Featured
ಸ್ವಾತಂತ್ರ್ಯೋತ್ಸವಕ್ಕೂ ಕೊರೊನಾ ಕರಿನೆರಳು – ಕೆಂಪುಕೋಟೆಯಲ್ಲಿ ಕಟ್ಟೆಚ್ಚರದ ಆಚರಣೆ!
![](https://risingkannada.com/wp-content/uploads/2020/07/Red_Fort-Delhi-India.jpg)
ರೈಸಿಂಗ್ ಕನ್ನಡ :
ನವದೆಹಲಿ :
ಜಾಗತಿಕ ಸಾಂಕ್ರಾಮಿಕ ಕೊರೊನಾ ಭಾರತದಲ್ಲಿ ಹೆಚ್ಚುತ್ತಿರೋದ್ರಿಂದ, ಈ ಬಾರಿ ಸ್ವಾತಂತ್ರ್ಯೋತ್ಸವವನ್ನ ಆಚರಿಸಲಾಗುತ್ತಾ ಇಲ್ವಾ…? ಇಂತದ್ದೊಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಆದ್ರೆ, ನವದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಸಲ ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭಕ್ಕೆ ಆಹ್ವಾನಿತರ ಪಟ್ಟಿಯನ್ನು 250ಕ್ಕೆ ಇಳಿಸಲಾಗಿದೆ.
ಸ್ವಾತಂತ್ರ್ಯ ಉತ್ಸವದಲ್ಲಿ ಎನ್‌ಸಿಸಿ ಕೆಡೆಟ್‌ಗಳನ್ನ ಹೊರತುಪಡಿಸಿ ಯಾವುದೇ ಶಾಲಾಮಕ್ಕಳು ಭಾಗವಹಿಸುವಂತಿಲ್ಲ. ಕುಳಿತುಕೊಳ್ಳಲು ಬಳಸುತ್ತಿದ್ದ ಕಂಬಳಿ ಬದಲು ಕುರ್ಚಿಗಳನ್ನು ಹೆಚ್ಚಾಗಿ ಬಳಸಲಾಗತ್ತೆ. ಜೊತೆಗೆ ಪೊಲೀಸರು ಪಿಪಿಇ ಕಿಟ್ ಧರಿಸಿರುತ್ತಾರೆ ಎಂದು ಮೂಲಗಳು ತಿಳಿಸಿವೆ.
ಮಧ್ಯಾಹ್ನದ ವೇಳೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕೊರೊನಾ ವಾರಿಯರ್ಸ್‌ಗಳನ್ನು ಗಮನದಲ್ಲಿಟ್ಟಕೊಂಡು ಮೈದ್ಯಕೀಯ ವೃತ್ತಿಪರರು ಮತ್ತು ಆರೋಗ್ಯ ಕ್ಷೇತ್ರದ ಪ್ರಮುಖರಿಗೆ ಆಮಂತ್ರಣ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಪ್ರತಿವರ್ಷ ಕೆಂಪುಕೋಟೆಯಲ್ಲಿ ನಡೆಯುವ ಸಮಾರಂಭದಲ್ಲಿ ವಿದೇಶಿಗರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸುತ್ತಿರು. ಈ ಬಾರಿ ಪ್ರಧಾನ ಮಂತ್ರಿ ನೇರಂದ್ರ ಮೋದಿ ರಾಷ್ಟ್ರವನ್ನ ಉದ್ದೇಶಿಸಿ ಭಾಷಣ ಮಾಡುವಾಗ ಸುಮಾರು 250 ಆಹ್ವಾನಿತರು ಮಾತ್ರ ಹಾಜರಿರಲಿದ್ದಾರೆ ಎಂದು ದೆಹಲಿ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತೆ ಮೋನಿಕಾ ಭಾರದ್ವಾಜ್ ತಿಳಿಸಿದ್ದಾರೆ.
ಸಮಾರಂಭ ನಡೆಯುವುದು ಖಚಿತ. ಆದ್ರೆ, ಕಾರ್ಯಕ್ರಮದ ಸ್ವರೂಪ ಇನ್ನೂ ಅಂತಿಮವಾಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆಗಸ್ಟ್ 1 ರಿಂದ ಸಾರ್ವಜನಿಕರಿಗೆ ಕೆಂಪುಕೋಟೆ ಪ್ರವೇಶ ನಿಷೇಧಿಸಲಾಗುತ್ತದೆಯಂತೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?