Featured
ಆ ವಿಚಾರದಲ್ಲಿ ಯುವಕರಿಗಿಂತ ಯುವತಿಯರೇ ಸ್ಟ್ರಾಂಗ್ ಗುರೂ.. : ಅದೇನು ಅಂತೀರಾ..?
ರೈಸಿಂಗ್ ಕನ್ನಡ ಡೆಸ್ಕ್ :
ಹೆಲ್ಸೆಂಕಿ ವಿವಿ ಹೊಸ ಸಂಶೋಧನೆ ನಡೆಸಿದ್ದು ಆಸಕ್ತಿಕರ ವಿಚಾರಗಳನ್ನ ಬಹಿರಂಗ ಮಾಡಿದೆ. ಅದ್ರಲ್ಲೂ 20 ವರ್ಷ ವಯಸ್ಸಿನ ಸುಮಾರು 20 ಸಾವಿರ ಯುವಕ-ಯುವತಿಯರ ಮೇಲೆ ಸತತ ಎರಡು ವಾರ ಸಂಶೋಧನೆ ನಡೆಸಿ ಅಚ್ಚರಿಯ ಸಂಗತಿಯನ್ನ ಬಯಲು ಮಾಡಿದೆ.
ಒಬ್ಬ ವ್ಯಕ್ತಿ ಆರೋಗ್ಯಕರ ಜೀವನ ನಡೆಸೋಕೆ ನಿದ್ದೆ ಕೂಡ ತುಂಬಾನೇ ಮುಖ್ಯ. ಒಬ್ಬ ವ್ಯಕ್ತಿ ದಿನ ಪ್ರತಿ 6 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡ್ಬೇಕು. ಹಾಗಂತ, ತುಂಬಾನೇ ನಿದ್ದೆ ಮಾಡಿದ್ರು ಕೂಡ ಅಪಾಯ ತಪ್ಪಿದ್ದಲ್ಲ.
ಇದೀಗ ನಿದ್ದೆ ವಿಚಾರವಾಗಿ ಹೆಲ್ಸೆಂಕಿ ವಿವಿ ಹೊಸ ರೀತಿಯ ಸಂಶೋಧನೆ ಮಾಡಿದ್ದು, ಅಚ್ಚರಿಯ ಸಂಗತಿ ಬಯಲು ಮಾಡಿದೆ. ವಿಪರೀತ ನಿದ್ದೆ ಮಾಡಿದರೆ ಬೊಜ್ಜಿನ ಸಮಸ್ಯೆ, ಜೀರ್ಣ ಕ್ರಿಯೆಗೆ ಸಮಸ್ಯೆ ಕೂಡ ಕಾಡಬಹುದು. ಇದ್ರಿಂದಾಗಿಯೇ ದಿನಕ್ಕೆ 6 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಿದ್ರೆ ಸಾಕು.
ನಿದ್ರೆ ವಿಚಾರದಲ್ಲಿ ಯಾರು ಹೆಚ್ಚು ನಿದ್ರೆ ಮಾಡ್ತಾರೆ ಅನ್ನೋದ್ರ ಬಗ್ಗೆ ಸರ್ವೇ ನಡೆದಿದೆ. ಇದ್ರಲ್ಲಿ ಯುವತಿಯರೇ ಹೆಚ್ಚು ನಿದ್ದೆ ಮಾಡ್ತಾರೆ ಅನ್ನೋದು ಬಹಿರಂಗವಾಗಿದೆ. ಈವರೆಗೆ ಯುವಕರೇ ಹೆಚ್ಚು ನಿದ್ದೆ ಮಾಡ್ತಾರೆ, ಯುವಕರು ಸೋಮಾರಿಗಳು ಅನ್ನೋ ಅಪವಾದ ಇತ್ತು. ಆದ್ರೆ, ಇದೀಗ ಸರ್ವೆಯಿಂದ ನಿಜಾಂಶ ಬಯಲಾಗಿದ್ದು, ಯುವಕರಿಗಿಂತಲೂ ಯುವತಿಯರೇ ಹೆಚ್ಚು ನಿದ್ದೆ ಮಾಡ್ತಾರೆ ಅನ್ನೋ ಅಂಶ ಬಯಲಾಗಿದೆ.
ಇನ್ನು ವಿಶೇಷ ಅಂದ್ರೆ, ಸರ್ವೇ ಪ್ರಕಾರ ಯುರೋಪ್ ಮತ್ತು ಉತ್ತರ ಅಮೆರಿಕದ ಯುವಕರು ಹೆಚ್ಚು ಹೊತ್ತು ನಿದ್ದೆ ಮಾಡ್ತಾರಂತೆ. ಆದ್ರೆ, ಏಷ್ಯಾದ ಯುವಕರು ಕಡಿಮೆ ನಿದ್ದೆ ಮಾಡ್ತಾರಂತೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?