ಕ್ರೀಡೆ
ರಾಹುಲ್ ಬೆನ್ನಿಗೆ ನಿಂತ ಮಾಜಿ ಕೋಚ್

IPL 2024: ಲಕ್ನೋ ತಂಡದ ಮಾಜಿ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಕೆಎಲ್ ರಾಹುಲ್ ಬೆಂಬಲಕ್ಕೆ ನಿಂತಿದ್ದಾರೆ. ಗೌತಮ್ ಗಂಭೀರ್ ಮಾಜಿ ತಂಡದ ಮಾಲೀಕನ ಹೆಸರನ್ನುನ ತೆಗೆದುಕೊಳ್ಳದೆ ಹಾಲಿ ತಂಡದ ಮಾಲೀಕ ಶಾರುಖ್ ಖಾನ್ ಅವರನ್ನು ಉದಾಹರಣೆ ನೀಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಮೇ 8 ರಂದು ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ (SRH vs LSG) ತಂಡ 10 ವಿಕೆಟ್ಗಳ ಹೀನಾಯ ಸೋಲು ಅನುಭವಿಸಿತ್ತು. ಲಕ್ನೋ ನೀಡಿದ್ದ 165 ರನ್ಗಳ ಗುರಿಯನ್ನು ಹೈದರಾಬಾದ್ ತಂಡ 9.4 ಓವರ್ಗಳಲ್ಲಿ ಬೆನ್ನಟ್ಟಿತ್ತು.
ಹೀನಾಯ ಸೋಲಿನ ಬಳಿಕ ತಾಳ್ಮೆ ಕಳೆದುಕೊಂಡಿದ್ದ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ (Sanjiv Goenka) ಲಕ್ನೋ ನಾಯಕ ಕೆಎಲ್ ರಾಹುಲ್ (KL Rahul) ಮೇಲೆ ಎಲ್ಲರೆದುರೆ ಹರಿಹಾಯ್ದಿದ್ದರು. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಆ ಬಳಿಕ ಎಲ್ಲರೂ ಸಂಜೀವ್ ಗೋಯೆಂಕಾ ಅವರ ನಡೆಯನ್ನು ಟೀಕಿಸಿದ್ದರು. ಇದೀಗ ಟೀಂ ಇಂಡಿಯಾ ಆಟಗಾರರು ಕೂಡ ಈ ವಿಚಾರದಲ್ಲಿ ಸಂಜೀವ್ ಗೋಯೆಂಕಾ ಅವರನ್ನು ಟೀಕಿಸಲು ಆರಂಭಿಸಿದ್ದಾರೆ.
ಮೊದಲಿಗೆ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ, ಎಲ್ಲರ ಮುಂದೆ ಈ ರೀತಿ ಮಾತನಾಡುವುದು ನಾಚಿಕೆಗೇಡಿನ ಸಂಗತಿ, ಡ್ರೆಸ್ಸಿಂಗ್ ರೂಮ್‌ನಲ್ಲೇ ಇದೆಲ್ಲಾ ನಡೆಯಬೇಕು ಎಂದಿದ್ದರು. ಇದೀಗ ಲಕ್ನೋ ತಂಡದ ಮಾಜಿ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಕೆಎಲ್ ರಾಹುಲ್ ಬೆಂಬಲಕ್ಕೆ ನಿಂತಿದ್ದಾರೆ.
ಗೌತಮ್ ಗಂಭೀರ್ ಮಾಜಿ ತಂಡದ ಮಾಲೀಕನ ಹೆಸರನ್ನುನ ತೆಗೆದುಕೊಳ್ಳದೆ ಹಾಲಿ ತಂಡದ ಮಾಲೀಕ ಶಾರುಖ್ ಖಾನ್ ಅವರನ್ನು ಉದಾಹರಣೆ ನೀಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?