ಸಿನಿಮಾ
ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ, ಪಂಚಭೂತಗಳಲ್ಲಿ ಪ್ರಚಂಡ ಕುಳ್ಳ ಲೀನ
cinema : ದ್ವಾರಕೀಶ್ ಅವರ ಅಂತ್ಯ ಸಂಸ್ಕಾರ ಬ್ರಾಹ್ಮಣ ಸಂಪ್ರದಾಯದಂತೇನೆ ನಡೆದಿದೆ. ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿಯೇ ದ್ವಾರಕೀಶ್ ಅವರ ಅಂತ್ಯ ಸಂಸ್ಕಾರ ನೆರವೇರಿದೆ.
ಎಲೆಕ್ಟ್ರಾನಿಕ್ ಸಿಟಿಯ ಮನೆಯಲ್ಲಿಯೇ ದ್ವಾರಕೀಶ್ ನಿಧರಾಗಿದ್ದರು. ಅಲ್ಲಿಯೇ ಸಿನಿರಂಗದ ನಟರು-ನಟಿಯರು ದ್ವಾರಕೀಶ್ ಅಂತಿಮ ದರ್ಶನ ಪಡೆದರು. ಕಂಬನಿ ಮಿಡಿದ್ರು.
ಮೊದಲೇ ಹೇಳಿದಂತೆ ರವೀಂದ್ರ ಕಲಾಕ್ಷೇತ್ರದಲ್ಲಿ ದ್ವಾರಕೀಶ್ ಅವರ ಪಾರ್ಥಿವ ಶರೀರವನ್ನ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಅಂತ್ಯಕ್ರಿಯೆ ನೆರವೇರುತ್ತದೆ ಅಂತಲೂ ಹೇಳಲಾಗಿತ್ತು.
ಆ ಪ್ರಕಾರವೇ ರವೀಂದ್ರ ಕಲಾಕ್ಷೇತ್ರದಿಂದ ಚಾಮರಾಜಪೇಟೆಯ ರುದ್ರಭೂಮಿಯವರೆಗೂ ಅಂತಿಮ ಯಾತ್ರೆ ಮಾಡಲಾಗಿದೆ. ಆ ಬಳಿಕ ಹಿಂದೂ ರುದ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ದ್ವಾರಕೀಶ್ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ದ್ವಾರಕೀಶ್ ಐವರು ಮಕ್ಕಳಿಂದ ಅಗ್ನಿ ಸ್ಪರ್ಶ ಮಾಡಿದ್ದಾರೆ. ಪ್ರೇತ ಸಂಸ್ಕಾರ-ಕಿವಿಯಲ್ಲಿ ನಾರಾಯಣ ಸ್ಮರಣೆ ಹೀಗೆ ಅಂತಿಮ ವಿಧಿವಿಧಾನ ನೆರವೇರಿಸಲಾಗಿದೆ.
ದ್ವಾರಕೀಶ್ ಇಡೀ ಜೀವನವನ್ನ ಸಂಪೂರ್ಣ ಅನುಭವಿಸಿದ್ದಾರೆ. ಇಡೀ ಇಂಡಸ್ಟ್ರಿಗೆ ತಮ್ಮದೇ ಕೊಡುಗೆ ಕೊಟ್ಟಿದ್ದಾರೆ. ತಮ್ಮದೇ ರೀತಿಯಲ್ಲಿ ಎಲ್ಲರಿಗೂ ನೆರವಾದ ದ್ವಾರಕೀಶ್ ಅವರನ್ನ ನಟಯರು-ನಟಿಯರು ಸಂಬಂಧಿಕರು ಕಣ್ಣೀರಿನಿಂದಲೇ ವಿದಾಯ ಹೇಳಿದ್ದಾರೆ.
ಕನ್ನಡದ ಕುಳ್ಳನಿಗೆ ಪೊಲೀಸ್ ಗೌರವ ಕೂಡ ಸಲ್ಲಿಸಲಾಗಿದೆ. ಈ ಮೂಲಕ ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ಅವರ ಅಗಲುವಿಕೆಯಿಂದೆ ದೊಡ್ಡ ನಷ್ಟವೇ ಆಗಿದೆ. ಇಡೀ ಇಂಡಸ್ಟ್ರಿ ಕಂಬನಿ ಮಿಡಿದಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?