Featured
ದೇವರಿಗೂ ಕೊರೊನಾ ಕಾಟ- ಗೊರವನಹಳ್ಳಿ ಮಹಾಲಕ್ಷ್ಮೀ ಟೆಂಪಲ್ ಸೀಲ್ಡೌನ್

ಕೆ.ಆರ್.ಬಾಬು, ತುಮಕೂರು:
ಕರುನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಸಿಲ್ ಡೌನ್ ಮಾಡಲಾಗಿದೆ.
ಕಲ್ಪತರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೀ ದೇವಿಯ ದರ್ಶನ ಜುಲೈ 20ರಿಂದ ಸ್ಥಗಿತವಾಗಿದೆ. ಮಹಾಲಕ್ಷ್ಮಿ ದೇವಾಲಯ ಹಿಂಭಾಗದ ಮಾರಮ್ಮನ ದೇವಾಲಯದ ಅರ್ಚಕನ ಮಡದಿಗೆ ಕೊರೊನಾ ದೃಡಪಟ್ಟ ಹಿನ್ನಲೆ ದೇವಾಲಯ ಸಿಲ್ ಡೌನ್ ಮಾಡಲಾಗಿದೆ.

ದೇವಾಲಯ ಸಿಲ್ ಡೌನ್ ಮಾಡಿರುವ ಬಗ್ಗೆ ಪತ್ರಿಕಾ ಪ್ರಕಟಣೆ ಅಥವಾ ಸಾರ್ವಜನಿಕ ಮಾಹಿತಿ ನೀಡದೇ ಆಡಳಿತ ಮಂಡಳಿಯ ನಿರ್ಲಕ್ಷ್ಯ ತೋರಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿನಿತ್ಯ ದೇವಿಯ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ದೇವಿಯ ದರ್ಶನ ಸಿಗದೇ ಇರುವುದಕ್ಕೆ ಜೊತೆ ಮಾಹಿತಿಯೂ ನೀಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ರೋಗದಿಂದ ಅರ್ಚಕನ ಮಡದಿ ಗುಣಮುಖವಾಗಿ ಮನೆಗೆ ಬಂದರೂ ಪ್ರಥಮ ಸಂಪರ್ಕದ ಕುಟುಂಬಸ್ಥರ ಕೊರೊನಾ ವರದಿ ಬಾರದೇ ಇರುವುದು ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಿದೆ. ಮಹಾಲಕ್ಷ್ಮೀ ಭಕ್ತರಿಗೆ ಸಿಲ್ ಡೌನ್ ಮಾಹಿತಿ ಇಲ್ಲದೇ ಕ್ಷೇತ್ರಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಬಂದು ವಾಪಾಸ್ ಹೋಗುತ್ತಿದ್ದಾರೆ.. ಭಕ್ತರ ಸಮಸ್ಯೆ ಕೇಳುವವರು ಯಾರು ಎಂಬುದೇ ಯಕ್ಷಪ್ರಶ್ನೆ.
ಸಿಲ್ ಡೌನ್ ಮಾಡಿ 7ದಿನ ಕಳೆದರೂ ಸಾರ್ವಜನಿಕರಿಗೆ ಮಾಹಿತಿ ನೀಡದೇ ಆಡಳಿತ ಮಂಡಳಿಯಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂಬುದು ಸತ್ಯ. ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಾಲಕ್ಷ್ಮೀ ದರ್ಶನ ಇರುತ್ತಾ ಅಥವಾ ಇರಲ್ವಾ ಅನ್ನುವುದು ಕೂಡ ಇನ್ನೂ ಗೊಂದಲದಲ್ಲೇ ಇದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?