Featured
ಮಳೆ – ಪ್ರವಾಹಕ್ಕೆ ನಲುಗಿದ ಕರ್ನಾಟಕ : ಅಪಾಯ ಮೀರಿ ಹರಿಯುತ್ತಿದೆ ಕುಮಾರಧಾರ, ನೇತ್ರಾವತಿ

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್ :
ಕಳೆದ ಕೆಲವು ದಿನಗಳಿಂದ ಮಲೆನಾಡು ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಮತ್ತು ಕುಮಾರ ಧಾರ ನದಿ ಅಪಾಯ ಮೀರಿ ಹರಿದು ಆತಂಕ ಹುಟ್ಟಿಸಿದೆ.
ಬಂಟ್ವಾಳದಲ್ಲೂ ನೇತ್ರವತಿ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. 8.5 ಮೀಟರ್ ಇದ್ದ ನೀರಿನ ಮಟ್ಟ ಈಗ 9 ಮೀಟರ್ಗೆ ಏರಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. 
ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೂಕುಸಿತದಂತ ಘಟನೆಗಳು ನಡೆದಿವೆ.
ಭಾರೀ ಮಳೆ ಮತ್ತು ಪ್ರವಾಹದಿಂದ ರಾಜ್ಯದ 100 ರಸ್ತೆಗಳು ಮತ್ತು ಸೇತುವೆಗಳು ಹಾಳಾಗಿವೆ.
ಭೂಕುಸಿದಂತ ಘಟನೆಗಳು ನಡೆಯುವ ದಕ್ಷಿಣ ಕನ್ನಡ ಕೊಡಗು ಜಿಲ್ಲೆಗಳಲ್ಲಿ 15 ರಿಂದ 20 ಕಿಲೋ ಮೀಟರ್ ಅಂತರದಲ್ಲಿ ಜೆಸಿಬಿಗಳನ್ನ ಇಡಲಾಗಿದೆ. ಭೂಕುಸಿತ, ಮರಗಳು ಧರೆಗುರುಳಿದರೆ ತಕ್ಷಣವೇ ತೆರೆವುಗೊಳಿಸುವುದಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಗುರು ಪ್ರಸಾದ್ ಮಾಹಿತಿ ನೀಡಿದ್ದಾರೆ.
You may like

ಕರ್ನಾಟಕ ಸಾಬೂನು,ಮಾರ್ಜಕ ನಿಯಮಿತ ವತಿಯಿಂದ ನೆರೆ ಸಂತ್ರಸ್ಥರಿಗೆ 60 ಸಾವಿರ ಶುಚಿ ಕಿಟ್ ರವಾನೆ

ಬಳ್ಳಾರಿಯಲ್ಲಿ ಸಿಡಿಲು ಬಡಿದು ಜಾನುವಾರುಗಳ ಸಾವು

ನೀರಿನಲ್ಲಿ ಕೊಚ್ಚಿ ಹೋದ ವೃದ್ಧ: ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರು

ವಿಜಯಪುರದಲ್ಲಿ ಭಾರೀ ಮಳೆ: 10 ಹೆಚ್ಚು ಮನೆ ಕುಸಿತ: ರಾತ್ರಿಯಿಡೀ ಜನರ ಪರದಾಟ

ದಾವಣಗೆರೆಯಲ್ಲಿ ಪ್ರವಾಹ ಭೀತಿ: ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ

ಅರಬ್ಬಿ ಸಮುದ್ರದಲ್ಲಿ ಗಾಳಿ ಅಬ್ಬರ : ಗಾಳಿ ಹೊಡೆತಕ್ಕೆ ದಡ ಸೇರಿದ ಎರಡು ಬೋಟ್
















