Featured
ಹಿಂದೂಗಳಿಗೆ ಗುಡ್ ನ್ಯೂಸ್, ಅಂತಿಮ ಘಟ್ಟ ತಲುಪಿದ ಅಯೋಧ್ಯ ವಿವಾದ : ಸುಪ್ರೀಂ ತೀರ್ಪಿಗೆ ಕೌಂಟ್ಡೌನ್..!
![](https://risingkannada.com/wp-content/uploads/2019/10/IMG-20191014-WA0008.jpg)
ನವದೆಹಲಿ : ರಾಜಕೀಯ ಸೂಕ್ಷ್ಮ ವಿಚಾರವಾಗಿರೋ ಅಯೋಧ್ಯೆ ರಾಮಜನ್ಮಭೂಮಿ, ಬಾಬರಿ ಮಸೀದಿ ಪ್ರಕರಣದ ತೀರ್ಪಿಗೆ ಕ್ಷಣಗಣನೆ ಶುರುವಾಗಿದೆ. ವಿಚಾರಣೆ ಅಂತಿಮ ಘಟ್ಟ ತಲುಪಿದ್ದು, ಕೊನೇ ಹಂತದ ವಿಚಾರಣೆ ನಡೀತಿದೆ. ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಅಯೋಧ್ಯೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಡಿಸೆಂಬರ್ 10ರ ವರೆಗೂ ನಿಷೇಧಾಜ್ಞೆ ಜಾರಿಯಲ್ಲಿದೆ.
ಅಯೋಧ್ಯೆಯಲ್ಲಿ ಡ್ರೋನ್‌ಗಳು ಮತ್ತು ಮಾನವ ರಹಿತ ವಿಮಾನಗಳ ಹಾರಾಟ ಕೂಡ ನಿಷೇಧಿಸಲಾಗಿದೆ. ಅಯೋಧ್ಯೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೋಣಿಗಳನ್ನೂ ಕೂಡ ಬಳಸುವಂತಿಲ್ಲ, ಸಂಚರಿಸುವಂತಿಲ್ಲ. ದೀಪಾವಳಿ ಪ್ರಯುಕ್ತ ಪಟಾಕಿ ಮಾರಾಟ ಮಾತ್ತು ಸಿಡಿಸಲು ಜಿಲ್ಲಾಡಳಿತ ಅನುಮತಿ ಪಡೆಯೋದು ಕಡ್ಡಾಯ.
ಆಗಸ್ಟ್ 6ರಿಂದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದಲ್ಲಿ ಐವರು ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠ, ಪ್ರತಿದಿನ ನಿತ್ಯ ವಿಚಾರಣೆ ನಡೆಸುತ್ತಿದೆ. ನಾಳೆವರೆಗೂ ಮುಸ್ಲಿಂ ಅರ್ಜಿದಾರರ ವಾದ ಮಂಡನೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದೆ . ಅಕ್ಟೋಬರ್ 17ರಂದು ವಿಚಾರಣೆ ಅಂತಿಮಗೊಳ್ಳಲಿದ್ದು, ಅಂದು ಎರಡೂ ಕಡೆಯವರು ತಮ್ಮ ಕೊನೆಯ ವಾದವನ್ನು ಪೂರ್ಣಗೊಳಿಸಬೇಕಿದೆ. ಗುರುವಾರ ವಿಚಾರಣೆ ಅಂತ್ಯವಾಗಲಿದ್ದು, ಸುಪ್ರೀಂ ತೀರ್ಪು ಏನಾಗುತ್ತೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?