Featured
ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ ಡಿಫ್ರೆಂಟ್ ಕೇಕ್ – ಇದು ನಿರ್ದೇಶಕ ಪ್ರಶಾಂತ್ ರಾಜ್ ಕ್ರಿಯೇಟಿವಿಟಿ
![](https://risingkannada.com/wp-content/uploads/2020/07/WhatsApp-Image-2020-07-02-at-5.01.53-PM.jpeg)
ರೈಸಿಂಗ್ ಕನ್ನಡ :
ಬೆಂಗಳೂರು :
ಗೋಲ್ಡನ್ ಸ್ಟಾರ್ ಗಣೇಶ್. ಕನ್ನಡ ಚಿತ್ರರಂಗದ ಖ್ಯಾತನಟ. ಇವರಿಗೆ ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ ನಮಸ್ಕಾರ ನಮಸ್ಕಾರ ಅಂತ ಹೇಳುತ್ತಲೇ ಮೋಡಿ ಮಾಡಿದ ನಾಯಕ ನಟ. 2006ರಲ್ಲಿ ‘ಚೆಲ್ಲಾಟ’ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಎಂಟ್ರಿಕೊಟ್ಟ ಗಣಿ, ‘ಹುಡುಗಾಟ’ವಾಡಿ ‘ಮುಂಗಾರುಮಳೆ’ಯನ್ನೇ ಸುರಿಸಿದ್ರು.
‘ಚೆಲುವಿನ ಚಿತ್ತಾರ’ದಲ್ಲಿ ‘ಕೃಷ್ಣ’ನಾಗಿ ‘ಗಾಳಿಪಟ’ ಹಾರಿಸಿದ ಈ ನ್ಯಾಚುರಲ್ ಸ್ಟಾರ್, ‘ಅರಮನೆ’ ಕಟ್ಟಿ ‘ಬೊಂಬಾಟ’ವಾಡಿ, ‘ಸಂಗಮ’ದಲ್ಲಿ ‘ಸರ್ಕಸ್’ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಸದಾ ‘ಉಲ್ಲಾಸ ಉತ್ಸಾಹ’ದ ಚಿಲುಮೆಯಾಗಿರೋ ಗೋಲ್ಡನ್ ಸ್ಟಾರ್, ‘ಮಳೆಯಲು ಜೊತೆಯಲು’ ‘ಏನೋ ಒಂಥರಾ’ ‘ಕೂಲ್’ ಆಗಿ ಇರ್ತಾರೆ.
![](https://risingkannada.com/wp-content/uploads/2020/07/WhatsApp-Image-2020-07-02-at-4.20.53-PM-1024x682.jpeg)
‘ಮದುವೆ ಮನೆ’ಯಲ್ಲಿ ‘ಮುಂಜಾನೆ’ಯೇ ‘ಶೈಲೂ’ ಜೊತೆ ‘ರೋಮಿಯೋ’ ಆಗೋ ಈ ಚತುರ, ‘ರ್ಯಾಂಬೋ’ನು ಹೌದು, ಪಕ್ಕಾ ‘420’ನೂ ಹೌದು. ‘ಆಟೋ ರಾಜ’ನಾಗಿ ಅಭಿಮಾನಿಗಳಿಗೆ ‘ಸಕ್ಕರೆ’ ತಿನಿಸಿದ ಗಣಿ, ‘ಶ್ರಾವಣಿ ಸುಬ್ರಮಣ್ಯಳ’ ಪ್ರೀತಿಯನ್ನ ‘ದಿಲ್ ರಂಗೀಲ’ವಾಗಿಸಿದ್ರು.
ಈ ‘ಸ್ಟೈಲ್ ಕಿಂಗ್’ ‘ಖುಷಿಖುಷಿ’ಯಾಗಿ ‘ಬುಗುರಿ’ಯಾಡಿಸಿದ್ರೆ, ಜನ ‘ಜೂಮ್’ ಹಾಕಿ ನೋಡ್ತಾರೆ. ಈ ‘ಸುಂದರಾಂಗ ಜಾಣ’ ‘ಮುಗುಳುನಗೆ’ ಬೀರಿದ್ರೆ, ‘ಪಟಾಕಿ’ ಸಿಡಿಯೋದು ಪಕ್ಕಾ. ‘ಗೀತಾ ಜೊತೆ ‘ಚಮಕ್’, ‘ಗಿಮಿಕ್’ ಅಂದ ಈ ಅಭಿನಯ ಚತುರ ಮುಂದೆ 2ನೇ ಸಲ ‘ಗಾಳಿಪಟ’ ಹಾರಿಸೋಕೆ ಸಜ್ಜಾಗಿದ್ದಾರೆ.
ಇನ್ನೂ ಗೋಲ್ಡನ್ ಸ್ಟಾರ್ ಬರ್ತಡೇಗೆ ನಿರ್ದೇಶಕ ಪ್ರಶಾಂತ್ ರಾಜ್ ಹಾಗೂ ಅವರ ತಂಡದವರು ಸಿನಿಮಾ ಸ್ಟೈಲ್‌ನಲ್ಲೇ ಕೇಕ್ ತಯಾರಿಸಿಕೊಂಡು ಬಂದಿದ್ರು. ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿಯೇ ಬರ್ತ್ ಡೇ ಆಚರಿಸಿದ್ರು. ಈ ಜೋಡಿ ಹೊಸ ಚಿತ್ರವೊಂದರ ಲೆಕ್ಕಾಚಾರದಲ್ಲಿದ್ದು, ಕೊರೊನಾ ಮುಗೀಲಿ ಅಂತ ಕಾಯ್ತಿದೆ. ಎನಿ ವೇ ಒನ್ಸ್ ಎಗೈನ್ ಹ್ಯಾಪಿ ಬರ್ತ್‌ಡೇ ಗೋಲ್ಡನ್ ಸ್ಟಾರ್
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?