Featured
ವಿಧಾನಸೌಧಕ್ಕೆ ಅನ್ನದಾತರ ಮುತ್ತಿಗೆ : ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್
![](https://risingkannada.com/wp-content/uploads/2019/10/WhatsApp-Image-2019-10-10-at-7.45.55-AM1-3.jpeg)
ಬೆಂಗಳೂರು : ಒಂದೆಡೆ ಇವತ್ತಿನಿಂದ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ರೆ, ಮತ್ತೊಂದೆಡೆ ಬಿಜೆಪಿ ಸರ್ಕಾರಕ್ಕೆ ರೈತರು ಶಾಕ್ ನೀಡಿದ್ದಾರೆ. ಪ್ರವಾಹ ಪರಿಹಾರಕ್ಕೆ ಆಗ್ರಹಿಸಿ, ಇವತ್ತು ಸಾವಿರಾರು ರೈತರು ಬೃಹತ್ ಪ್ರತಿಭಟನೆ ನಡೆಸ್ತಿದ್ದಾರೆ.
ನೆರೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್ನಿಂದ ಆರಂಭವಾಗಲಿರುವ ಪ್ರತಿಭಟನೆ, ಫ್ರೀಡಂಪಾರ್ಕ್ಗೆ ಬಂದು ನಿಲ್ಲಲಿದೆ. ಅಲ್ಲಿಂದ ವಿಧಾನಸೌಧ ಮುತ್ತಿಗೆ ಯತ್ನ ನಡೆಯಲಿದೆ. ಆದ್ರೆ, ವಿಧಾನಸೌಧ ಸುತ್ತಾ ಸೆಕ್ಷನ್ 144 ಜಾರಿ ಇರೋದ್ರಿಂದ, ಮುತ್ತಿಗೆಗೆ ಅವಕಾಶ ನೀಡಲ್ಲ. ಹೀಗಾಗಿ, ಬಹುತೇಕ ಫ್ರೀಡಂಪಾರ್ಕ್ನಲ್ಲೇ ರೈತರ ಪ್ರತಿಭಟನೆ ಅಂತ್ಯವಾಗಲಿದೆ.
![](https://risingkannada.com/wp-content/uploads/2019/10/WhatsApp-Image-2019-10-10-at-7.45.55-AM1-1024x576.jpeg)
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗೋ ಸಾಧ್ಯತೆ ಇದೆ. ಈಗಾಗಲೇ ವಿವಿಧ ಜಿಲ್ಲೆಗಳಿಂದ ರೈತರು ಆಗಮಿಸಿದ್ದಾರೆ.
ಜೆಡಿಎಸ್ ಕೂಡ ಪ್ರತಿಭಟನೆ
ಈ ನಡುವೆ, ಜೆಡಿಎಸ್ ಕೂಡ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸ್ತಿದೆ. ಜೆಡಿಎಸ್ ಕಚೇರಿ, ಜೆಪಿ ಭವನದಿಂದ ಫ್ರೀಡಂಪಾರ್ಕ್ವರೆಗೆ ಪಾದಯಾತ್ರೆ ನಡೆಸಲಿದ್ದಾರೆ.
ಎರಡು ಪ್ರಮುಖ ಪ್ರತಿಭಟನೆಗಳು ಒಂದೇ ಕಡೆ ಇರೋದರಿಂದ ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಕಾರ್ಪೋರೇಷನ್, ವಿಧಾನಸೌಧ, ಶೇಷಾದ್ರಿಪುರಂ ಸುತ್ತಮುತ್ತಾ ಟ್ರಾಫಿಕ್ ಸಮಸ್ಯೆ ಸಾಧ್ಯತೆ ಇದೆ. ಹೀಗಾಗಿ, ಈ ಭಾಗಗಳಿಗೆ ಬರುವ ಮುನ್ನ ಎಚ್ಚರ ವಹಿಸಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?