Featured
ಅಜ್ಜನ ಅಡುಗೆ ಖ್ಯಾತಿಯ ಯೂಟ್ಯೂಬ್ ಸ್ಟಾರ್ ನಾರಾಯಣ ರೆಡ್ಡಿ ನಿಧನ : ಅಜ್ಜನ ಜರ್ನಿಯ ಸ್ಪೆಷಲ್ ಸ್ಟೋರಿ

ರೈಸಿಂಗ್ ಕನ್ನಡ : ಯೂಟ್ಯೂಬ್ನಲ್ಲಿ ತನ್ನದೇ ಶೈಲಿಯ್ಲಿ ಸಂಚಲನ ಮೂಡಿಸಿದ್ದ ಅಜ್ಜನ ಅಡುಗೆ ಖ್ಯಾತಿಯ ನಾರಾಯಣ ರೆಡ್ಡಿ ನಿಧರಾಗಿದ್ದಾರೆ. ಹೊಸ ಟ್ರೆಂಡ್ ಹುಟ್ಟುಹಾಕಿದ್ದ Grandpa Kitchen ಅಂದ್ರೆ ಅಜ್ಜನ ಅಡುಗೆ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಇವರು ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದರು. 73 ವರ್ಷದ ನಾರಾಯಣ ರೆಡ್ಡಿ ವಯೋ ಸಹಜ ಸಮಸ್ಯೆಯಿಂದ ಅನಾರೋಗ್ಯಕ್ಕೆ ಇಡಾಗಿದ್ದರು.
ಸದಾ ಖುಷಿಯಾಗಿರಿ. ಪ್ರೀತಿಸಲು ಬದುಕಿ, ಗಳಿಸಿದ್ದನ್ನು ಹಂಚಿಕೊಳ್ಳಿ ಎನ್ನುತ್ತಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದವರು ನಾರಾಯಣ ರೆಡ್ಡಿ. ತಮ್ಮ ಯೂಟ್ಯೂಬ್ಗಳಲ್ಲಿ ಸದಾ ಖುಷಿಯನ್ನು ಹಂಚುತ್ತಿದ್ದವರು. Grandpa Kitchen ಹೆಸರಿನ ತಮ್ಮ ಯೂಟ್ಯೂಬ್ ಚಾನಲ್ಗೆ 60 ಲಕ್ಷಕ್ಕೂ ಹೆಚ್ಚು ಸಬ್ ಸ್ಕ್ರೈಬರ್ ಹೊಂದಿದ್ದರು.
ಬಯಲಿನಲ್ಲಿ ಸೌದೆಯಲ್ಲಿ ಅಡುಗೆ
ಯೆಸ್, ನಾರಾಯಣ ರೆಡ್ಡಿ ಶೈಲಿ ಪಕ್ಕಾ ಹಳ್ಳಿ ಸ್ಟೈಲ್. ತೆರೆದ ಬಯಲಿನಲ್ಲಿ, ಸೌದೆ ಒಲೆಯಲ್ಲಿ ಅವರು ಸಂಪ್ರಾದಾಯಿಕ ಶೈಲಿಯಲ್ಲಿ ಅಡುಗೆ ಮಾಡ್ತಿದ್ರು. ಆಂಧ್ರ-ತೆಲಂಗಾಣ ತಿನಿಸುಗಳನ್ನು ಅಜ್ಜ ತಯಾರು ಮಾಡ್ತಿದ್ರು. ವಿಶೇಷ ಬಿರಿಯಾನಿ ಇವರ ಸ್ಪಷ್ಟಲ್ ಅಡುಗೆ. ಇದರ ಜೊತೆ ದೇಶಿ ಶೈಲಿಯಲ್ಲಿ ಫಿಜ್ಜಾ, ಬರ್ಗರ್, ಕೇಕ್ ಸೇರಿದಂತೆ ವಿದೇಶಿ ತಿನಿಸುಗಳನ್ನೂ ದೇಶಿ ಶೈಲಿಯಲ್ಲಿ ಮಾಡ್ತಿದ್ರು.
ವಿಶೇಷ ಅಂದ್ರೆ, ಯೂಟ್ಯೂಬ್ನಲ್ಲಿ ರೆಸಿಪಿ ಹೇಳಿ ಕೊಡಲು ಬಳಸುತ್ತಿದ್ದ
ದೊಡ್ಡ ಪ್ರಮಾಣದ ಆಹಾರ ಪದಾರ್ಥಗಳನ್ನು ಅನಾಥಾಶ್ರಮಗಳ ಮಕ್ಕಳಿಗೆ ಹಂಚಿಕೆ ಮಾಡ್ತಿದ್ರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















