Featured
ಅಸ್ಸಾಂ, ಬಿಹಾರದಲ್ಲಿ ಭೀಕರ ಪ್ರವಾಹ: ನೂರಾರು ಮಂದಿ ಸಾವು, 3.5 ಲಕ್ಷ ಮಂದಿ ಬೀದಿ ಪಾಲು
ರೈಸಿಂಗ್ ಕನ್ನಡ :
ಅಸ್ಸಾಂ:
ಕೊರೊನಾ ಭೀತಿ ನಡುವೆ ಅಸ್ಸಾಂ ಮತ್ತು ಬಿಹಾರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಪ್ರವಾಹ ಸೃಷ್ಟಿಯಾಗಿದೆ. ಎರಡು ರಾಜ್ಯಗಳಲ್ಲಿ ಪ್ರವಾಹ ರಣಕೇಕೆ ಹಾಕುತ್ತಿರುವುದರಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಸುಮಾರು 3.5 ಲಕ್ಷ ಮಂದಿಗೆ ಹಾನಿಯಾಗಿದೆ. ಶುಕ್ರವಾರ ಅಸ್ಸಾಂನಲ್ಲಿ ಪ್ರವಾಹ ಹೆಚ್ಚಾಗಿ ಮೂವರು ಮಂದಿ ಕೊಚ್ಚಿ ಹೋಗಿದ್ದು ಸಾವಿನ ಸಂಖ್ಯೆ 96ಕ್ಕೆ ಏರಿದೆ. ಇಲ್ಲಿನ ಬಾರಪೇಟಾ, ದಿಬ್ರುಗರ್, ಕೊಕ್ರಜ್ಹರ್, ಬೊನಗಾಗಾನ್, ತಿನುಸಿಕಿಯಾ ಜಿಲ್ಲೆಗಳು ಪ್ರವಾಹದ ಸುಳಿಯಲ್ಲಿ ಸಿಲುಕಿದ್ದು 27.8 ಲಕ್ಷ ಮಂದಿ ಬೀದಿಪಾಲಗಿದ್ದಾರೆ.
ಭೀಕರ ಪ್ರವಾಹದ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಜೊತೆ ಮಾತನಾಡಿ ಮಾಹಿತಿ ಪಡೆದಿದ್ದಾರೆ. ಬ್ರಹ್ಮಪುತ್ರನದಿಯಲ್ಲಿ ನೀರಿನ ಮಟ್ಟ ಹೆಚ್ಚಾದರಿಂದ 2,543 ಗ್ರಾಮಗಳು ಜಲಾವೃತವಾಗಿವೆ. 1,22,573.16 ಹೆಕ್ಟೇರ್ಗಳಲ್ಲಿ ಬೆಳೆ ಹಾನಿಯಾಗಿದೆ.
ಇನ್ನು ಬಿಹಾರದಲ್ಲಿ ಪ್ರಹಾದಿಂದಾಗಿ 1ಲಕ್ಷ ಜನರಿಗೆ ಹಾನಿಯಾಗಿದೆ ಮತ್ತು 12,023 ಮಂದಿ ಮನೆ ಕಳೆದುಕೊಂಡಿದ್ದಾರೆ. 9,60, 831 ಪ್ರಹಾವದಿಂದ ಪರದಾಡಿದ್ದು ಶುಕ್ರವಾರದವರೆಗೆ ಬಿಹಾರದಲ್ಲಿ 10 ಮಂದಿ ಸಾವನಪ್ಪಿದ್ದಾರೆ ಎಂದು ಬಿಹಾರ ಸರ್ಕಾರ ಹೇಳಿದೆ.
ಜನರನ್ನ ರಕ್ಷಿಸಲು ರಾಷ್ಟ್ರೀಯ ವಿಪತ್ತು ಘಟಕ (ಎನ್ಡಿಆರ್ಎಫ್) ಮತ್ತು (ಎಸ್ಡಿಆರ್ಎಫ್) ಬಚಾವ್ ಮಾಡಲು 22 ತಂಡಗಳನ್ನ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?