Featured
ಉತ್ತರ ಕೊರಿಯಾದಲ್ಲಿ ಮೊದಲ ಕೊರೊನಾ ಕೇಸ್- ಕೆಲವೇ ಗಂಟೆಗಳಲ್ಲಿ ಮಹಾನಗರ ಕಂಪ್ಲೀಟ್ ಲಾಕ್ಡೌನ್..!
ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಇಡೀ ವಿಶ್ವವೇ ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿದೆ. ಹಲವು ದೇಶಗಳ ಗಲ್ಲಿಗಲ್ಲಿಯಲ್ಲೂ ಕೊರೊನಾ ಆಟ ಆಡುತ್ತಿದೆ. ಆದ್ರೆ ಉತ್ತರ ಕೊರಿಯಾದಲ್ಲಿ ಮಾತ್ರ ಇಲ್ಲಿ ತನಕ ಒಂದೇ ಒಂದು ಕೊರೊನಾ ಪಾಸಿಟಿವ್ ಕೇಸ್ ಕಾಣಿಸಿಕೊಂಡಿರಲಿಲ್ಲ. ಕೊರೊನಾ ವೈರಸ್ ಚೀನಾದಲ್ಲಿ ಹುಟ್ಟಿ 8 ತಿಂಗಳಾಗಿದೆ. ಜಗತ್ತಿನಗೆ ಹರಡಲು ಶುರುವಾಗಿ 6 ತಿಂಗಳು ಮುಗಿದಿದೆ. ಆದ್ರೆ ಈಗ ಉತ್ತರ ಕೊರಿಯಾದಲ್ಲಿ ಮೊತ್ತ ಮೊದಲ ಕೋವಿಡ್ 19 ಪಾಸಿಟಿವ್ ಕೇಸ್ ಪತ್ತೆಯಾಗಿದೆ.
ಉತ್ತರ ಕೊರಿಯಾದ ಕಾಯ್ಸಾಂಗ್ನಲ್ಲಿ ದೇಶದ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇದಾದ ಕೆಲವೇ ಕೆಲವು ಗಂಟೆಗಳಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇಡೀ ನಗರದಲ್ಲಿ ಕಠಿಣ ಲಾಕ್ಡೌನ್ ಜಾರಿಗೊಳಿಸಲು ಆದೇಶ ನೀಡಿದ್ದಾನೆ. ಕಾಯ್ಸಂಗ್ ನಗರದಿಂದ ಈಗ ಒಂದು ಹುಳು ಕೂಡ ಹೊರಹೋಗದಂತೆ ನಿರ್ಬಂಧ ವಿಧಿಸಲಾಗಿದೆ.
3 ವರ್ಷದ ಹಿಂದೆ ದಕ್ಷಿಣ ಕೊರಿಯಾಕ್ಕೆ ವಲಸೆ ಹೋಗಿದ್ದ ವ್ಯಕ್ತಿ ತವರಿಗೆ ಮರಳಿದ್ದ. ಆತನಲ್ಲಿ ಕೊರೊನಾ ವೈರಸ್ ಕಾಣಸಿಕೊಂಡಿದೆ. ಈ ಪಾಸಿಟಿವ್ ಪ್ರಕರಣ ಉತ್ತರ ಕೊರಿಯಾದಲ್ಲಿ ಅಧಿಕೃತವಾಗಿ ಮೊದಲ ಕೊರೊನಾ ಕೇಸ್ ಆಗಿ ದಾಖಲಾಗಿದೆ.
You may like
ಕರ್ನಾಟಕದಲ್ಲಿ ಕೊರೋನಾ ಮಹಾ ಸ್ಫೋಟ. ದೆಹಲಿ ಮೀರಿಸುತ್ತಾ ಬೆಂಗಳೂರು.?
ಅಕ್ಟೋಬರ್ ಬಳಿಕ ರಾಜ್ಯದಲ್ಲಿ ಮತ್ತೆ ಕೊರೋನಾ ಏರಿಕೆ : ಒಮಿಕ್ರಾನ್ ಅಲರ್ಟ್..!
ಹರಾಜಿಗೂ ಮುನ್ನ ಸ್ಟಾರ್ ಕನ್ನಡಿಗರನ್ನ ಕೈಬಿಡಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್..?
ಸದ್ಯ ಶಾಲಾ-ಕಾಲೇಜು ತೆರೆಯುವ ಚಿಂತನೆ ಇಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಗದಗದಲ್ಲಿ ಸಂಕಷ್ಟಕ್ಕೆ ಸಿಲುಕಿದ ಬೀದಿ ನಾಟಕ ಕಲಾ ತಂಡ: ಜಿಲ್ಲಾಧಿಕಾರಿಗೆ ಮನವಿ
ಭಾರತದಲ್ಲಿ 34 ಲಕ್ಷ ದಾಟಿದ ಕೊರೊನಾ ಕೇಸ್: 24 ಗಂಟೆಯಲ್ಲಿ 1,021 ಸಾವು