Featured
ಮಧ್ಯರಾತ್ರಿಯಿಂದ ಗುರು ವೃಶ್ಚಿಕರಾಶಿಯಿಂದ ಧನುರಾಶಿಗೆ ಪ್ರವೇಶ : ದ್ವಾದಶರಾಶಿಯಲ್ಲಿ ಏನೆಲ್ಲಾ ಬದಲಾವಣೆ..?
![](https://risingkannada.com/wp-content/uploads/2019/11/astrology.jpg)
ರೈಸಿಂಗ್ ಕನ್ನಡ : ಇವತ್ತು ಮಧ್ಯರಾತ್ರಿಯಿಂದ ಗುರು ವೃಶ್ಚಿಕರಾಶಿಯಿಂದ ಧನುರಾಶಿಗೆ ಪ್ರವೇಶ ಆಗ್ತಿದೆ. ಇದರಿಂದಾಗಿ ಎಲ್ಲರ ರಾಶಿ, ದ್ವಾದಶರಾಶಿಯಲ್ಲಿ ಬದಲಾವಣೆಗಳಾಗ್ತಿದೆ. ಡಾ.ಬಸವರಾಜ ಗುರೂಜಿ ಎಲ್ಲರ ದ್ವಾದಶರಾಶಿಗಳ ಬಗ್ಗೆ ವಿವರಿಸಿದ್ದಾರೆ. ಬನ್ನಿ ನೋಡೋಣ.
ಮೇಷರಾಶಿ : ನೀವು ಭಾಗ್ಯಸ್ಥಾನಕ್ಕೆ ಬಂದಿರುವುದರಿಂದ, ಉತ್ತಮವಾಗಿ ಹಾಗು ಶತೃಗಳು ಪಶ್ಚಾತ್ತಾಪ ಪಟ್ಟು ನಿಮ್ಮ ಸಂಗಡ ಬರುತ್ತಾರೆ.
ವೃಷಭರಾಶಿ : ನಿಮಗೆ ಅಷ್ಟಮಸ್ಥಾನ ಆಗಿರುವುದರಿಂದ ಅನಾರೋಗ್ಯಕ್ಕೆ ಗುರಿಯಾಗುವ ಸಂಭವ.
ಮಿಥುನರಾಶಿ : ನಿಮಗೆ ಸಪ್ತಮಸ್ಥಾನ ಆಗಿರುವುದರಿಂದ, ಅಧಿಕವಾದ ಧನಲಾಭ ಮತ್ತು ಕಂಕಣಭಾಗ್ಯ ಕೂಡಿಬರುವ ಶುಭ ಸಮಯ.
ಕರ್ಕಾಟಕ ರಾಶಿ : ನಿಮಗೆ ಷಷ್ಟಮಸ್ಥಾನ, ಅಂದರೆ ಆರೋಗ್ಯಸ್ಥಾನ ಆಗಿರುವುದರಿಂದ ನೀವು ಅತಿಯಾಗಿ ನಂಬಿದ ಮಿತ್ರರು ಬಂಧುಗಳು ಶತೃತ್ವತಾಳಿ ನಿಮಗೆ ತೊಂದರೆಯನ್ನುಂಟು ಮಾಡುವ ದಿನಗಳು.
ಸಿಂಹರಾಶಿ : ನಿಮಗೆ ಪಂಚಮಸ್ಥಾನ ಆಗಿರುವುದರಿಂದ, ಪುತ್ರಸಂತತಿ ಹಾಗೂ ಧನಲಕ್ಷ್ಮಿ ಆಗಮನ ಆಗುವ ಶುಭದಿನಗಳು.
ಕನ್ಯಾರಾಶಿ : ನಿಮಗೆ ಮಾತೃಭಾವದಲ್ಲಿ ಬಂದಿರುವುದರಿಂದ, ಮಾತೃ ಸಂಬಂಧಿಕರಿಂದ ಮತ್ತು ಬಂದು ಬಳಗದವರಿಂದ ಇಲ್ಲ ಸಲ್ಲದ ಆರೋಪಗಳು ಬರುವ ಸಂಭವ.
ತುಲಾರಾಶಿ : ನಿಮಗೆ ಭ್ರಾತೃಸ್ಥಾನದಲ್ಲಿ ಬಂದಿರುವುದರಿಂದ, ಸ್ಥಿತಿಗತಿಗಳು ಕೆಳಮುಖವಾಗುವ ಸಂಭವ.
ವೃಶ್ಚಿಕರಾಶಿ : ನಿಮಗೆ ಧನ ಮತ್ತು ನೇತ್ರಭಾವದಲ್ಲಿ ಬಂದಿರುವುದರಿಂದ, ಅಧಿಕವಾದ ಧನಲಾಭ, ಉತ್ಸಾಹ ತುಂಬಿ ತುಳುಕುತ್ತದೆ.
ಧನುರಾಶಿ : ನಿಮಗೆ ಸ್ವಸ್ಥಾನಕ್ಕೆ ಗುರು ಬಂದಿರುವುದರಿಂದ, ದುಖಃದ ಪ್ರಸಂಗಗಳನ್ನೇ ಎದುರಿಸಬೇಕಾದ ಸಮಯ.
ಮಕರರಾಶಿ : ನಿಮಗೆ ದ್ವಾದಶಸ್ಥಾನ ಆಗಿರುವುದರಿಂದ, ಅಧಿಕವಾದ ಕರ್ಚುಗಳು ಆದಾಯಕ್ಕೆ ಮೀರಿದ ಖರ್ಚುಗಳು ಮತ್ತು ಜನ ವಿರೋಧವಾಗುವ ಸಂಭವ.
ಕುಂಭರಾಶಿ : ನಿಮಗೆ ಲಾಭಸ್ಥಾನದಲ್ಲಿ ಬಂದಿರುವುದರಿಂದ ನಿಮ್ಮ ಪ್ರತಿಷ್ಠೆಯು ಸಮಾಜದಲ್ಲಿ ಬೆಳೆದು, ಪ್ರಶಂಸೆಗಳನ್ನು ಪಡೆಯತಕ್ಕ ಶುಭದಿನಗಳು.
ಮೀನರಾಶಿ : ನಿಮಗೆ ದಶಮಸ್ಥಾನ ಆಗಿದ್ದರಿಂದ ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗುವ ಸಂಭವ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?