Featured
ಮಹಾರಾಷ್ಟ್ರದಲ್ಲಿ ಮಳೆ- ಕರ್ನಾಟಕದಲ್ಲಿ ಪ್ರವಾಹ ಭೀತಿ- ಕೃಷ್ಣೆ, ವೇದಗಂಗಾ, ದೂಧ್ಗಂಗಾ ನದಿಗಗಳಲ್ಲಿ ಪ್ರವಾಹ..!
![](https://risingkannada.com/wp-content/uploads/2020/08/UK-FLOOD.jpg)
ರೈಸಿಂಗ್ ಕನ್ನಡ:
ರವೀಂದ್ರ ಚೌಗುಲೆ, ಚಿಕ್ಕೋಡಿ:
ಉತ್ತರ ಕರ್ನಾಟಕದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುಂಬೈ ಕರ್ನಾಟಕ ಭಾಗವಾದ ಚಿಕ್ಕೋಡಿ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಭಾಗಗಳಲ್ಲಿ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿವೆ. ಗಡಿಭಾಗದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೃಷ್ಣೆಯ ಪ್ರವಾಹ ಭೀತಿ ಎದುರಾಗಿದೆ.ಕೃಷ್ಣಾ ಹಾಗೂ ಉಪನದಿಗಳಾದ ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಚಿಕ್ಕೋಡಿ ಉಪವಿಭಾಗದ ಕೆಳಹಂತದ ಆರು ಸೇತುವೆಗಳು ಜಲಾವೃತವಾಗಿವೆ.
ಚಿಕ್ಕೋಡಿ ಉಪವಿಭಾಗದ ಯಡೂರ – ಕಲ್ಲೋಳ, ಜತ್ರಾಟ-ಭೀವಶಿ, ಅಕ್ಕೋಳ-ಸಿದ್ದನಾಳ, ಭೋಜವಾಡಿ – ಕುನ್ನೂರ, ಕಾರದಗಾ-ಭೋಜ, ಹುನ್ನರಗಿ-ಭೋಜವಾಡಿ, ಸೇತುವೆಗಳು ಜಲಾವೃತಗೊಂಡಿವೆ. ನಿಪ್ಪಾಣಿ ತಾಲೂಕಿನ ಜತ್ರಾಟ ಗ್ರಾಮ ಬಳಿ ವೇದಗಂಗಾ ನದಿ ನೀರು ಹೊಲಗದ್ದೆಗಳಿಗೆ ನುಗ್ಗಿದ ಪರಿಣಾಮ ನೂರಾರು ಎಕರೆ ಬೆಳೆದಿದ ಬೆಳೆ ಹಾನಿಯಾಗಿದೆ. ನಿಪ್ಪಾಣಿ ತಾಲೂಕಿನ ಸದಲಗಾ-ಬೊರಗಾಂವ ಜಲಾವೃತಗೊಂಡ ರಸ್ತೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ ಸವಾರನನ್ನು ಸ್ಥಳಿಯರು ರಕ್ಷಣೆಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೇತುವೆಗಳ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿ ತಾಲೂಕಾಡಳಿತ ಆದೇಶ ಹೊರಡಿಸಿದೆ. ಕೃಷ್ಣಾ ನದಿಗೆ ನೀರು ಹೆಚ್ಚಳ ಹಿನ್ನಲೆ ರಾತೋರಾತ್ರಿ ನದಿ ತೀರಕ್ಕೆ ಭೇಟಿ ನೀಡಿದ ತಾಲುಕಾಡಳಿತ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವಿಂದ್ರ ಕರಲಿಂಗನ್ನವರ ಹಾಗೂ ತಾಲೂಕಾ ಅಧಿಕಾರಿಗಳು ಕೃಷ್ಣಾ ನದಿ ತೀರದ ಯಡೂರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಪ್ರವಾಹ ಮುಂಜಾಗ್ರತ ಕ್ರಮವಾಗಿ ಆಗಮಿಸಿದ ಎನ್.ಡಿ.ಆರ್.ಎಪ್ ತಂಡದ ಜೊತೆ ಚರ್ಚೆ ನಡೆಸಿ, ಪ್ರವಾಹ ಮುಂಜಾಗೃತ ಕ್ರಮಕ್ಕೆ ರೆಡಿಯಾಗುವಂತೆ ಸೂಚನೆ ನೀಡಲಾಗಿದೆ.
You may like
ವಿಜಯಪುರದಲ್ಲಿ ಸತತ ಮಳೆ : ಡೋಣಿ ನದಿಯಲ್ಲಿ ನೀರು ಹೆಚ್ಚಳ
ತುಂಬಿದ ಕೃಷ್ಣೆಗೆ ಸಿಎಂ ಯಡಿಯೂರಪ್ಪ ಬಾಗಿನ ಸಮರ್ಪಣೆ:ಸಚಿವರೊಂದಿಗೆ ವೈಮಾನಿಕ ಸಮೀಕ್ಷೆ
ಯಾದಗಿರಿಯಲ್ಲಿ ಪ್ರವಾಹ: ಛಾಯಾಭಗವತಿ ದೇಗುಲಕ್ಕೆ ಜಲದಿಗ್ಬಂಧನ- ದೇವಿಯ ಪಾದ ಸ್ಪರ್ಷಿಸಿದ ಕೃಷ್ಣೆ
ಕೃಷ್ಣಾ ನದಿ ನೀರಿನ ಪ್ರವಾಹ : ಕೊಳ್ಳುರು – ಹೂವಿನಹೆಡಗಿ ಸೇತುವೆ ಜಲಾವೃತ
ಕೃಷ್ಣಾ ನದಿ ಪ್ರವಾಹ ಹೆಚ್ಚಳ ಸಾಧ್ಯತೆ: ಸಂಭಾವ್ಯ ಪ್ರವಾಹ ಎದುರಿಸಲು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ಸೂಚನೆ
ಕೃಷ್ಣಾ ನದಿಯಲ್ಲಿ ಪ್ರವಾಹ ಯಾದಗಿರಿ-ರಾಯಚೂರು ಸಂಪರ್ಕ ಕಡಿತ- ಪದೇ ಪದೇ ಪ್ರವಾಹ ಭೀತಿಗೆ ಕಂಗೆಟ್ಟ ಕೃಷ್ಣಾ ತೀರದ ಜನರು