Featured
ಸ್ವಾತಂತ್ರ್ಯದಿನದಂದು ಅಚಾತುರ್ಯ- ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದವರ ಬಂಧನ- ರಾಯಣ್ಣ ಅಭಿಮಾನಿಗಳಿಗೆ ಬೇಸರ
ರೈಸಿಂಗ್ ಕನ್ನಡ:
ಬೆಳಗಾವಿ:
ಸ್ವಾತಂತ್ರ್ಯ ದಿನಾಚರಣೆಯ ದಿನವೇ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆಗೆ ವಿರೋಧ ವ್ಯಕ್ತವಾದ ಘಟನೆ ಅಚ್ಚರಿಯಾದರೂ ಸತ್ಯವಾಗಿದೆ. ಬೆಳಗಾವಿ ತಾಲೂಕಿನ ಪಿರಣವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ವೃತ್ತ ಮಾಡಲು ಮನವಿ ನೀಡಿದರು ಜಿಲ್ಲಾಡಳಿತ ಸ್ಪಂಧಿಸಿರಲಿಲ್ಲ. ಜಿಲ್ಲಾಡಳಿತದಿಂದ ಬೇಸತ್ತು ಸ್ವತಃ ಜನರೇ ವೃತ್ತ ನಿರ್ಮಾಣ ಮಾಡಲು ತೀರ್ಮಾನ ಮಾಡಿದ್ದರು.
ದೇಶಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ಶೂರ ಸಂಗೊಳ್ಳಿ ರಾಯಣ್ಣ. ರಾಯಣ್ಣನ ಹುಟ್ಟುಹಬ್ಬದ ದಿನವೇ ನಡೆದ ಅಚಾತುರ್ಯ ಘಟನೆ ನಡೆದಿದೆ. ಮೂರ್ತಿಯನ್ನು ಸ್ಥಾಪನೆ ಮಾಡದೆ ತಂದು ಇಟ್ಟುಕೊಂಡಿದ್ದ ಸ್ಥಳೀಯರು ಸಂಗೊಳ್ಳಿ ರಾಯಣ್ಣ ಮೂರ್ತಿ ಜೊತೆಗೆ ರಾಷ್ಟ್ರ ಧ್ವಜವನ್ನೂ ಸಹ ಹಾಕಿದ್ದರು. ಆ ಮೂರ್ತಿಯನ್ನು ಸ್ಥಾಪನೆಗೆ ಮುನ್ನವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಿರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ವೃತ್ತ ಮಾಡಿ ಮೂರ್ತಿ ಸ್ಥಾಪನೆ ಮಾಡಿಕೊಡಿ ಎಂದು ಹಲಾವಾರು ಬಾರಿ ಮನವಿ ಸಲ್ಲಿಸಿದರು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿಯಲ್ಲಿ ಗ್ರಾಮಸ್ಥರು ಮತ್ತು ಅಭಿಮಾನಿಗಳಿಂದ ಮೂರ್ತಿ ಸ್ಥಾಪನೆಗೆ ನಿರ್ಧಾರ ಮಾಡಲಾಗಿತ್ತು. ಮುಂಜಾನೆ ಸಮಯದಲ್ಲಿ ರಾಯಣ್ಣನ ಅಭಿಮಾನಿಗಳು ಮೂರ್ತಿ ಸ್ಥಾಪನೆ ಮಾಡುತ್ತಿದ್ದರು. ಆದರೆ ಪೊಲೀಸ್ ಇಲಾಖೆ ಇದನ್ನ ತಡೆಹಿಡಿದು ರಾಯಣ್ಣನ ಅಭಿಮಾನಿಗಳನ್ನು ಬಂಧಿಸಿದ್ದಾರೆ. ರಾಯಣ್ಣ ಮೂರ್ತಿ ಸ್ಥಾಪನೆ ಆಗಬೇಕು ಆಗುವರೆಗೂ ನಾವು ಬಿಡಲ್ಲ ಎಂದು ರಾಯಣ್ಣ ಅಭಿಮಾನಿಗಳು ಹೇಳಿದ್ದಾರೆ. ಮೂರ್ತಿ ಸ್ಥಾಪನೆಗೆ ಅವಕಾಶ ನೀಡದ ಪೊಲೀಸರ ವಿರುದ್ಧ ಜನ ಕಿಡಿಕಾರಿದ್ದಾರೆ.
You may like
ಬೆಳಗಾವಿ ಪುತ್ರ ಮೃಣಾಲ್ಗೆ ಆಶೀರ್ವಾದ ಮಾಡಿ : ಲಕ್ಷ್ಮೀ ಹೆಬ್ಬಾಳ್ಕರ್
ಎಲ್ಲಾ ಸಮೀಕ್ಷೆಗಳಲ್ಲೂ ಬೆಳಗಾವಿಯಲ್ಲಿ ನಾವೇ ಮುಂದು..! – ಸಿಎಂ
ಆಸ್ಪತ್ರೆಗೆ ದಾಖಲಾದ ಮಂಗ: ಮಾನವೀಯತೆ ಮೆರೆದ ಮಾನವ
Acid Attack | ಕಡಬ ಆ್ಯಸಿಡ್ ದಾಳಿ : ಸೂಕ್ತ ಕ್ರಮಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ
ಆಸ್ತಿ ಪಡೆಯಲು ಪತಿಯ ಶವವನ್ನು ಇಟ್ಟು ಪತ್ನಿಯಿಂದ ಪ್ರತಿಭಟನೆ.
Lakshmi Hebbalkar | ನನಗೆ ಜಾತಿಯೇ ಇಲ್ಲ, ಮನುಷ್ಯತ್ವವೇ ನನ್ನ ಜಾತಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್