Featured
ಚಾಮುಂಡೇಶ್ವರಿ ಮುಂದೆ ಆಣೆ ಪ್ರಮಾಣ ಮಾಡ್ತಾರಾ ವಿಶ್ವನಾಥ್ ಮತ್ತು ಸಾ.ರಾ. ಮಹೇಶ್..?
ಮೈಸೂರು : ಅದ್ಯಾಕೋ ಏನೋ, ಎಚ್.ವಿಶ್ವನಾಥ್ ಹಾಗೂ ಸಾ.ರಾ. ಮಹೇಶ್ ನಡುವಿನ ಮಾತಿನ ಯುದ್ಧ ಸದ್ಯಕ್ಕೆ ನಿಲ್ಲುವಂತೆ ಕಾಣ್ತಿಲ್ಲ. ಇಬ್ಬರ ಆರೋಪ – ಪ್ರತ್ಯಾರೋಪ, ಸವಾಲ್‌ಗೆ ಪ್ರತಿ ಸವಾಲ್ ನಿಂತಿಲ್ಲ. ಇದು ಯಾವ ಹಂತಕ್ಕೆ ಹೋಗಿದೆ ಅಂದ್ರೆ ಸಾರಾ ಮಹೇಶ್ ರಾಜೀನಾಮೆ ನೀಡುವ ಮಟ್ಟಕ್ಕೂ ತಲುಪಿದೆ.
ಯೆಸ್, ವಿಶ್ವನಾಥ್ ಟೀಕೆ, ಆರೋಪಗಳಿಂದ ನೊಂದ ಸಾರಾ ಮಹೇಶ್ ಕಳೆದ ಸೆಪ್ಟೆಂಬರ್ 18ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಂತೆ. ಈ ವಿಚಾರ ಈಗ ತಡವಾಗಿ ಬೆಳಕಿಗೆ ಬಂದಿದ್ದು, ಸ್ವತಃ ಸಾ.ರಾ. ಮಹೇಶ್ ಈ ಸ್ಫೋಟಕ ಸತ್ಯವನ್ನ ಬಿಚ್ಚಿಟ್ಟಿದ್ದಾರೆ. ಸಾ.ರಾ. ಮಹೇಶ್ ರಾಜೀನಾಮೆ ಪತ್ರ ಇನ್ನೂ ಸ್ಪೀಕರ್ ಕಚೇರಿಯಲ್ಲೇ ಇದೆಯಂತೆ. ಇದೇ ವಿಚಾರ ಸದ್ಯ, ಜೆಡಿಎಸ್ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾರಾ, ರಾಜೀನಾಮೆ ಬಗ್ಗೆ ಮಾಹಿತಿ ಬಹಿರಂಗ ಮಾಡಿದ್ರು. ಅಷ್ಟೇ ಅಲ್ದೆ, ತಾನು ಆಸೆ, ಆಮಿಷಕ್ಕೆ ಒಳಗಾಗಿಲ್ಲ ಅಂತ ನಾಡದೇವತೆ ಚಾಮುಂಡೇಶ್ವರಿ ಮುಂದೆ ನಿಂತು ಪ್ರಮಾಣ ಮಾಡುವಂತೆ ವಿಶ್ವನಾಥ್‌ಗೆ ಸಾರಾ ಸವಾಲು ಹಾಕಿದ್ದಾರೆ.
ಈ ನಡುವೆ, ಸಾರಾ ಸವಾಲು ಸ್ವೀಕರಿಸಿರೋ ವಿಶ್ವನಾಥ್ ಕೂಡ ಪ್ರತಿಸವಾಲು ಹಾಕಿದ್ದಾರೆ. ನಾನು ಚಾಮುಂಡೇಶ್ವರಿ ದೇವಿ ಸನ್ನಿಧಾನಕ್ಕೆ ಹೋಗ್ತೇನೆ. ಅವರೂ ಬರಲಿ. ಹಾಗೆಯೇ ಅವರ ಜೊತೆಯಲ್ಲಿ ನನ್ನನ್ನು ಖರೀದಿಸಿದವರನ್ನೂ ಕರೆತರಲಿ ಅಂತ ಪ್ರತಿಸವಾಲು ಎಸೆದಿದ್ದಾರೆ.
ಇತ್ತ, ಇದೇ ವಿಚಾರವಾಗಿ ಪ್ರತಿಕ್ರಿಯಿಸಿರೋ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ವಿಶ್ವನಾಥ್ ಆರೋಪದಿಂದ ನೊಂದು ಸಾರಾ ಮಹೇಶ್ ರಾಜೀನಾಮೆ ನೀಡಿರೋದು ನಿಜ ಅಂತ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಸಾರಾ ರಾಜೀನಾಮೆ ವಾಪಸ್ ಪಡೆಯಲ್ಲಿದ್ದಾರೆ ಅಂತ ದೊಡ್ಡ ಗೌಡರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಚಾಮುಂಡೇಶ್ವರಿ ದೇವಿ ಮುಂದೆ ಸಾರಾ ಮತ್ತು ವಿಶ್ವನಾಥ್ ಹೋಗ್ತಾರಾ…? ಆಣೆ, ಪ್ರಮಾಣ ಮಾಡ್ತಾರಾ ಅನ್ನೋದು ಸದ್ಯದ ಕುತೂಹಲ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?