Featured
ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಮ್ಯಾಚ್ ವಿನ್ನರ್ ಕನ್ನಡಿಗನಂತೆ – ಹೆಮ್ಮೆಯ ಕನ್ನಡಿಗನನ್ನ ಹೊಗಳಿದ ಹರ್ಭಜನ್ ಸಿಂಗ್..!

ರೈಸಿಂಗ್ ಕನ್ನಡ :
ಭಾರತೀಯ ಕ್ರಿಕೆಟ್‌ನಲ್ಲಿ ಅತೀ ದೊಡ್ಡ ಮ್ಯಾಚ್ ವಿನ್ನರ್ ಯಾರು ಅನ್ನೋ ಚರ್ಚೆ ಇದೀಗ ಎಲ್ಲೆಡೆ ಶುರುವಾಗಿದೆ. ಟೀಮ್ ಇಂಡಿಯಾ ಟರ್ಬನೇಟರ್ ಹರ್ಭಜನ್ ಸಿಂಗ್ ಈ ಕುರಿತು ಮನದಾಳವನ್ನ ಹಂಚಿಕೊಂಡಿದ್ದಾರೆ. ನಾ ಕಂಡ ಶ್ರೇಷ್ಠ ಮ್ಯಾಚ್ ವಿನ್ನರ್ ಕನ್ನಡಿಗ ಅನ್ನೋ ಸಂಗತಿಯನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಅಲ್ಲದೇ ತಾನು ಆ ಕ್ರಿಕೆಟಿಗನ ಜೊತೆಗೆ ತನ್ನ ವೃತ್ತಿ ಜೀವನದಲ್ಲಿ ಬಹಳ ಕಾಲ ಕಳೆದಿದ್ದೇನೆ. ಈ ಅವಕಾಶ ನನ್ನ ಪಾಲಿಗೆ ದೊರೆತ ಅದೃಷ್ಟವೆಂದು ನಾನು ಭಾವಿಸುತ್ತೇನೆ ಎಂದು ಭಜ್ಜಿ ತಿಳಿಸಿದ್ದಾರೆ. ಹಾಗಾದ್ರೆ, ಯಾರಪ್ಪಾ ಆ ಶ್ರೇಷ್ಠ ಕ್ರಿಕೆಟಿಗ, ಕನ್ನಡದ ಹೆಮ್ಮೆಯ ಮ್ಯಾಚ್ ವಿನ್ನರ್ ಅಂತೀರಾ. ನೋಡೋಣ ಬನ್ನಿ.
ನಿಜ, ಹರ್ಭಜನ್ ಸಿಂಗ್ ಹೇಳಿರೋ ಆ ಶ್ರೇಷ್ಠ ಕನ್ನಡಿಗ ಬೇರೆ ಯಾರೂ ಅಲ್ಲ, ಅವರೇ ಜಂಬೋ ಖ್ಯಾತಿಯ ಲೆಗ್ ಸ್ಪಿನ್ನರ್ ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ. ಭಾರತೀಯ ಕ್ರಿಕೆಟ್‌ನಲ್ಲಿ ಬಹುಕಾಲ ಸ್ಪಿನ್ ಜೋಡಿಯಾಗಿ ಗುರುತಿಸಿಕೊಂಡ ಆಟಗಾರರು ಕುಂಬ್ಳೆ ಮತ್ತು ಭಜ್ಜಿ. ಬೌಲರ್ ಒಬ್ಬ ಕೂಡ ಶ್ರೇಷ್ಠ ಮ್ಯಾಚ್ ವಿನ್ನರ್ ಆಗಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದೆ ಅನಿಲ್ ಕುಂಬ್ಳೆ ಎಂದು ಹರ್ಭಜನ್ ಸಿಂಗ್ ಹೊಗಳಿದ್ದಾರೆ.
You may like
ರಣಜಿ ಹಾಗೂ ದೇಶಿ ಪಂದ್ಯಾವಳಿ ನಿರ್ಲಕ್ಷಿಸಿದ್ದ ಐಯ್ಯರ್, ಕಿಶನ್ ಗೆ ಶಾಕ್..!
ಭಾರತ ಸರಣಿ ಗೆದ್ದ ಸಂತಸ ಹಂಚಿಕೊಂಡ ವಿರಾಟ್ ಕೊಹ್ಲಿ
RCB ಕ್ಯಾಪ್ಟನ್ಶಿಪ್ಗೆ ವಿರಾಟ್ ಕೊಹ್ಲಿ ಗುಡ್ ಬೈ : ಯಾರು ಏನಂದ್ರು.?
ಹರಾಜಿಗೂ ಮುನ್ನ ಸ್ಟಾರ್ ಕನ್ನಡಿಗರನ್ನ ಕೈಬಿಡಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್..?
Anushak Sharma PhotoShoot : ವಿವಾದದಲ್ಲಿ ಅನುಷ್ಕಾ ಶರ್ಮಾ ಹೊಸ ಫೋಟೋಶೂಟ್ : ಮ್ಯಾಗಝೀನ್ಗೆ ಗರ್ಭಿಣಿ ಫೋಟೋಶೂಟ್
Anushka Sharma : ಹೊಟ್ಟೆಯ ಒಳಗಿನ ಸಂಕಟ..! ನಟಿಯರಿಗೆ ಹೊಟ್ಟೆ ಪ್ರಚಾರ, ಬಡವರಿಗೆ ಹೊಟ್ಟೆ ಭಾರ.!