ರೈಸಿಂಗ್ ಕನ್ನಡ:
ಸಿನಿಮಾ ಡೆಸ್ಕ್:
ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ಡೇ ದಿನ ಮತ್ತೊಂದು ಮೆಗಾ ಸಿನಿಮಾ ಅನೌನ್ಸ್ ಆಗಿದೆ. ಸ್ಯಾಂಡಲ್ವುಡ್ ಕರೋನಾ ಎಫೆಕ್ಟ್ನಿಂದಾಗಿ ಕಂಗೆಟ್ಟಿದ್ದರೂ ಗೋಲ್ಡನ್ ಸ್ಟಾರ್ ಕೈಗೆ ಮತ್ತೊಂದು ಪ್ರಾಜೆಕ್ಟ್ ಸಿಕ್ಕಿದೆ. ಈಗಾಗಲೇ ಹಲವು ಚಿತ್ರಗಳನ್ನು ಕೈಗೆತ್ತಿಕೊಂಡಿರುವ ನಾಯಕ ನಟ ಹುಟ್ಟುಬಹಬ್ಬದ ದಿನ ಪ್ರಶಾಂತ್ ರಾಜ್ -ಗೋಲ್ಡನ್ ಸ್ಟಾರ್ ಹ್ಯಾಟ್ರಿಕ್ ಕಾಂಬಿನೇಷನ್ನಲ್ಲಿ ಪ್ರೋಡಕ್ಷನ್ ನಂ7 ಚಿತ್ರ ಹೊರಬರಲಿದೆ.
ಪ್ರಶಾಂತ್ ರಾಜ್ “ನಿಮ್ಮ ಸಿನಿಮಾ” ನಿರ್ಮಾಣ ಸಂಸ್ಥೆಯ 10ನೇ ವರ್ಷಾಚರಣೆಯ ಸಂಭ್ರಮದಲ್ಲಿ ಸಿನಿಮಾ ಅನೌನ್ಸ್ ಆಗಿದೆ. ಜೂಮ್, ಆರೆಂಜ್ ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಸಿನಿಮಾಗಳ ನಂತ್ರ ಮತ್ತೆ ಈ ಸಕ್ಸಸ್ ಫುಲ್ ಜೊತೆಯಾಗಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಫಸ್ಟ್ ಲುಕ್ ಪೋಸ್ಟರ್ ಜೊತೆಗೆ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಎಸ್.ಎಸ್ ತಮನ್ ಸಂಗೀತ ಸಂಯೋಜನೆ ಈ ಚಿತ್ರಕ್ಕೆ ಇರಲಿದೆ. ಈ ಚಿತ್ರ ಪ್ರಶಾಂತ್ ರಾಜ್ ಗಣೇಶ್ ಮತ್ತು ತಮನ್ ಮೂವರಿಗೂ ಹ್ಯಾಟ್ರಿಕ್ ಸಿನಿಮಾ ಅನ್ನೋದು ಮತ್ತೊಂದು ವಿಶೇಷ.
ರೊಮ್ಯಾಂಟಿಕ್ ಕಾಮಿಡಿ ಕೊಟ್ಟು ಸಕ್ಸಸ್ ಆಗಿದ್ದ ಈ ಕಾಂಬಿನೇಷನ್ ಇದೀಗ ಡಾರ್ಕ್ ಕ್ರೈಂ ಎಂಟರ್ಟೈನ್ಮೆಂಟ್ ಕೊಡೋದಕ್ಕೆ ಸಜ್ಜಾಗಿದೆ. ಔಟ್ ಅಂಡ್ ಔಟ್ ಎಂಟರ್ಟೈನ್ಮೆಂಟ್ ಅಂತ ಹೇಳ್ತಿರೋ ಗಣಿ-ಪ್ರಶಾಂತ್, ಮೋಜು ಮಸ್ತಿಯ ಮನರಂಜನೆ ಕೊಡುವುದಾಗಿ ಈ ಮೂಲಕ ಕನ್ನಡ ಸಿನಿಪ್ರಿಯರಿಗೆ ಪ್ರಾಮಿಸ್ ಮಾಡ್ತಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?