Featured
ಕೃಷ್ಣಾ ನದಿಯಲ್ಲಿ ಪ್ರವಾಹ ಯಾದಗಿರಿ-ರಾಯಚೂರು ಸಂಪರ್ಕ ಕಡಿತ- ಪದೇ ಪದೇ ಪ್ರವಾಹ ಭೀತಿಗೆ ಕಂಗೆಟ್ಟ ಕೃಷ್ಣಾ ತೀರದ ಜನರು
ರೈಸಿಂಗ್ ಕನ್ನಡ:
ದುರ್ಗೇಶ್ ಮಂಗಿಹಾಳ, ಯಾದಗಿರಿ:
ಯಾದಗಿರಿಯ ಕೃಷ್ಣಾ ನದಿ ಪ್ರವಾಹಕ್ಕೆ ಕೊಳ್ಳುರು – ಹೂವಿನಹೆಡಗಿ ಸೇತುವೆ ಜಲಾವೃತವಾಗಿದೆ. ಹುಣಸಗಿಯ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 260500 ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದ ಸಮೀಪದ ಕೊಳ್ಳುರು ಸೇತುವೆ ಸಂಪೂರ್ಣ ಜಲಾವೃತವಾಗಿದ್ದು. ನದಿ ಪಕ್ಕದ ಜಮೀನುಗಳಿಗೆ ನದಿ ನೀರು ನುಗ್ಗಿದ್ದು, ನೂರಾರು ಎಕರೆಯಲ್ಲಿ ನಾಟಿ ಮಾಡಿದ್ದ ಭತ್ತ, ಇತರ ಬೆಳೆಗಳು ನೀರಲ್ಲಿ ಮುಳುಗಿವೆ.
ಅಲ್ಲದೆ ನಿನ್ನೆ ತಡರಾತ್ರಿ ಏಕಾಏಕಿ ಪ್ರವಾಹ ಹಿನ್ನೆಲೆಯಲ್ಲಿ ರೈತರ ಪಂಪ್ ಸೆಟ್‌ಗಳು ನೀರಲ್ಲಿ ಮುಳುಗಿದ್ದು, ಪಂಪ್ಸೆಟ್ ತೆಗೆಯಲು ರೈತರು ಹರಸಹಸ ಪಡುತ್ತಿದ್ದಾರೆ. ಇನ್ನೂ ಯಾದಗಿರಿ- ರಾಯಚೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳಗಡೆಯಿಂದ ಸೇತುವೆ ಮೇಲೆ ಸಂಚಾರಕ್ಕೆ ನಿಷೇಧಿಸಲಾಗಿದೆ. ಪ್ರವಾಹದ ಅಬ್ಬರಕ್ಕೆ ಮತ್ತೊಮ್ಮೆ ಸೇತುವೆ ಮುಳುಗಡೆ ಆಗಿದ್ದು ಯಾದಗಿರಿ-ರಾಯಚೂರು ಸಂಪರ್ಕ ಕಡಿತಗೊಂಡಿದೆ.
You may like
ಅಪಾಯ ಮೀರಿ ಹರಿಯುತ್ತಿದೆ ವಿಜಯಪುರದ ಭೀಮಾ ನದಿ: ಗ್ರಾಮಗಳಿಗೆ ಪ್ರವಾಹ ನೀರು ನುಗ್ಗುವ ಆತಂಕ
ವಿಜಯಪುರದಲ್ಲಿ ಸತತ ಮಳೆ : ಡೋಣಿ ನದಿಯಲ್ಲಿ ನೀರು ಹೆಚ್ಚಳ
ನೀರಿನಲ್ಲಿ ಕೊಚ್ಚಿ ಹೋದ ವೃದ್ಧ: ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರು
ಉತ್ತರ ಕರ್ನಾಟಕದ ಬಹುತೇಕ ಕಡೆ ಪ್ರವಾಹ: ಪರಿಹಾರ ಬಿಡುಗಡೆ ಮಾಡುವೆ: ಆರ್.ಅಶೋಕ್
ತುಂಬಿದ ಕೃಷ್ಣೆಗೆ ಸಿಎಂ ಯಡಿಯೂರಪ್ಪ ಬಾಗಿನ ಸಮರ್ಪಣೆ:ಸಚಿವರೊಂದಿಗೆ ವೈಮಾನಿಕ ಸಮೀಕ್ಷೆ
ತುಂಗಭದ್ರಾ ಜಲಾಶಯದಿಂದ ನೀರು : ಬಳ್ಳಾರಿ, ಕೊಪ್ಪಳ ಸಂಪರ್ಕಿಸುವೆ ಸೇತುವೆ ಮುಳುಗಡೆ: ಸಂಚಾರ ಬಂದ್