Featured
ನಮ ನಮ ನಮಸ್ತೆ, ಏನಿದು ಅವಸ್ಥೆ..! – ಬೆಂಗಳೂರು ಬದುಕನ್ನ ಬಿಚ್ಚಿಟ್ಟ “ಫ್ರೆಂಚ್ ಬಿರಿಯಾನಿ” ಹಾಡು..!
ರೈಸಿಂಗ್ ಕನ್ನಡ :
ಸಿನಿಮಾ ಡೆಸ್ಕ್ :
ಈಗಾಗಲೇ ತನ್ನ ಡಿಫ್ರೆಂಟ್ ಟ್ರೇಲರ್ ಮೂಲಕ, ಕನ್ನಡ ಪ್ರೇಕ್ಷಕರ ಮನಗೆದ್ದಿರೋ ಫ್ರೆಂಚ್ ಬಿರಿಯಾನಿ ಚಿತ್ರ ತಂಡ, ತನ್ನ ಮೊದಲ ಹಾಡನ್ನ ರಿಲೀಸ್ ಮಾಡಿದೆ. ಅತಿಥಿ ದೇವೋಭವ ಅಂತ ಶುರುವಾಗೋ ಹಾಡು ರ್ಯಾಪ್ ಮಾದರಿಯಲ್ಲಿದ್ದು, ಕೇಳೋಕೆ ಮಜವಾಗಿದೆ.
ಹಾಡಿನಲ್ಲಿ ಬೆಂಗಳೂರಿನ ಎಲ್ಲಾ ಮುಖ್ಯ ಸ್ಥಳಗಳನ್ನ ತೋರಿಸೋ ಪ್ರಯತ್ನವನ್ನ ಚಿತ್ರತಂಡ ಮಾಡಿದೆ. ನಮೋ ನಮೋ ನಮಸ್ತೆ, ಏನಿದು ಅವಸ್ಥೆ ಅನ್ನೋ ಹಾಡನ್ನ ಗಾಯಕಿ ಅಧಿತಿ ಸಾಕರ್ ಅದ್ಭುತವಾಗಿ ಹಾಡಿದ್ದಾರೆ.
ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತವಿದ್ದು, ನಮೋ ನಮೋ ನಮಸ್ತೆ, ಏನಿದು ಅವಸ್ತೆ ಹಾಡಿನ ಸಾಹಿತ್ಯವನ್ನ ಸ್ವತಃ ವಾಸುಕಿ ವೈಭವ್ ಮತ್ತು ಅವಿನಾಶ್ ಬಳೆಕ್ಕಲಾ ಬರೆದಿದ್ದಾರೆ.
ಹಾಡಿನಲ್ಲಿ ಬರೋ ಅತಿ ವೇಗ, ತಿಥಿ ಬೇಗ, ಅರ್ಜೆಂಟ್ ಇನ್‌ಯಾತಕ್ಕೆ… ಹೆಲ್ಮೆಟ್ ಹಾಕ್ದೇ ಇದ್ರೆ, ತಲೆ ಒಡೆದುಹೋಗೋ ಮಡಿಕೆ ಅನ್ನೋ ಸಾಲುಗಳು ತುಂಬಾನೆ ಅರ್ಥಗರ್ಭಿತವಾಗಿವೆ. ಬೇರೆ ಊರಿನಿಂದ ಬೆಂಗಳೂರಿಗೆ ಬರೋರ ಬದುಕು ಹೇಗಿರಲಿದೆ ಅನ್ನೋದೆ ಹಾಡಿನ ಸಾರಾಂಶವಾಗಿದೆ.
ಗುರುವಾರ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು, 24 ಗಂಟೆಯೊಳಗೆ 2.8 ಮಿಲಿಯನ್‌ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದರು. ಇದು ಕನ್ನಡ ಸಿನಿಮಾ ವಿಚಾರದಲ್ಲಿ ಭಾರೀ ನಿರೀಕ್ಷೆ ತಂದು ಕೊಟ್ಟಿದೆ. ಫ್ರೆಂಚ್ ಬಿರಿಯಾನ್ ಕಾಮಿಡಿ ಸಿನಿಮಾಗೆ ಮಿಸ್ಟರ್ ನ್ಯಾಗ್ಸ್ ಖ್ಯಾತಿಯ ಡ್ಯಾನಿಶ್ ಸೇಠ್ ಮುಖ್ಯಪಾತ್ರದಲ್ಲಿ ಕಾಮಿಸಿಕೊಂಡಿದ್ದು, ಆಟೋ ಡ್ರೈವರ್ ಆಗಿ ಅಭಿಮಾನಿಗಳನ್ನ ರಂಜಿಸಲಿದ್ದಾರೆ.
ಪನ್ನಗ ಭರಣ ನಿರ್ದೇಶವಿರೋ ಈ ಚಿತ್ರವನ್ನ ಅವಿನಾಶ್ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ತ ಎ ತಲ್ವಾರ್ ನಿರ್ಮಿಸಿದ್ದಾರೆ. ಪಿಆರ್‌ಕೆ ಪ್ರೋಡಕ್ಷನ್ ಬ್ಯಾನ್ರ್ ಅಡಿಯಲ್ಲಿ ಸಿನಿಮಾ ಸೆಟ್ಟೇರಿದೆ. ಚಿತ್ರ ಜುಲೈ 24ರಂದು ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?