Featured
ಮಳೆ ಅಬ್ಬರಕ್ಕೆ ತತ್ತರಿಸಿದ ಜನತೆ- ಕರ್ನಾಟಕದಾದ್ಯಂತ ಜನ ಜೀವನ ಅಸ್ತವ್ಯಸ್ತ
![](https://risingkannada.com/wp-content/uploads/2020/07/YDG-rain1.jpg)
ರೈಸಿಂಗ್ ಕನ್ನಡ:
ದುರ್ಗೇಶ್ ಮಂಗಿಹಾಳ, ಯಾದಗಿರಿ:
ಯಾದಗಿರಿ ಜಿಲ್ಲೆಯ ವಿವಿಧ ಭಾಗದಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ ವಾಗಿದೆ. ರಾತ್ರಿ ಮೂರು ಗಂಟೆಗೂ ಹೆಚ್ಚು ಕಾಲ ವರ್ಷಧಾರೆ ಯಾಗಿದೆ. ಲುಂಬಿನಿ ಗಾರ್ಡನ್, ಸಣ್ಣ ಕೆರೆ, ಮಳೆಯಿಂದ ಸಂಪೂರ್ಣ ಮುಳಗಡೆ ಆಗಿದೆ. ಕೆರೆ ತುಂಬಿದ ಹಿನ್ನೆಲೆ ಪಕ್ಕದ ಅಂಬೇಡ್ಕರ್ ಬಡಾವಣೆಯ ಹಲವು ಮನೆಗೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಸಿದೆ.
ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಮನೆಯಲ್ಲಿದ್ದವರು ರಾತ್ರಿಯಿಡಿ ನೀರು ಹೊರ ಹಾಕಿ ಜಾಗರಣೆ ಮಾಡುವಂತಾಯ್ತು. ಚಿತ್ತಾಪುರ ರಸ್ತೆ ಬಳಿಯ ನಗರಸಭೆ ಕಾಂಪ್ಲೆಕ್ಸ್ಗೆ ನೀರು ನುಗ್ಗಿದ್ದು, ನೀರು ಹೊರ ಹಾಕಲು ಗೊಬ್ಬರ ಅಂಗಡಿ ಮಾಲೀಕರು ಪರದಾಡಿದ್ರು. ಅಲ್ಲದೆ ಯಾದಗಿರಿ ತಾಲೂಕಿನ ಪಗಲಾಪುರ, ಕೋಯಿಲೂರು ಗ್ರಾಮದ ಜಮೀನುಗಳಲ್ಲಿ ಹಳ್ಳದಂತೆ ನೀರು ಹರಿಯುತ್ತಿವೆ. ಜಿಲ್ಲೆಯ ಶಹಾಪುರ, ವಡಗೇರಾ, ಯಾದಗಿರಿ ಹಾಗೂ ಗುರುಮೀಠಕಲ್ ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು ಜನಜೀವನ ಹೈರಾಣಾಗುವಂತೆ ಮಾಡಿದ್ದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?