ಟಾಪ್ ನ್ಯೂಸ್
ಗಂಧದ ಗುಡಿ ಪ್ರವೇಶಿಸಿದ ಮುಂಬೈ ಹುಡುಗಿ ಪ್ರಾಚಿ ಶರ್ಮ
![](https://risingkannada.com/wp-content/uploads/2023/06/image-47-e1686325645432.png)
ಕನ್ನಡ ಚಿತ್ರ ರಂಗಕ್ಕೆ ಮುಂಬೈ ಮೂಲದ ನಾಯಕಿಯರ ಪ್ರವೇಶ ಮೊದಲೆನಲ್ಲ . ಈಗ ಕನ್ನಡದ “ರೆಡ್ರಮ್ “ಚಿತ್ರದ ಮೂಲಕ ಮುಂಬೈ ಪ್ರತಿಭೆ ಪ್ರಾಚಿ ಶರ್ಮ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ತೆಲುಗು ಚಿತ್ರ “ಜಿಲ್ಲಾ ಪರಿಷತ್ ಉನ್ನತ ಪಾಠಶಾಲಾ” ಮೂಲಕ ಬಣ್ಣ ಹಚ್ಚಿದ ಅನುಭವವಿರುವ ಪ್ರಾಚಿ ಶರ್ಮ, ಈಗ ಕೌಟಿಲ್ಯ ಸಿನೆಮಾಸ್ ಹಾಗೂ ಹನಿ ಚೌಧರಿ ನಿರ್ಮಾಣದ “ರೆಡ್ರಮ್” ಚಿತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.
ಕನ್ನಡ ಭಾಷೆಯನ್ನು ಬೇಗ ಕಲಿಯುತ್ತಿರುವ ಪ್ರಾಚಿ ಶರ್ಮ, ಆಗಲೇ “ಸ್ವಾತಿ ನಕ್ಷತ್ರ ” ಎಂಬ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಜುಲೈನಲ್ಲಿ ಆರಂಭವಾಗಲಿದೆ.
![](https://risingkannada.com/wp-content/uploads/2023/06/image-47-1024x1024.png)
ಇದಲ್ಲದೆ ಇನ್ನೊಂದು ಹೆಸರಿಡದ ಬಹು ತಾರಾಗಣದ, ದೊಡ್ಡ ಬಜೆಟ್ ನ ಚಿತ್ರಕ್ಕೆ ಕೂಡ ಆಯ್ಕೆ ಆಗಿದ್ದಾರೆ.
ಹಾಗೆ, ಹಲವು ಚಿತ್ರಗಳಿಗೆ ಮಾತುಕತೆ ಸಹ ನಡೆಯುತ್ತಿದೆ ಎಂದು ಪ್ರಾಚಿ ಶರ್ಮ ತಿಳಿಸಿದ್ದಾರೆ.
ಹಲವು ಹೊಸ ನಟಿಯರು ಚಿತ್ರ ರಂಗಕ್ಕೆ ಬರುತ್ತರುವ ಈ ಸಮಯದಲ್ಲಿ ಪ್ರಾಚಿ ಶರ್ಮ ತಮ್ಮ ನಟನಾ ಕೌಶಲ್ಯದಿಂದ ಕನ್ನಡ ಸಿನಿ ರಸಿಕರ ಮನೆ ಮನದಲ್ಲಿ ನೆಲೆಸುವಂತಾಗಲಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?