Featured
ಬಾಯ್ ಫ್ರೆಂಡ್ ಮೇಲೆ ಪ್ರತೀಕಾರ : ಒಂದೇ ದಿನ 20 ಮಂದಿ ಜೊತೆ ಶೃಂಗಾರ.. ವಿಡಿಯೋ ತೆಗೆದು..!?

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಬ್ರಿಟನ್ : ಬಾಯ್ ಫ್ರೆಂಡ್ ಕೈಕೊಟ್ಟ ಎಂದು ಯುವತಿಯೊಬ್ಬಳು, ಆತನ ವಿರುದ್ಧ ರಿವೇಂಜ್ ತೀರಿಸಿಕೊಳ್ಳೋಕೆ ನಿರ್ಧರಿಸ್ತಾಳೆ. ಆದ್ರೆ, ಅದು ಮಾಮೂಲಾದ ರಿವೇಂಜ್ ಅಲ್ಲ. ಕಾಮನ್ ಆಗಿ, ಬಾಯ್ ಫ್ರೆಂಡ್ಅನ್ನ ಹೊಡೆದೋ, ಕಂಪ್ಲೇಟ್ ಕೊಟ್ಟೋ ಅಥವಾ ಯಾವತ್ತಿಗೂ ನೆನೆಪು ಇಟ್ಟುಕೊಳ್ಳುವಂತ ಏನಾದ್ರೂ ಶಾಕ್ ಕೊಡ್ತಾರೆ. ಆದ್ರೆ, ಈ ಯುವತಿ ಮಾತ್ರ ಮಾಡಿದ್ದೇ ಬೇರೆ.
ಆ ಯುವತಿ ಮಾಡಿರೋ ಆ ಘಟನೆಯಿಂದ ಇಡೀ ಪ್ರಪಂಚವೇ ಶಾಕ್ ಆಗಿದೆ. ಕೇವಲ ಶಾಕ್ ಅಷ್ಟೇ ಅಲ್ಲ, ಅಯ್ಯಯ್ಯೋ ಇದೆಂಥಾ ಕೃತ್ಯ.. ಇದೇನಾ ಸಭ್ಯತೆ ಅಂತ ಚೀರಾಡ್ತಿದೆ. ಇಷ್ಟಕ್ಕೂ ಆ ಯುವತಿ ಮಾಡಿದ್ದೇನು ಅಂತ ಒಮ್ಮೆ ನೋಡೋಣ..
ಇಂಗ್ಲೆಂಡ್ ಮೂಲದ ಯುವತಿ ಹೆಸರು ಸಾರಾ ಕೊಲಿನ್. 26 ವರ್ಷದ ಯುವತಿ. ಆಕೆ ಬಾರ್ ಡ್ಯಾನ್ಸರ್. ಕಳೆದ ಮೂರು ವರ್ಷಗಳಿಂದ ಯುವಕನ ಜೊತೆ ಡೇಟಿಂಗ್ನಲ್ಲಿ ಇದ್ಳು. ಲವ್ ಕೂಡ ಆಗಿತ್ತು. ಇಬ್ಬರೂ ಜೊತೆಯಲ್ಲಿ ತಿರುಗಾಡಿದ್ರು. ಒಂದೇ ಫ್ಲಾಟ್ನಲ್ಲಿ ಲೀವ್ಇನ್ ರಿಲೇಷನ್ ಶಿಫ್ನಲ್ಲೇ ಇದ್ರು. ಆದ್ರೆ, ಏನಾಯ್ತೋ ಏನೋ, ಯುವಕ ಸಾರಾಳನ್ನ ಅವೈಡ್ ಮಾಡೋಕೆ ನೋಡಿದ.. ಇದರ ಜೊತೆ ಬಾಯ್ ಫ್ರೆಂಡ್ ಬೇರೊಬ್ಬ ಯುವತಿ ಜೊತೆ ಇರೋ ಫೋಟೋ, ವಿಡಿಯೋ, ಸಾರಾಗೆ ಸಿಕ್ತು. ಇದರಿಂದ ಆಕ್ರೋಶಗೊಂಡ ಸಾರಾ, ತನ್ನ ಬಾಯ್ ಫ್ರೆಂಡ್ಗೆ ಬುದ್ಧಿ ಕಲಿಸಬೇಕು ಅಂತ ಒಂದು ಪ್ಲಾನ್ ಮಾಡ್ತಾಳೆ..
ಅದರಂತೆ, ತಾನು ಕೆಲಸ ಮಾಡೋ ಬಾರ್ನಲ್ಲಿ ಯುವಕ ಜೊತೆ ಪರಿಚಯ ಮಾಡಿಕೊಳ್ತಾಳೆ.. ಇಷ್ಟೇ ಸಾಲದು ಅಂತ ಒಂದೇ ದಿನ ತನ್ನ ಫ್ಲಾಟ್ಗೆ 20 ಮಂದಿಗೆ ಆಹ್ವಾನ ಕೊಡ್ತಾಳೆ. ಒಬ್ಬೊರ ಜೊತೆ, ಇಬ್ಬರ ಜೊತೆ, ಒಂದೇ ಬಾರಿ ಮೂವರ ಜೊತೆ ಹೀಗೆ.. 20 ಮಂದಿ ಜೊತೆಯೂ ಸಾರಾ ಶೃಂಗಾರ ಮಾಡ್ತಾಳೆ. ತಾನು ಶೃಂಗಾರ ಮಾಡೋದನ್ನ ವಿಡಿಯೋ ಕೂಡ ಮಾಡ್ತಾಳೆ. ಆ ವಿಡಿಯೋಗಳನ್ನ ತನ್ನ ಬಾಯ್ ಫ್ರೆಂಡ್ಗೆ ಕಳಿಸ್ತಾಳೆ.
ತನ್ನ ಗರ್ಲ್ ಫ್ರೆಂಡ್ ಸಾರಾ, ಈ ರೀತಿ ಮಾಡ್ತಾಳೆ ಅಂತ ಕನಸಿನಲ್ಲೂ ಕೂಡ ಯುವಕ ಅನ್ಕೊಂಡಿರಲಿಲ್ಲ. ಆದ್ರೆ, ದ್ವೇಷ ಸಾಧಿಸೋಕೆ ಸಾರಾ ಹಿಡಿದ ಮಾರ್ಗ ಮಾತ್ರ ಸರಿ ಇಲ್ಲ. ಇದೊಂದು ವಿಕೃತ ವರ್ತನೆ ಅಂತ ಎಲ್ಲೆಡೆ, ಸಾರಾ ವಿರುದ್ಧ ಟೀಕೆಗಳ ಸುರಿಮಳೆ ಬರ್ತಿದೆ.