Featured
ಸಂತ್ರಸ್ಥರಿಗೆ ಶೌಚಾಲಯ ಇಲ್ಲ, ಬೀದಿಯಲ್ಲೇ ಪಾಠ : ರಾಜ್ಯ ಸರ್ಕಾರದ ಸಿದ್ದು ವಾಗ್ದಾಳಿ
![](https://risingkannada.com/wp-content/uploads/2019/11/siddu-bsy.jpg)
ಬೆಂಗಳೂರು : ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶವನ್ನ ಮತ್ತೊಮ್ಮೆ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತ್ನಾಡಿದ ಸಿದ್ದು, ಉತ್ತರ ಕರ್ನಾಟಕದಲ್ಲಿ ಸಂತ್ರಸ್ಥರಿಗೆ ಶೆಡ್ ಮಾತ್ರ ಹಾಕಲಾಗಿದೆ. ಕನಿಷ್ಠ ಶೌಚಾಲಯಗಳೂ ಇಲ್ಲದೇ, ಬಯಲಲ್ಲೇ ಶೌಚಕ್ಕೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.
ಬಹುತೇಕ ಶಾಲಾ ಕಟ್ಟಡಗಳು ಬಿದ್ದುಹೋಗಿವೆ. ಮಕ್ಕಳಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಬೀದಿಯಲ್ಲೇ ಮಕ್ಕಳು ಪಾಠ ಕೇಳುವಂತಾಗಿದೆ. ಇದರ ಜೊತೆ ತಾತ್ಕಾಲಿಕ ಶೆಡ್ಗೆ ಹೋಗಲು ಕೂಡ ಜನ ಭಯ ಪಡ್ತಿದ್ದಾರೆ ಎಂದು ಜನರ ನೋವು ಹೊರಹಾಕಿದ್ರು.
ನೆರೆಯಿಂದಾಗಿ ಸುಮಾರು ೧೮೦೦ ಮಗ್ಗಗಳು ಮಳೆಗೆ ಕೊಚ್ಚಿ ಹೋಗಿವೆ. ಸರ್ಕಾರ ಒಂದು ಮಗ್ಗಕ್ಕೆ ೨೫ ಸಾವಿರ ಕೋಡೋದಾಗಿ ಹೇಳಿತ್ತು. ಆದ್ರೆ, ಆರು ಮಗ್ಗ ಹೋಗಿದ್ದರೂ ೨೫ ಸಾವಿರ, ಒಂದು ಮಗ್ಗ ಕಳೆದುಕೊಂಡ್ರೂ ೨೫ ಸಾವಿರ ಕೊಡ್ತಿದೆ. ಮೂರು ತಿಂಗಳಾದ್ರೂ ಪರಿಹಾರ ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?