Featured
#HowdyModi : ಮೋದಿ ಮತ್ತು ಟ್ರಂಪ್ರನ್ನೇ ಬೆರಗು ಮಾಡಿದ ಕರ್ನಾಟಕದ ಹುಡುಗ..! ಮೋದಿ, ಟ್ರಂಪ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದು ಹೇಗೆ..? – EXCLUSIVE
![](https://risingkannada.com/wp-content/uploads/2019/09/WhatsApp-Image-2019-09-23-at-11.24.06-PM.jpeg)
ರೈಸಿಂಗ್ ಕನ್ನಡ ಸ್ಪೆಷಲ್ : ಇಡೀ ಪ್ರಪಂಚ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಹೂಸ್ಟನ್ನಲ್ಲಿ ಮಾಡಿದ ಮೋಡಿ ಬಗ್ಗೆ ಮಾತಾಡ್ತಿದೆ. ಆದ್ರೆ, ಹೂಸ್ಟನ್ನಲ್ಲೇ ಕನ್ನಡದ ಹುಡುಗ, ಅದರಲ್ಲೂ 13 ವರ್ಷದ ಬಾಲಕ ಮೋದಿಯನ್ನೇ ಮೋಡಿ ಮಾಡಿದ್ದಾನೆ. ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಸೆಲ್ಫಿ ತೆಗೆದುಕೊಂಡು, ಇಡೀ ಜಗತ್ತನ್ನೇ ಬೆರಗು ಮಾಡಿದ್ದಾನೆ.
ಹೀಗೆ ಮೋದಿ ಹಾಗೂ ಟ್ರಂಪ್ ಜೊತೆ ಸೆಲ್ಫಿಗೆ ಫೋಸ್ ಕೊಡ್ತಿರೋ ಈ ಹುಡುಗನ ಹೆಸರು ಸಾತ್ವಿಕ್ ಹೆಗ್ಡೆ. ಇವತ್ತು ಇಡೀ ಜಗತ್ತಿನ ಜನ ಮೋದಿ ಬಗ್ಗೆ ಮಾತಾಡ್ತಿದ್ರೆ, ಈ ಹುಡುಗ ಯಾರು..? ಮೋದಿ ಮತ್ತು ಟ್ರಂಪ್ ಜೊತೆ ಸೆಲ್ಫೆ ತೆಗೆದುಕೊಂಡಿದ್ದು ಹೇಗೆ.? ಇದು ಸಾಧ್ಯನಾ ಅನ್ನೋ ಚರ್ಚೆಗೆ ಕಾರಣವಾಗಿದ್ದಾನೆ. ಮೊದಲು ಸಾತ್ವಿಕ್ ಸೆಲ್ಫಿ ಹೇಗೆ ತೆಗೆದುಕೊಂಡ್ರು ಅಂತ ಹೇಳ್ತೀವಿ.. ಆಮೇಲೆ ಆ ಹುಡುಗನ ವಿವರ ನೋಡೋಣ.
ಮೋದಿ ಮತ್ತು ಟ್ರಂಪ್ ಹೂಸ್ಟನ್ ಸ್ಟೇಡಿಯಂನಲ್ಲಿ ಜೊತೆಯಾಗಿ ನಡೆದುಕೊಂಡ್ರು ಬರ್ತಿದ್ರು. ಇನ್ನೇನು ಅವರ ವಾಕ್ ಮುಗಿದು, ಸ್ಟೇಜ್ ಮೇಲೆ ಬರಬೇಕಿತ್ತು. ಸರತಿ ಸಾಲಿನಲ್ಲಿ ಕೊನೆಯಲ್ಲಿ ನಿಂತಿದ್ದ ವೈಟ್ ಡ್ರೆಸ್ ಹಾಕಿದ್ದ ಸಾತ್ವಿಕ್ ಹೆಗ್ಡೆ, ಮೊಬೈಲ್ ಹಿಡ್ಕೊಂಡು ಮುಂದೆ ಬಂದ.. ಮೊಬೈಲ್ ಕೈಯಲ್ಲಿ ಹಿಡ್ಕೊಂಡು, ಇಬ್ಬರೂ ನಾಯಕರನ್ನ ಸೆಲ್ಫಿ ಪ್ಲೀಸ್ ಎಂದೆ ಬಿಟ್ಟ..
ಮೋದಿ ಮತ್ತು ಟ್ರಂಪ್ಗೆ ಅಚ್ಚರಿ. ಅಲ್ಲಿದ್ದ ಹುಡುಗಿಯರು, ಕಾರ್ಯಕ್ರಮ ಆಯೋಜರಿಗೆ ಶಾಕ್ ಆಯ್ತು. ಆದ್ರೆ, ಮೋದಿ ಮತ್ತು ಟ್ರಂಪ್ ಇಬ್ಬರೂ ಸೇರಿ ಕರ್ನಾಟಕದ ಹುಡುಗನ ಸೆಲ್ಫಿಗೆ ಫೋಸ್ ಕೊಟ್ರು. ಈ ಫೋಟೋ ಹಾಗೂ ವಿಡಿಯೋ ಈಗ ಇಂಟರ್ನೆಟ್ ಸೆನ್ಸೇಷನಲ್ ಆಗಿದೆ. ಆದ್ರೆ, ಆ ಹುಡುಗ ಯಾರು ಅನ್ನೋದು ಈಗ ಗೊತ್ತಾಗಿದೆ.
ಸಾತ್ವಿಕ್ ಕುಟುಂಬ ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಿರಸಿಯವರು. 17 ವರ್ಷಗಳ ಹಿಂದೆ ಅಮೆರಿಕದ ಟೆಕ್ಸಾಸ್ಗೆ ಬಂದು ನೆಲೆಸಿದ್ದಾರೆ. ಸಾತ್ವಿಕ್ ತಂದೆ, ಪ್ರಭಾಕರ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ತಾಯಿ ಮೇಧಾ, ಶಾಲಾ ಶಿಕ್ಷಕಿ.
ಸಾತ್ವಿಕ್ ಹೆಗ್ಡೆ, ಮೋದಿ ಹಾಗೂ ಟ್ರಂಪ್ ಜೊತೆ ಫೋಟೋ ತೆಗೆದುಕೊಂಡ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದ್ದೇ, ತಡ ಆ ಹುಡುಗ ಯಾರು ಅನ್ನೋ ಚರ್ಚೆ ಶುರುವಾಯ್ತು. ಹುಡುಕಾಟ ಶುರುವಾಯ್ತು. ಅದು ಕೊನೆಗೆ ಕರ್ನಾಟಕಕ್ಕೆ ಬಂದು ನಿಂತಿದೆ. ಸಾತ್ವಿಕ್ ಅವರ ಅಂಕಲ್ ಈ ಕುರಿತು ಮಾತ್ನಾಡಿದ್ದು, ಸಾತ್ವಿಕ್ ನೋಡಿ ತುಂಬ ಖುಷಿಯಾಯ್ತು.
ಸಾತ್ವಿಕ್ ತುಂಬಾ ಶಿಸ್ತು ಬದ್ಧ ಹುಡುಗ. ಏನೇ ಅನ್ಕೊಂಡ್ರು, ಸರಿಯಾದ ಸಮಯಕ್ಕೆ ಮಾಡಿ ಮುಗಿಸ್ತಾನೆ. ಅವನ ಜೊತೆ ನಾವು ವಾದವೇ ಮಾಡಲ್ಲ. ನಮ್ಮ ಕುಟುಂಬದ ಜ್ಞಾನ ಸಾತ್ವಿಕ್ ಎಂದು ಅವರ ಅಂಕಲ್ ಗಣೇಶ್ ಹೆಗ್ಡೆ ಕೊಂಡಾಡಿದ್ದಾರೆ.
ಒಟ್ನಲ್ಲಿ ಮೋದಿ ಮತ್ತು ಟ್ರಂಪ್ ಜಗತ್ತನ್ನೇ ಬೆರಗು ಮಾಡಿದ್ರೆ, ಕರ್ನಾಟಕದ ಹುಡುಗ ಸಾತ್ವಿಕ್, ಮೋದಿ ಹಾಗೂ ಟ್ರಂಪ್ ಅವರನ್ನೇ ಬೆರಗು ಮಾಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?