Featured
ಜಡಿ ಮಳೆಗೆ ಪತರಗುಟ್ಟಿದ ಬೆಳಗಾವಿ- ಪ್ರವಾಹದಲ್ಲಿ ಸಿಲುಕಿದ ರೈತನ ರೆಸ್ಕ್ಯೂ
ರೈಸಿಂಗ್ ಕನ್ನಡ :
ಬೆಳಗಾವಿ:
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾದ ಪರಿಣಾಮ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಅಲ್ಲದೇ, ಗಡಿ ಜಿಲ್ಲೆ ಬೆಳಗಾವಿಯ ವಿವಿಧ ಭಾಗಗಳು ಜಲಾವೃತವಾಗಿವೆ. ಇಲ್ಲಿನ ಪಾಂಡ್ರಿ ನದಿಯಲ್ಲಿ ಸಿಲುಕಿಕೊಂಡ ರೈತನನ್ನ ಬಚಾವ್ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಶಿಂದೋಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಹೊಲಕ್ಕೆ ಹೋಗಿದ್ದ ಕಾಪೋಲಿ ಗ್ರಾಮದ ರೈತ ವಿಲಾಸ ದೇಸಾಯಿ (60) ನದಿಯ ಪ್ರಹಾವದಲ್ಲಿ ಸಿಲುಕಿದ್ದರು. ನಾಲ್ಕು ಗಂಟೆಗಳ ಕಾಲ ಜೀವವನ್ನು ಕೈಯಲ್ಲಿ ಹಿಡಿದು ಮರ ಏರಿಕುಳಿತಿದ್ದರು. ಮಧ್ಯಾಹ್ನ 12 ಗಂಟೆಗೆ ರೈತ ವಿಲಾಸ ಪಾಂಡ್ರಿ ನದಿಗೆ ಸಿಲುಕಿರುವುದು ಸ್ಥಳೀಯರಿಗೆ ಗೊತ್ತಾಗಿದೆ. ಸ್ಥಳಕ್ಕೆ ಬಂದ ತಹಶೀಲ್ದಾರ ರೇಷ್ಮಾ ತಾಳಿಕೋಟೆ ರಕ್ಷಣೆ ಮಾಡಲು ಸೂಚಿಸಿದರು. ಖಾನಾಪುರ ಅಗ್ನಿ ಶಾಮಕ ದಳದ ಠಾಣಾಧಿಕಾರಿ ಮನೋಹರ ರಾಠೋಡ್ ಮತ್ತು ಪೊಲೀಸರು ಹಗ್ಗ ಕಟ್ಟಿ ಮರದಲ್ಲಿ ಸಿಲುಕಿದ್ದ ರೈತ ವಿಲಾಸನ್ನ ಸುರಕ್ಷಿತವಾಗಿ ರಕ್ಷಿಸಿದರು.
ಇನ್ನು ಚಿಕ್ಕೋಡಿಯಲ್ಲಿ ಮಹಾರಾಷ್ಟ್ರದ ಮಹಾ ಮಳೆಗೆ ಕೃಷ್ಣಾ ತೀರದ ಜನರಲ್ಲಿ ಆತಂಕ ಎದುರಾಗಿದೆ. ಒಂದೇ ರಾತ್ರಿ ಯಲ್ಲಿ ಸುಮಾರು 7 ಅಡಿ ನೀರು ಹೆಚ್ಚಳವಾಗಿದ್ದು ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ನದಿ ತೀರದ ಜನ ಆತಂಕಕ್ಕೀಡಾಗಿದ್ದಾರೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ 7 ಸೇತುವೆಗಳು ಜಲಾವೃತವಾಗಿವೆ.
ಮಲಪ್ರಭಾ ನದಿಯ ನವೀಲುತೀರ್ಥ ಜಲಾಶಯ ನೀರಿನ ಸಂಗ್ರಹ
ಗರಿಷ್ಠ ಮಟ್ಟ- 2079.50 ಅಡಿ
ಇಂದಿನ ಮಟ್ಟ- 2066.70 ಅಡಿ
ಒಳ ಹರಿವು- 48,821 ಕ್ಯೂಸೆಕ್
ಹೊರ ಹೊರಿವು- 164 ಕ್ಯೂಸೆಕ್
ಇಂದಿನ ಸಂಗ್ರಹ- 22.514 ಟಿಎಂಸಿ
ಜಲಾಶಯ ಸಾಮರ್ಥ್ಯ- 37.731 ಟಿಎಂಸಿ
ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ದತ್ತ ಮಂದಿರಕ್ಕೆ ನದಿ ನೀರು ನುಗ್ಗಿದೆ.
ಖಾನಾಪುರದಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಆಗುತ್ತಿದೆ.
ಬುಧವಾರ ಸುರಿದ ಭಾರೀ ಮಳೆಗೆ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಇಲ್ಲಿನ ಕೆರೆಕಟ್ಟೆ ಹೊಡೆದು ಹೋಗಿದೆ.
ಕಳೆದ ವರ್ಷವೂ ಮಳೆ ಇದೇ ಕೆರೆಕಟ್ಟೆ ಒಡೆದು ಹೋಗಿತ್ತು.
ನಿಪ್ಪಾಣಿ ತಾಲೂಕಿನ ಸದಲಗಾ-ಬೊರಗಾಂವ ಜಲಾವೃತಗೊಂಡಿತ್ತು ರಸ್ತೆಯಲ್ಲಿ ಕೊಚ್ಚಿ ಹೋಗುತಿದ್ದ ಬೈಕ ಸವಾರನ್ನು ಸ್ಥಳಿಯರಿಂದ ರಕ್ಷಣೆ ಮಾಡಲಾಗಿದೆ. ಕೃಷ್ಣಾ, ಧೂಧಗಂಗಾ ವೇದ ಗಂಗಾ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿದ ಏಳು ಸೇತುವೆಗಳು ಜಲಾವೃತವಾಗಿದೆ. ನದಿತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಚಿಕ್ಕೋಡಿಯ ಯಡೂರ ಗ್ರಾಮದಲ್ಲಿ ಬೀಡು ಬಿಟ್ಟ 25 ಜನ ಇರುವ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ ಮುನ್ನೆಚ್ಚರಿಕೆ ಕ್ರಮವಾಗಿ ನದಿತೀರದಲ್ಲಿ ಸಿಬ್ಬಂದಿ ನಿಯೋಜನೆ ಮಾಡಿದ ಜಿಲ್ಲಾಡಳಿತ.ನೋಡಲ್ ಅಧಿಕಾರಿಗಳಿಂದ ಗ್ರಾಮಸ್ಥರಿಗೆ ಎಚ್ಚರಿಕೆಯ ಸೂಚನೆ ರವಾನಿಸಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?