Featured
ಅಯೋಧ್ಯೆಗೆ ತುಮಕೂರಿನ ಮಣ್ಣು ಹೋಗಾಯಿತು, ಈಗ ನಾಮದ ಚಿಲುಮೆಯಿಂದ ನೀರು..!
ರೈಸಿಂಗ್ ಕನ್ನಡ:
ಕೆ.ಆರ್.ಬಾಬು, ತುಮಕೂರು:
ಆಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ಆಗಸ್ಟ್5ಕ್ಕೆ ನಡೆಯಲಿದೆ. ದೇಶದ ಖ್ಯಾತನಾಮರೆಲ್ಲಾ ಆಯೋಧ್ಯೆ ಭೂಮಿ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ದೇಶದ ಮೂಲೆ ಮೂಲೆಯಿಂದ ರಾಮ ಮಂದಿರ ನಿರ್ಮಾಣಕ್ಕೆ ಮಣ್ಣು, ನೀರನ್ನು ಶ್ರೀರಾಮನ ಭಕ್ತರು ತೆಗೆದುಕೊಂಡು ಹೋಗುತ್ತಿದ್ದಾರೆ. ಇದೀಗ ಸ್ವತಃ ಶ್ರೀರಾಮನ ಬಾಣದಿಂದ ಚಿಮ್ಮಿದ ಚಿಲುಮೆಯ ನೀರನ್ನು ರಾಮಮಂದಿರ ನಿರ್ಮಾಣಕ್ಕೆ ಕಳುಹಿಸಲು ಸಿದ್ದತೆ ನಡೆದಿದೆ. ಹಿಂದೂ ಸಾಮ್ರಾಟ್ ಧರ್ಮ ಸೇನೆ ಮುಖ್ಯಸ್ಥ ಮಧುಗಿರಿಯ ಅತುಲ್ ಕುಮಾರ್ ಸಬರವಾಲ್ ಅವರು ನಾಮದ ಚಿಲುಮೆ ನೀರನ್ನು ತ್ರಾಮದ ಪಾತ್ರೆಯಲ್ಲಿ ಸಂಗ್ರಹಿಸಿ ಅಯೋಧ್ಯೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ತುಮಕೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಬರುವ ಈ ನಾಮದ ಚಿಲುಮೆಗೆ ಬೆಳಗ್ಗೆ ಸ್ವಾಮೀಜಿಗಳು ಹಾಗೂ ಹಿಂದೂ ಧರ್ಮದ ಕಾರ್ಯಕರ್ತರು ಭೇಟಿ ನೀಡಿ, ಪೂಜೆ ಸಲ್ಲಿಸಿ ಪಾತ್ರೆಯಲ್ಲಿ ನೀರು ಸಂಗ್ರಹಿಸಿಕೊಂಡು ಹೋಗಿದ್ದಾರೆ. ನೀರಿನೊಂದಿಗೆ ವಿಮಾನದ ಮೂಲಕ ಪ್ರಯಣ ಬೆಳೆಸಿ, ಅಯೋಧ್ಯೆ ತಲುಪಲಿರುವ ಮಧುಗಿರಿ ಮೋದಿ ಅಲಿಯಾಸ್ ಅತುಲ್ ಕುಮಾರ, ರಾಮಮಂದಿರದ ನಿರ್ಮಾಣಕ್ಕೆ ಈ ನೀರು ನೀಡಲಿದ್ದಾರೆ.
ನಾಮದ ಚಿಲುಮೆಗೆ ಬಂದಿದ್ದ ಶ್ರೀರಾಮ..!
ತುಮಕೂರಿನ ದೇವರಾಯದುರ್ಗ ಹಾಗೂ ನಾಮದಚಿಲುಮೆ ಅರಣ್ಯದ ಮಧ್ಯದಲ್ಲಿ ಇರುವ ನಾಮದ ಚಿಲುಮೆಯ ನೀರಿಗೆ ಪೌರಾಣಿಕ ಹಿನ್ನೆಲೆಯಿದೆ. ವನವಾಸದ ಸಂದರ್ಭದಲ್ಲಿ ಸೀತಾ ಸಮೇತರಾದ ಶ್ರೀರಾಮ ಈ ನೆಲದಲ್ಲಿ ನೆಲೆಸಿದ್ದರು ಎಂಬ ನಂಬಿಕೆ ಈ ಭಾಗದಲ್ಲಿ ದಟ್ಟವಾಗಿದೆ. ಒಂದು ದಿನ ಶ್ರೀರಾಮ ಅವರು ಹಣೆಗೆ ತಿಲಕ ಇಡಲು ನೀರು ಸಿಗದ ಕಾರಣ ತನ್ನ ಬಾಣದಿಂದ ಬಂಡೆಗೆ ಹೊಡೆಯಲಾದ ಬಾಣದ ಪರಿಣಾಮ, ಕಲ್ಲಿನ ಮಧ್ಯದಿಂದ ನೀರು ಚಿಲುಮೆಯಂತೆ ಹರಿದು ಬಂದಿದೆ. ಅದೇ ನೀರಿನಲ್ಲಿ ಶ್ರೀ ರಾಮ ಹಣೆಗೆ ತಿಲಕ ಇಟ್ಟುಕೊಂಡಿದ್ದಾರೆ. ಅಂದಿನಿಂದ ಈ ಜಾಗಕ್ಕೆ ನಾಮದ ಚಿಲುಮೆ ಎಂಬ ಹೆಸರು ಬಂದಿದೆ. ಇಂದಿಗೂ ಕೂಡ ಕಲ್ಲು ಬಂಡೆಯಿಂದ ಸದಾ ನೀರು ಜಿನುಗುತ್ತಿರುತ್ತದೆ. ಇದೀಗ ಈ ಚಿಲುಮೆ ನೀರನ್ನೇ ಅಯೋಧ್ಯೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಇದರ ಜೊತೆಗೆ ಕಾವೇರಿ, ಪಂಪಾ, ಉಕ್ಕಗಾತ್ರಿ ಸೇರಿದಂತೆ ಹಲವು ಪುಣ್ಯನದಿಗಳಿಂದಲೂ ನೀರು ಸಂಗ್ರಹಿಸಿ ತೆಗೆದುಕೊಂಡು ಹೋಗಲಾಗುತ್ತಿದೆ. ಒಟ್ಟಿನಲ್ಲಿ ರಾಮ ಭಕ್ತರಿಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದೇ ಸಂತಸದ ಸಂಗತಿ.
You may like
ಆಯುಧಗಳನ್ನು ಸ್ವಚ್ಛಗೊಳಿಸುವಾಗ ಪ್ರಮಾದ : ಎಕೆ-47ನಿಂದ ಗುಂಡು ಹಾರಿಸಿಕೊಂಡ ಕಾಮಾಂಡರ್
ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ ಪ್ರಕರಣ : ಅಮಿತ ಶಾಗೆ ಪತ್ರ ಬರೆದ ಶಶಿಕಲಾ ಜೊಲ್ಲೆ
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಅಯೋಧ್ಯವರೆಗೂ ಪಾದಯಾತ್ರೆ ಮುಗಿಸಿ ಮರಳಿದ ರಾಮಭಕ್ತನಿಗೆ ಪಾದಪೂಜೆ