Featured
ಅತ್ತ ಕೊರೊನಾ…, ಇತ್ತ ವರುಣಾ..! – ಕಂಗಾಲಾದ ಯಾದಗಿರಿ ಅನ್ನದಾತ..!

ರೈಸಿಂಗ್ ಕನ್ನಡ :
ಪ್ರತಿನಿಧಿ, ದುರ್ಗೇಶ್ ಮಂಗಿಹಾಳ, ಯಾದಗಿರಿ :
ಒಂದೆಡೆ ಕೊರೊನಾದಿಂದ ಜಿಲ್ಲೆಯ ಜನರು ನಲುಗಿ ಹೋಗಿದ್ರೆ, ಮತ್ತೊಂದೆಡೆ ಕೊರೊನಾಗಿಂತ ನಾನೇನು ಕಮ್ಮಿಯಿಲ್ಲ ಎನ್ನುವಂತೆ ವರುಣರಾಯ ಸತತ ಮೂರು ಗಂಟೆಗಳ ಕಾಲ ಅಬ್ಬರಿಸಿದ್ದಾನೆ.

ಮಳೆರಾಯನ ಅಬ್ಬರಕ್ಕೆ ರಸ್ತೆ, ಜಮೀನು ಕೊಚ್ಚಿ ಹೋಗಿವೆ. ನದಿಯಂತೆ ಜಮೀನಿನಲ್ಲಿ ಮಳೆ ನೀರು ಹರಿಯುತ್ತಿದೆ. ರೈತರು ಕೆಲಸ ಮುಗಿಸಿ ಊರಿಗೆ ತೆರಳದಂತ ಪರಿಸ್ಥಿತಿ ಯಾದಗಿರಿ ತಾಲ್ಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಸೃಷ್ಠಿಯಾಗಿದೆ.

ಯಾದಗಿರಿ ಜಿಲ್ಲೆಯಾದ್ಯಂತ ಮಧ್ಯಾಹ್ನ 2 ರಿಂದ 5 ಗಂಟೆ ವರೆಗೆ ಬಿಡುವಿಲ್ಲದೆ ಮಳೆ ಸುರಿದಿದ್ದು. ಇದರ ಪರಿಣಾಮ ಜಿಲ್ಲೆಯ ಯಾದಗಿರಿ, ಗುರುಮೀಠಕಲ್, ಶಹಾಪುರ ತಾಲ್ಲೂಕಿನ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.

ಇನ್ನೂ ಯಾದಗಿರಿ ತಾಲ್ಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಮಳೆ ರುದ್ರ ನರ್ತನಕ್ಕೆ ನೀರು ನದಿಯಂತೆ ಹರಿಯುತ್ತಿವೆ. ಜಮೀನಿನ ಕೆಲಸಕ್ಕೆ ಬಂದಿದ ರೈತರು ಮರಳಿ ಮನೆಗೆ ತೆರಳದಕ್ಕೂ ಕೆಲವು ಸಮಯ ಸಾಧ್ಯವಾಗಲಿಲ್ಲ.
ಮಹಾಮಳೆಗೆ ಜಮೀನಿನಲ್ಲಿ ನಾಟಿ ಮಾಡಿದ್ದ ಭತ್ತ, ಹೆಸರು, ಇತರ ಬೆಳೆಗಳು ಮಳೆ ನೀರಿಗೆ ಕೊಚ್ಚಿಹೋಗಿವೆ. ಇನ್ನು ಜಿಲ್ಲೆಯ ಹಲವೆಡೆ ತಗ್ಗು ಪ್ರದೇಶಗಳಿಗೆ ಮಳೆ ನುಗ್ಗಿದ್ದು ಜನ ಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಒಟ್ಟಿನಲ್ಲಿ ಕೊರೋನಾ ದಾಳಿಯಿಂದ ತತ್ತರಿಸಿದ ಜನತೆಗೆ ಮಳೆರಾಯ ಮತ್ತೊಮ್ಮೆ ಮರ್ಮಘಾತ ನೀಡಿದ್ದಾನೆ.

You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















