Featured
ವಿಜಯಪುರ ಜಿಲ್ಲೆಯಲ್ಲಿ ವರುಣನ ಆರ್ಭಟ: ಉಕ್ಕಿ ಹರಿದ ಭೀಮಾ ನದಿ
ರೈಸಿಂಗ್ ಕನ್ನಡ:
ವಿಜಯಪುರ:
ವಿಜಯಪುರ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಜಿಲ್ಲೆಯ ಭೀಮಾ ನದಿ ತುಂಬಿ ಹರಿಯುತ್ತಿದೆ.
ಕಳೆದ ಕೆಲವು ದಿನಗಳಿಂದಾಗಿ ಭೀಮಾ ನದಿ ತುಂಬಿ ಹರಿಯುತ್ತಿರೋ ಹಿನ್ನಲೆಯಲ್ಲಿ ಇಲ್ಲಿನ ಉಮರಾಣಿ-ಸೈದಾಪುರ ಸಂಪರ್ಕ ಸೇತುವೆ ಜಲಾವೃತವಾಗಿದೆ.
ಚಡಚಣ ತಾಲೂಕಿನ ಉಮರಾಣಿ ಬಳಿ ಇರೋ ಸೇತುವೆ ಮಹಾರಾಷ್ಟ್ರದ ಸೈದಾಪುರಕ್ಕೆ ಸಂಪರ್ಕ ಕೊಂಡಿಯಾಗಿರುವ ಸೇತುವೆಯಾಗಿದೆ.
ಉಮರಾಣಿ ಸೇತುವೆ ಮೇಲೆ ಭೀಮಾ ನದಿ ನೀರು ಉಕ್ಕಿ ಹರಿಯುತ್ತಿದೆ.ಇದರ ಪರಿಣಾಮ ವಿಜಯಪುರ, ಮಹಾರಾಷ್ಟ್ರದಸೊಲ್ಲಾಪುರ ಜಿಲ್ಲೆಗೆ ಸಂಪರ್ಕ ಕಡಿತಗೊಂಡಿದೆ. ಉಮರಾಣಿ ಮಾರ್ಗವಾಗಿ ತೆರಳುವ ಮಾರ್ಗ ಬಂದ್ ಆಗಿದೆ.
ಸೇತುವೆ ಮುಳುಗಡೆ ಹಿನ್ನೆಲೆಯಲ್ಲಿ ಸುತ್ತ ಮುತ್ತಲ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.ಈಗಾಗಲೇ ಭೀಮಾ ನದಿ ಸೇತುವೆ ಎರಡು ಜೀವಗಳ ಬಲಿ ಪಡೆದಿದೆ.
ಪ್ರತೀ ವರ್ಷವೂ ಭೀಮಾ ನದಿ ಉಕ್ಕಿ ಹರಿದಾಗ ಇದೇ ಸಮಸ್ಯೆ ಅಗುತ್ತಿದೆ. ಸೇತುವೆಯನ್ನ ಮೇಲ್ದರ್ಜೆಗೆ ಏರಿಸುವಂತೆ ಸರ್ಕಾರಕ್ಕೆ ಈ ಹಿಂದೆ ಕೂಡ ಆಗ್ರಹಿಸಲಾಗಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?