Featured
ಕೊರೊನಾಕ್ಕೆ ಭಾರತದ ಇಂಜೆಕ್ಷನ್- ಮುಂದಿನ ವಾರದಿಂದ ಟ್ರಯಲ್ಗೆ ಬರಲಿದೆ “ಕೋವಾಕ್ಸಿನ್”- ಆಗಸ್ಟ್ 15ರಂದೇ ಲಸಿಕೆಗೆ ಗ್ರೀನ್ಸಿಗ್ನಲ್
![](https://risingkannada.com/wp-content/uploads/2020/07/Covaxin.jpg)
ರೈಸಿಂಗ್ ಕನ್ನಡ:
![](https://risingkannada.com/wp-content/uploads/2020/07/ASTIN-BAND-6-1024x255.jpg)
ಕೊರೊನಾ ಮಹಾಮಾರಿಯನ್ನು ತಡೆಯಲು ಇನ್ನಿಲ್ಲದ ಕಸರತ್ತುಗಳು ನಡೆಯುತ್ತಿವೆ. ಸರಕಾರ ಸೋಶಿಯಲ್ ಡಿಸ್ಟಾನ್ಸಿಂಗ್, ಮಾಸ್ಕ್, ಸ್ಯಾನಿಟೈಸರ್ ಬಳಸಿ ಅಂತ ಪದೇ ಪದೇ ಹೇಳುತ್ತಿದೆ. ಈ ಮಧ್ಯೆ ಭಾರತದ ವೈದ್ಯಲೋಕ ಕೊರೊನಾಕ್ಕೆ ಆದಷ್ಟು ಬೇಗ ಲಸಿಕೆ ಕಂಡುಹಿಡಿಯಬೇಕು ಅನ್ನುವ ಹಠಕ್ಕೆ ಬಿದ್ದಿದೆ. ಭಾರತವೇ ಅಭಿವೃದ್ಧಿ ಪಡಿಸಿರುವ “ಕೋವಾಕ್ಸಿನ್” ಲಸಿಕೆಯ ಪ್ರಯೋಗಕ್ಕೆ ತುರ್ತು ಅನುಮೋದನೆ ನೀಡುವಂತೆ ICMR ದೇಶದ 12 ಪ್ರಮುಖ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದಲ್ಲಿ ಭಾರತ್ ಬಯೋಟೆಕ್ ಈ ಲಸಿಕೆಯನ್ನು ತಯಾರು ಮಾಡಿದೆ. ಸ್ವಾತಂತ್ರ್ಯಾ ದಿನ ಆಗಸ್ಟ್ 15ರಂದು ICMR ಮತ್ತು ಭಾರತ್ ಬಯೋಟೆಕ್ ಜಂಟಿಯಾಗಿ ಈ ಔಷಧವನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ ಅನ್ನುವ ಸುದ್ದಿ ಎಲ್ಲೆಡೆ ಓಡಾಡುತ್ತಿದೆ.
ಇನ್ನು ICMR ಕೂಡ ಫಾಸ್ಟ್ ಟ್ರ್ಯಾಕ್ ಕ್ಲಿನಿಕಲ್ ಟ್ರಯಲ್ ಅಳವಡಿಸಲು ನಿರ್ಧರಿಸಿದೆ. ಮುಂದಿನ ವಾರ ಅಂದ್ರೆ ಜುಲೈ 7ರಿಂದ ಕ್ಲಿನಿಕಲ್ ಟ್ರಯಲ್ ಪ್ರಕ್ರಿಯೆ ಆರಂಭವಾಗಲಿದೆ.
ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ICMR ಮತ್ತು ಭಾರತ್ ಬಯೋಟೆಕ್ ಕಂಪನಿಗಳು ಜಂಟಿಯಾಗಿ ಈ ಲಸಿಕೆಯನ್ನು ಪ್ರಯೋ ಮಾಡುತ್ತಿವೆ. ಇದು ಭಾರತದಲ್ಲಿ ಅಭಿವೃದ್ಧಿ ಪಡಿಸಲಾದ ಮೊತ್ತ ಮೊದಲ ಲಸಿಕೆಯಾಗಿರುವುದರಿಂದ ಉತ್ತಮ ಮಟ್ಟದ ಮೇಲ್ವಿಚಾರಣೆ ಜೊತೆಗೆ ಟ್ರಯಲ್ ಕೂಡ ನಡೆಯುತ್ತಿದೆ. ಹೀಗಾಗಿ ದೇಶದ 12 ಪ್ರಮುಖ ಆಸ್ಪತ್ರೆಗಳಲ್ಲಿ “ಕೋವಾಕ್ಸಿನ್” ತುರ್ತಾಗಿ ಪ್ರಯೋಗ ನಡೆಯಲಿದೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಕರ್ನಾಟಕದಲ್ಲಿ ಕೊರೋನಾ ಮಹಾ ಸ್ಫೋಟ. ದೆಹಲಿ ಮೀರಿಸುತ್ತಾ ಬೆಂಗಳೂರು.?
ಅಕ್ಟೋಬರ್ ಬಳಿಕ ರಾಜ್ಯದಲ್ಲಿ ಮತ್ತೆ ಕೊರೋನಾ ಏರಿಕೆ : ಒಮಿಕ್ರಾನ್ ಅಲರ್ಟ್..!