರಿದಂತೆ ವಿದೇಶಿ ಉದ್ಯೋಗಕಾಂಕ್ಷಿಗಳ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ಜೋ ಬಿಡೆನ್ ಹೇಳಿದ್ದಾರೆ.
ಏಷ್ಯನ್ ಅಮೆರಿಕನ್ ಮತ್ತು ಪೆಸಿಫಿಕ್ ದ್ವೀಪವಾಸಿ ಸಂಘಟನೆಯೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಜೋ ಬಿಡೆನ್, ಹೆಚ್-1 ಬಿ ವೀಸಾ ವಿಶ್ವ ಕಲ್ಯಾಣಕ್ಕಾಗಿ ಅಮೆರಿಕದ ಒಂದು ಐತಿಹಾಸಿಕ ನಿರ್ಣಯವಾಗಿದ್ದು, ಇದನ್ನು ಹಾಳು ಮಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ಹೆಚ್-1 ಬಿ ವೀಸಾ ನಿಷೇಧ ಅಮೆರಿಕದ ಆರ್ಥಿಕತೆಗೆ ಹಾನಿಕಾರಕ ನಡೆಯಾಗಿದೆ ಎಂದು ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮಗಳ ಒಕ್ಕೂಟ ನಾಸ್ಕಾಮ್ ಈ ಮೊದಲೇ ಹೇಳಿತ್ತು. ಅಮೆರಿಕ ಸರ್ಕಾರದ ಆದೇಶದಿಂದಾಗಿ ವಿದೇಶಗಳಲ್ಲಿರುವ ಪ್ರತಿಭಾನ್ವಿತರು ಅವಕಾಶ ವಂಚಿತರಾಗುತ್ತಾರೆ. ಅಂತೆಯೇ ಇದರಿಂದ ಅಮೆರಿಕ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ದು. ಸ್ಥಳೀಯ ಪ್ರತಿಭಾನ್ವಿತರ ಕೊರತೆ ಇದ್ದಾಗ ಉತ್ಪಾದನೆಯ ಮೇಲೆ ಹೊಡೆತ ಬೀಳುತ್ತದೆ. ಈಗಾಗಲೇ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಸಾಕಷ್ಟು ಸಂಸ್ಥೆಗಳು ಮುಚ್ಚಲ್ಪಟ್ಟಿದೆ ಎಂದು ನಾಸ್ಕಾಮ್ ಅಭಿಪ್ರಾಯಪಟ್ಟಿತ್ತು. ಆದ್ರೀಗ ಜೋ ಬಿಜೆನ್ ಭರವಸೆ ಸಾಕಷ್ಟು ಭರವಸೆಗಳಿಗೆ ನಾಂದಿ ಹಾಡಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?