Featured
ಹೊಸಕೋಟೆ ಸ್ವಚ್ಛತೆಗೆ ಶರತ್ ಬಚ್ಚೇಗೌಡ ಸಂಕಲ್ಪ : MLA ಕಾರ್ಯಕ್ಕೆ ಶ್ಲಾಘನೆ
![](https://risingkannada.com/wp-content/uploads/2021/01/WhatsApp-Image-2021-01-06-at-8.51.54-AM-1.jpeg)
ಹೊಸಕೋಟೆ : ಶಾಸಕ ಶರತ್ ಬಚ್ಚೇಗೌಡ ಅವರ ಸ್ವಚ್ಛತಾ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಯೆಸ್, ಪ್ರತಿ ತಿಂಗಳ ಮೂದಲನೇ ಭಾನುವಾರ ಸ್ವಚ್ಚ ಹೊಸಕೋಟೆಯ ಸಂಕಲ್ಪ ಅಂಗವಾಗಿ ವಿಶೇಷ ಸ್ಪಚ್ಛತಾ ಕಾರ್ಯ ನಡೆಯುತ್ತೆ. ಪಾಳು ಬಿದ್ದ ಕಲ್ಯಾಣಿ, ದೇವಾಲಯಗಳ ಸ್ವಚ್ಛತಾ ಕೆಲಸವನ್ನ ಟೀಮ್ ಶರತ್ ಬಚ್ಚೇಗೌಡ ಮಾಡ್ತಿದೆ.
ಇತ್ತೀಚೆಗಷ್ಟೇ ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದ ಬಸವೇಶ್ವರ ದೇವಸ್ಥಾನದ ಕಲ್ಯಾಣಿ ಸ್ವಚ್ಛತಾ ಕಾರ್ಯ ನಡೀತು . ಶರತ್ ಬಚ್ಚೇಗೌಡರ ಶ್ರೀಮತಿ ಪ್ರತಿಭಾ ಶರತ್ ಅವರ ನೇತೃತ್ವದಲ್ಲಿ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಟೀಮ್ ಶರತ್ ಬಚ್ಚೇಗೌಡ ತಂಡದ ಎಲ್ಲಾ ಸದಸ್ಯರು, ತಾವರೆಕೆರೆ ಗ್ರಾಮಸ್ಥರ ಸಹಕಾರದಿಂದ ಕಲ್ಯಾಣಿಯನ್ನ ಯಶಸ್ವಿಯಾಗಿ ಸ್ವಚ್ಛಗೊಳಿಸಿದ್ರು.
ಪ್ರತಿ ತಿಂಗಳ ಮೊದಲ ಭಾನುವಾರ ಈ ರೀತಿ ವಿಶೇಷ ಸ್ವಚ್ಛತಾ ಕಾರ್ಯ ಮಾಡ್ತಿರೋದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. ವಿಶೇಷವಾಗಿ ಶಾಸಕರಾದ ಶರತ್ ಹಾಗೂ ಅವರ ಶ್ರೀಮತಿ ಪ್ರತಿಭಾ ಅವರ ಕಾರ್ಯಕ್ಕೆ ಎಲ್ಲರೂ ಶಹಬ್ಬಾಸ್ ಗಿರಿ ಕೊಡ್ತಿದ್ದಾರೆ. ಇದೇ ರೀತಿ ಸ್ವಚ್ಛ ಹೊಸಕೋಟೆ ಅಭಿಯಾನ ಮುಂದುವರೆಯಲಿ ಅಂತ ಜನ ಆಶಯ ವ್ಯಕ್ತಪಡಿಸ್ತಿದ್ದಾರೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?