Featured
ಯಾದಗಿರಿಯಲ್ಲಿ ಪ್ರವಾಹ: ಛಾಯಾಭಗವತಿ ದೇಗುಲಕ್ಕೆ ಜಲದಿಗ್ಬಂಧನ- ದೇವಿಯ ಪಾದ ಸ್ಪರ್ಷಿಸಿದ ಕೃಷ್ಣೆ

ರೈಸಿಂಗ್ ಕನ್ನಡ :
ಯಾದಗಿರಿ:
ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ನೀರು ಬಿಡುಗಡೆ ಮಾಡಿದ ಪರಿಣಾಮ ಜಿಲ್ಲೆಯ ಛಾಯಾಭಗವತಿ ದೇಗುಲ ಜಲದಿಗ್ಬಂಧನ ಒಳಪಟ್ಟಿದೆ.
ಯಾದಗಿರಿ ಬಸವಸಾಗರ ಜಲಾಶಯದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ,ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಕೃಷ್ಣಾ ನದಿ ತೀರದಲ್ಲಿರುವ ಛಾಯಾಭಗವತಿ ದೇವಸ್ಥಾನ ಜಲಾವೃತವಾಗಿದೆ.
ಜಿಲ್ಲೆಯ ದಕ್ಷಿಣ ಕಾಶಿ ಎಂದೆ ಖ್ಯಾತಿಯಾದ ಛಾಯಾಭಗವತಿ ದೇವಸ್ಥಾನ ಎಂಬ ಹಿರಿಮೆಗೆ ಪಾತ್ರವಾಗಿದೆ. ಪ್ರಮುಖ ದೇವಾಲಯ ಛಾಯಾಭಗವತಿ ದೇಗುಲ ನೀರಿನಿಂದ ಜಲಾವೃತವಾಗಿದೆ.
ದೇವಾಲಯದ ಮುಂಭಾಗದ ಮಂಟಪ ಮುಳುಗಡೆಯಾಗಿದೆ. ದೇವಾಲಯದ ಗರ್ಭಗುಡಿಯೊಳಗೆ ನುಗ್ಗಿದ ನೀರು,ಛಾಯಾಭಗವತಿ ದೇವಿಯ ಪಾದವನ್ನ ಕೃಷ್ಣೆ ಸ್ಪರ್ಶಿಸಿದೆ.
ಸೋಮವಾರದಿಂದ ಭಕ್ತರಿಗೆ ದರ್ಶನಕ್ಕೆ ಜಲದಿಗ್ಬಂಧನ ಹಾಕಿದ ಕೃಷ್ಣಾ ನದಿ ನೀರು, ದೇವಾಲಯದ ಎತ್ತರ ಭಾಗದ ಮೆಟ್ಟಿಲುಗಳ ಮೇಲೆ ಅರ್ಚಕರು ದೇವಿಯ ಮೂರ್ತಿ ಇಟ್ಟು ಪೂಜೆ ಮಾಡುತ್ತಿದ್ದಾರೆ. ಮೆಟ್ಟಿಲುಗಳ ಮೇಲಿಟ್ಟಿರುವ ಮೂರ್ತಿಯ ಮೂಲಕ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















