Featured
ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಧ್ವಜಾರೋಹಣ- ಬೆಂಗಳೂರು ಗಲಾಟೆ ಬಗ್ಗೆ ಕಿಡಿ
![](https://risingkannada.com/wp-content/uploads/2019/09/16-Ramesh-Jarkiholi.jpg)
ರೈಸಿಂಗ್ ಕನ್ನಡ:
ಬೆಳಗಾವಿ:
74 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ನಮ್ಮ ದೇಶದ ಅಸ್ಮಿತೆ, ದೇಶದ ಸ್ವಾಭಿಮಾನವಾಗಿದೆ. ಅನೇಕ ಮಹನೀಯರ ಬಲಿದಾನ, ತ್ಯಾಗ ಅವಿಸ್ಮರಣೀಯ. ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆ ಪಾತ್ರ ಪ್ರಮುಖವಾಗಿದೆ. ಸಿಎಂ ಯಡಿಯೂರಪ್ಪ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಪ್ರವಾಹ, ಕೊರೊನಾ ಸಂಕಷ್ಟವನ್ನ ಸಮರ್ಥವಾಗಿ ನಿಭಾಯಿಸಲಾಗಿದೆ. ಬೆಳಗಾವಿ ಜಿಲ್ಲೆ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಇದೇ ವೇಳೆ ಜಾರಕಿಹೊಳಿ ಬೆಂಗಳೂರಿನ ಕೆಜಿ ಹಳ್ಳಿ, ಡಿಜಿ ಹಳ್ಳಿ ಗಲಾಟೆ ಪ್ರಕರಣದ ಬಗ್ಗೆ ಕಿಡಿಕಾರಿದರು. ಇದು ಕಾಂಗ್ರೆಸ್ ಗಲಾಟೆ, ಅದು ನಮಗೆ ಸಂಬಂಧವಿಲ್ಲ ಎಂದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ರಚಿಸಿದೆ, ಏನ್ ಮಾಡ್ತಾರೆ ನೋಡೊಣ. ಅಖಂಡ ಶ್ರೀನಿವಾಸಮೂರ್ತಿ ಒಳ್ಳೆಯ ಶಾಸಕ, ಒಳ್ಳೆಯ ಮನುಷ್ಯ ಅವರಿಗೆ ಅನ್ಯಯವಾಗಬಾರದು. ನಮ್ಮ ಸರಕಾರ ಅವರಿಗೆ ಸೂಕ್ತ ರಕ್ಷಣೆ ನೀಡಲಿದೆ ಎಂದು ಹೇಳಿದರು.
![](https://risingkannada.com/wp-content/uploads/2020/08/Sanju-Kumar-Tolle-1024x460.jpg)
You may like
ಮಗುವಿನ ವಿಚಾರಕ್ಕೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್!
RCB ತಂಡದಲ್ಲಿ ಅಬ್ಬರಿಸುತ್ತಿದ್ದಾನೆ ಸೆಹ್ವಾಗ್ ಸೋದರಳಿಯ!
ಬಿಳಿ ಅಥವಾ ಗುಲಾಬಿ ಇವೆರಡರಲ್ಲಿ ಯಾವ ಬಣ್ಣದ ಸೀಬೆಹಣ್ಣು ಆರೋಗ್ಯಕ್ಕೆ ಬೆಸ್ಟ್!
ಬೆಳಗಾವಿ ಪುತ್ರ ಮೃಣಾಲ್ಗೆ ಆಶೀರ್ವಾದ ಮಾಡಿ : ಲಕ್ಷ್ಮೀ ಹೆಬ್ಬಾಳ್ಕರ್
ಎಲ್ಲಾ ಸಮೀಕ್ಷೆಗಳಲ್ಲೂ ಬೆಳಗಾವಿಯಲ್ಲಿ ನಾವೇ ಮುಂದು..! – ಸಿಎಂ
ಆಸ್ಪತ್ರೆಗೆ ದಾಖಲಾದ ಮಂಗ: ಮಾನವೀಯತೆ ಮೆರೆದ ಮಾನವ