Featured
ವಿಶ್ವವನ್ನೇ ಕಂಗೆಡಿಸಿದೆ ಕೊರೊನಾ ವೈರಸ್- ಭಾರತದಲ್ಲಿ 8 ಲಕ್ಷ ದಾಟಿದ ಕೊರೊನಾ ಪಾಸಿಟಿವ್ ಕೇಸ್
ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಮಹಾಮಾರಿ ಕೊರೊನಾ ಭಾರತದಲ್ಲಿ ತನ್ನ ವೇಗವನ್ನು ಹೆಚ್ಚಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗ್ತಿದೆ. ಸರ್ಕಾರಗಳು ಕೋವಿಡ್19 ಸೋಂಕು ತಡೆಯಲು ನಡೆಸುತ್ತಿರುವ ಎಲ್ಲಾ ಕಾರ್ಯಗಳು ಅಂದುಕೊಂಡಷ್ಟು ಕೆಲಸ ಮಾಡುತ್ತಿಲ್ಲ. ಈ ಮಧ್ಯೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಕಳೆದ 24ಗಂಟೆಗಳಲ್ಲಿ ಭಾರತದಲ್ಲಿ ಒಟ್ಟು 2,82,511 ಕೋವಿಡ್19 ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ತಿಳಿಸಿದೆ.
ICMR ಮಾಹಿತಿಯಂತೆ ದಿನದಿಂದ ದಿನಕ್ಕೆ ಕೋವಿಡ್ ಪರೀಕೆಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚು ಮಾಡಲಾಗುತ್ತಿದೆ. ಜುಲೈ 10ರ ತನಕ ಭಾರತದಲ್ಲಿ ಒಟ್ಟು 1,13,07,002 ಕೋವಿಡ್19 ಟೆಸ್ಟ್ ಮಾಡಲಾಗಿದೆ. ಶುಕ್ರವಾರದ ಒಂದೇ ದಿನ ಭಾರತದಲ್ಲಿ ಕೋವಿಡ್19 ಸೋಂಕಿತರ ಸಂಖ್ಯೆ 27114ಕ್ಕೆ ಏರಿಕೆ ಆಗಿದೆ. ಭಾರತದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 8 ಲಕ್ಷದ ಗಡಿ ದಾಟಿದ್ದು ಸದ್ಯಕ್ಕೆ ಇದು 8,20,916 ಮುಟ್ಟಿದೆ.
ಸಮಾಧಾನಕರ ವಿಷಯ ಅಂದ್ರೆ ಭಾರತದ ಜನಸಂಖ್ಯೆಗೆ ಹೋಲಿಸಿದ್ರೆ ಕೊರೊನಾ ಸೋಂಕಿತರ ಪ್ರಮಾಣ ಕಡಿಮೆ ಇದೆ. ಇದರ ಜೊತೆಗೆ ಕೊರೊನಾದಿಂದ ಭಾರತದಲ್ಲಿ ಆಗಿರುವ ಸಾವಿನ ಪ್ರಮಾಣ ಇಡೀ ವಿಶ್ವದಲ್ಲೇ ಕಡಿಮೆ ಇದೆ. ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ ಪ್ರತೀ 10 ಲಕ್ಷ ಜನಸಂಖ್ಯೆಯ ಪೈಕಿ 505.37 ಜನರಿಗೆ ಕೊರೊನಾ ಸೋಂಕಿದೆ. ಜಾಗತಿಕ ಸರಾಸರಿಯಲ್ಲಿ ಪ್ರತಿ 10ಲಕ್ಷಕ್ಕೆ ಇದರ ಪ್ರಮಾಣ 1,453.25ರಷ್ಟಿದೆ. ಚಿಲಿಯಲ್ಲಿ ಪ್ರತೀ 10ಲಕ್ಷ ಜನರ ಪೈಕಿ 15,459.8 ಜನರಿಗೆ ಕೊರೊನಾ ಕಾಣಿಸಿಕೊಂಡಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?