Featured
ಜಿಯೋ ಜೊತೆ ಕೈ ಸೇರಿಸಿದ ಗೂಗಲ್- ಟೆಲಿಕಾಂ ಕ್ಷೇತ್ರದಲ್ಲಿ 33ಸಾವಿರ ಕೋಟಿ ಹೂಡಿಕೆ – ಮುಂದಿನ ವರ್ಷ ಮಾರ್ಕೆಟ್ಗೆ ಎಂಟ್ರಿಕೊಡಲಿದೆ 5ಜಿ ಫೋನ್
ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯ ಹೆಜ್ಜೆ ಇಟ್ಟಿದ್ದ ಜಿಯೋ ಈಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ವಿಶ್ವದ ಶ್ರೇಷ್ಠ ಕಂಪನಿಗಳ ಪೈಕಿ ಅಗ್ರಗಣ್ಯವಾಗಿರುವ ಗೂಗಲ್ ಜೊತೆ ದೋಸ್ತಿ ಬೆಳೆಸಿದೆ. ಜಿಯೋ ಸಂಸ್ಥೆಯಲ್ಲಿ ಗೂಗಲ್ 33,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು ರಿಲಾಯನ್ಸ್ ಇಂಡಸ್ಟ್ರೀಸ್ ಟೆಕ್ನಾಲಜಿಯಲ್ಲಿ ಗೂಗಲ್ ಶೇಕಡಾ 7.7 ರಷ್ಟು ಷೇರುಗಳನ್ನು ಪಡೆಯಲಿದೆ ಎಂದು ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಘೋಷಿಸಿದ್ದಾರೆ.
ಮಂಗಳವಾರ ನಡೆದ ರಿಲಯನ್ಸ್ 43ನೇ ಜನರಲ್ ಬಾಡಿ ಮೀಟಿಂಗ್ನಲ್ಲಿ ಅಂಬಾನಿ ಈ ವಿಷಯ ಘೋಷಿಸಿದರು. ಅಷ್ಟೇ ಅಲ್ಲ ಮುಂದಿನ ವರ್ಷ ಗೂಗಲ್ ಜೊತೆಗೂಡಿ ಮೇಡ್ ಇನ್ ಇಂಡಿಯಾ ಯೋಜನೆಯಡಿ 5ಜಿ ನೆಟ್ವರ್ಕ್ಗೆ ಹೊಂದಿಕೊಳ್ಳುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವ ಯೋಜನೆ ಕೂಡ ಹಾಕಿಕೊಂಡಿದೆ ಎಂದು ತಿಳಿಸಿದರು.
ಹೊಸ 5ಜಿ ಬೆಂಬಲಿತ ಸ್ಮಾರ್ಟ್ಫೋನ್ ಗೂಗಲ್ ಜೊತೆಗೂಡಿ ಆಂಡ್ರಾಯ್ಡ್ ಫ್ಲಾಟ್ಫಾರ್ಮ್ನಲ್ಲಿ ಕೆಲಸ ಮಾಡಲಿದೆ. ಜಿಯೋ ಇಲ್ಲಿ ತನಕ 10 ಮಿಲಿಯನ್ಗೂ ಅಧಿಕ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ಗಳನ್ನು ಜನರಿಗೆ ಒದಗಿಸಿದೆ. ಜಿಯೋ ಮೂಲಕ ಜನರು ಸಾಮಾನ್ಯ ಫೋನ್ನಿಂದ ಸ್ಮಾರ್ಟ್ ಫೋನ್ಗೆ ಅಪ್ಡೇಟ್ ಆಗಲು ಸಹಾಯಕವಾಗಿದೆ ಎಂದು ಮುಕೇಶ್ ಅಂಬಾನಿ ಸಾಮಾನ್ಯ ಸಭೆಯಲ್ಲಿ ಘೋಷಿಸಿದರು.
You may like
ನೆಟ್ ಫ್ಲಿಕ್ಸ್, ಅಮೆಜಾನ್ ಗೆ ಸೆಡ್ಡು ಹೊಡೆಯಲು ಜಿಯೋ, ಡಿಸ್ನಿ ರೆಡಿ..!
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?