Featured
#FreeTheNipple : ಮಹಿಳೆಯರು ಟಾಪ್ಲೆಸ್ ಆಗಿ ಬ್ರಾ ಇಲ್ಲದೇ ತಿರುಗಬಹುದು : ಕೋರ್ಟ್ ಗ್ರೀನ್ ಸಿಗ್ನಲ್..!
![](https://risingkannada.com/wp-content/uploads/2019/09/IMG-20190927-WA0000.jpg)
ರೈಸಿಂಗ್ ಕನ್ನಡ : ಇದು ಅಚ್ಚರಿಯಾದ್ರೂ ಸತ್ಯ. ಇನ್ಮುಂದೆ ಮಹಿಳೆಯರು ಕೂಡ ಪುರುಷರಂತೆ, ಟಾಪ್ಲೆಸ್ ಆಗಿ, ಬ್ರಾ ಕೂಡ ಹಾಕದೇ ಸಾವರ್ಜನಿಕವಾಗಿ ಓಡಾಡಬಹುದು. ಹೀಗಂತ ಅಮೆರಿಕದ ಕೋರ್ಟ್ ಆದೇಶ ನೀಡಿದೆ. ಅಮೆರಿಕದ ಉಟಾ, ಕೊಲರಾಡೋ, ಹೋಮಿಂಗ್, ನ್ಯೂಮೆಕ್ಸಿಕೋ, ಕನ್ಸಾಸ್, ಒಕ್ಲಹೋಮಾ ರಾಜ್ಯಗಳಲ್ಲಿ ಇನ್ಮುಂದೆ ಮಹಿಳೆಯರು ಹೀಗೆ ಟಾಪ್ಲೆಸ್ ಆಗಿ ತಿರುಗಬಹುದು ಎಂದು ಕೋರ್ಟ್ ಹೇಳಿದೆ.
ಇಷ್ಟಕ್ಕೂ ಈ ರೀತಿಯ ತೀರ್ಪು ಕೊಟ್ಟಿದ್ದು ಯಾಕೆ ಅಂದ್ರೆ, #FreeTheNepple ಅನ್ನೋ ಹೋರಾಟ ಬಹಳ ದಿನಗಳಿಂದ ನಡೆಯುತ್ತಿತ್ತು. ಮಹಿಳೆಯರಿಗೆ ಸಾರ್ವಜನಿಕವಾಗಿ ಟಾಪ್ಲೆಸ್ ಆಗಿ ತಿರುಗಲು ಅವಕಾಶ ಇಲ್ಲದೇ ಇರೋದು, ಅವರ ಹಕ್ಕು ಹಾಗೂ ಲಿಂಗ ಸಮಾನತೆಗೆ ವಿರುದ್ಧವಾದದ್ದು. ಹೀಗಾಗಿ, ಪುರುಷರಂತೆ ಮಹಿಳೆಯರಿಗೂ ಟಾಪ್ ಲೆಸ್ ಆಗಿ ಓಡಾಡಲು ಅವಕಾಶ ನೀಡಬೇಕು ಎಂದು ಇಬ್ಬರು ಮಹಿಳೆಯರು ಕೋರ್ಟ್ ಮೆಟ್ಟಿಲೇರಿದ್ದರು.
ಪ್ಲೆಯಿಂಟಿಫ್ಸ್ ಬ್ರಿಟ್ ಹೋಗ್ಲ್ಯಾಂಡ್, ಸಮಂತಾ ಸಿಕ್ಸ್ ಅನ್ನೋ ಇಬ್ಬರು ಮಹಿಳೆಯರು ಈ ಸಂಬಂಧ ಕೋರ್ಟ್ನಲ್ಲಿ ದೂರು ದಾಖಲಿಸಿದ್ರು. ಈ ಸಂಬಂಧ ವಾದ ಮಂಡಿಸಿದ ಇಬ್ಬರು ಮಹಿಳೆಯರು, ಬೇಸಿಗೆಯಲ್ಲಿ ಪುರುಷರು ತಮಗೆ ಇಷ್ಟ ಬಂದಂತೆ ಶರ್ಟ್ ಬಿಚ್ಚಿ ಓಡಾಡ್ತಾರೆ. ಅವರಿಗೆ ಇಷ್ಟ ಬಂದಂತೆ ಇರ್ತಾರೆ. ಆದ್ರೆ, ಮಹಿಳೆಯರಿಗೆ ಮಾತ್ರ ಯಾಕೆ ಕಟ್ಟುಪಾಡು. ಪುರುಷರು, ಸ್ತ್ರೀಯರ ಮಧ್ಯೆ ಲಿಂಗಬೇಧ ಯಾಕೆ..? ಎಂದು ಪ್ರಶ್ನೆ ಮಾಡಿದ್ರು.
ಕೊನೆಗೆ ಮಹಿಳೆಯರ ವಾದಕ್ಕೆ ಒಪ್ಪಿದ ಕೋರ್ಟ್, ಮಹಿಳೆಯರಿಗೆ ಟಾಪ್ ಲೆಸ್ ಆಗಿ ಓಡಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಅವರ ದೇಹ ಮತ್ತು ಸ್ತನಗಳು ಕೇವಲ ಶೃಂಗಾರಕ್ಕೆ ಸೀಮಿತ ಅನ್ನೋ ಭಾವನೆ ಬಂದಿದೆ. ಈ ಅಭಿಪ್ರಾಯದಿಂದ ಜನ ಹೊರಗೆ ಬರಬೇಕು. ಇದಕ್ಕಾಗಿ ಮಹಿಳೆಯರು ಟಾಪ್ಲೆಸ್ ಆಗಿ ಸಾವರ್ಜನಿಕವಾಗಿ ತಿರುಗಬಹುದು ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಇದೀಗ, ಸ್ಥಳೀಯ ಕೋರ್ಟ್ ಆದೇಶವನ್ನ ಪ್ರಶ್ನಿಸಿ, ಸ್ಥಳೀಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?