Featured
ತುಂಬೆ ಗಿಡದ ತುಂಬಾ ತುಂಬಿದೆ ಆಯುರ್ವೇದ ಔಷಧ..!
ಆಯುರ್ವೇದ ಮನೆ ಔಷಧಿಗಳು ಪ್ರತಿಯೊಬ್ಬನ ಜೀವನದಲ್ಲಿ ಉಪಯೋಗಕ್ಕೆ ಬಂದಿರುತ್ತದೆ. ಹೀಗಾಗಿ ಪುರಾಣಿಕ ಆಯುರ್ವೆದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ಮನೆ ಮದ್ದುಗಳನ್ನು ಹೇಳಿಕೊಡುತ್ತಿದೆ. ದೇಹವನ್ನು ಕಾಡುತ್ತಿರುವ ಕಾಯಿಲೆಗಳನ್ನು ಸುಲಭವಾಗಿ ದೂರ ಮಾಡಲು ಔಷಧಿಗಳನ್ನು ತಿಳಿಸಿಕೊಡುತ್ತಿದೆ. ಇವತ್ತು ತುಂಬೆ ಗಿಡದ ಔಷಧೀಗು ಗುಣಗಳನ್ನು ಪುರಾಣಿಕ ಆಯುರ್ವೆದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ತಿಳಿಸಿಕೊಡುತ್ತಿದೆ.
ತುಂಬೆ ಗಿಡ 1ರಿಂದ 2 ಅಡಿ ಗಿಡವಾಗಿ ಬೆಳೆಯುತ್ತದೆ.. ಮೇ ಅವಧಿಯಲ್ಲಿ ಹೆಚ್ಚಾಗಿರುತ್ತದೆ. ಹಚ್ಚ ಹಸುರಾಗಿ, ಬಿಳಿಯ ಹೂವುಗಳು ತುಂಬೆ ಗಿಡದಲ್ಲಿ ಇರುತ್ತವೆ. ಕೃಷಿ ಪಾಲಿಗೆ ಇದು ಕಳೆ ಗಿಡ. ಆದ್ರೆ ಆಯುರ್ವೆದಲ್ಲಿ ತುಂಬೆ ಗಿಡದ ತುಂಬಾ ಔಷಧೀಯ ಗುಣಗಳಿದ್ದು ಶ್ರೇಷ್ಠ ಗಿಡವಾಗಿದೆ.
ವೈಜ್ಞಾನಿಕವಾಗಿ ತುಂಬೆ ಗಿಡಕ್ಕೆ Leucas aspera ಅನ್ನು ಹೆಸರಿದೆ. ಇದು ಯಾಮಿಯೊಕಿ ಸಸ್ಯ ಗಿಡದ ಸಾಲಿಗೆ ಸೇರಿದೆ. ಮಲೆಯಾಳಂನಲ್ಲಿ ತುಂಬ, ಸಂಸ್ಕೃತದಲ್ಲಿ ದ್ರೋಣ ಪುಷ್ಪ, ತೆಲುಗು ಭಾಷೆಯಲ್ಲಿ ತುಂಬ ಚೆಟ್ಟು ಹಾಗೂ ತಮಿಳಿನಲ್ಲಿ ಇದನ್ನು ತುಂಬ ಎಂದು ಕರೆಯುತ್ತಾರೆ. ತುಂಬೆ ಗಿಡ ಸುಮಾರು ಕಾಯಿಲೆಗಳಿಗೆ ರಾಮಬಾಣ. ಅಷ್ಟೇ ಅಲ್ಲ ಆಯುರ್ವೆದದಲ್ಲಿ 11 ಕಾಯಿಲೆಗೆ ಪರಿಪಕ್ವ ವಾದ ಮದ್ದನ್ನು ಕೂಡ ತುಂಬೆ ಗಿಡ ಒದಗಿಸಿಕೊಡುತ್ತದೆ.
ತುಂಬೆ ಗಿಡ ಜ್ವರ, ಮೂಲವ್ಯಾಧಿ, ಅಜೀರ್ಣ, ಹೊಟ್ಟೆ ಜಂತು ಹುಳ, ತಲೆನೋವು, ಮಧುಮೇಹ, ಮಂಗನ ಕಾಯಿಲೆ, ಉಬ್ಬಸ, ಕಾಮಾಲೆ, ಚರ್ಮರೋಗ, ಅರ್ಧ ತಲೆ ನೋವು ಇಂತಹ ಕಾಯಿಲೆಗಳಿಗೆ ಔಷಧವನ್ನು ನೀಡಬಲ್ಲ ದೊಡ್ಡ ಗುಣವನ್ನು ಹೊಂದಿದೆ. ಇವತ್ತು 2 ಕಾಯಿಲೆಗಳಿಗೆ ತುಂಬೆ ಗಿಡದಿಂದ ಹೇಗೆ ಮದ್ದು ತಯಾರಿ ಮಾಡಿಕೊಳ್ಳಬಹುದು ಅನ್ನುವುದನ್ನು ಪುರಾಣಿಕ ಆಯುರ್ವೆದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ತಿಳಿಸಿಕೊಡುತ್ತಿದೆ.
ಜ್ವರ:
ಅರ್ಧ ಹಿಡಿ ತುಂಬೆ ಸೊಪ್ಪು ರಸಕ್ಕೆ ಸ್ವಲ್ಪ ಮೆಣಸಿನಕಾಳಿನ ಪುಡಿ ಜೇನು ತುಪ್ಪ ಸೇರಿಸಿ ದಿನಕ್ಕೆ 3 ಬಾರಿ ಸೇವಿಸಬೇಕು. ಹೀಗೆ ಸೇವನೆ ಮಾಡುವುದರಿಂದ ಜ್ವರ ಕಡಿಮೆಯಾಗುತ್ತದೆ.
ಮೂಲವ್ಯಾಧಿ:
ಸ್ವಲ್ಪ ತುಂಬೆ ಸೊಪ್ಪಿನ ರಸಕ್ಕೆ ಅಷ್ಟೇ ಪ್ರಮಾಣ ಸುಣ್ಣದ ತಿಳಿನೀರು ಸೇರಿಸಿ 3 ಸಲ ಸೇವಿಸ ಬೇಕು. ಇದು ಫಿಷರ್ ಅಥವಾ ಮೂಲವ್ಯಾಧಿ ಅನ್ನುವ ಕಾಯಿಲೆಯನ್ನು ಅತಿಬೇಗನೆ ಶಮನ ಮಾಡುತ್ತದೆ.
ಆಯುರ್ವೇಧ ಔಷಧ ಹಾಗೂ ಅದನ್ನು ತಯಾರಿಸುವ ಬಗೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕೆಳಗಿನ ನಂಬರ್ ಅನ್ನು ಸಂಪರ್ಕಿಸಿ.
You may like
ಹರಾಜಿಗೂ ಮುನ್ನ ಸ್ಟಾರ್ ಕನ್ನಡಿಗರನ್ನ ಕೈಬಿಡಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್..?
ಭಾರತದಲ್ಲಿ 34 ಲಕ್ಷ ದಾಟಿದ ಕೊರೊನಾ ಕೇಸ್: 24 ಗಂಟೆಯಲ್ಲಿ 1,021 ಸಾವು
ವಿಶ್ವವಿದ್ಯಾಲಯಗಳು ಪರೀಕ್ಷೆ ನಡೆಸಬೇಕು- ಯುಜಿಸಿ ಸುತ್ತೋಲೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್
ಮೈದಾನಕ್ಕಿಳಿದ ರೆಡ್ ಆರ್ಮಿ: ಬ್ಲೂಪ್ರಿಂಟ್ ರೆಡಿ ಮಾಡಿದ ತ್ರಿಮೂರ್ತಿಗಳು…!
ಯಾದಗಿರಿಯಲ್ಲಿ ದಿಢೀರ್ರಾಗಿ ಜಿಲ್ಲಾಧಿಕಾರಿ ವರ್ಗಾವಣೆ: ನೂತನ ಜಿಲ್ಲಾಧಿಕಾರಿ ಡಾ. ರಾಗಾಪ್ರಿಯಾ ಅಧಿಕಾರ ಸ್ವೀಕಾರ
ಮತ್ತೆ ಭಾರತ-ಚೀನಾ ಯೋಧರ ಮುಖಾಮುಖಿ-ಪಾಕ್ ಸೈನಿಕರಿಂದಲೂ ಯುದ್ಧ ತಾಲೀಮು..!