Featured
ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಸ್ಥಿತಿ ಗಂಭೀರ: ಕೊರೊನಾ ಸೋಂಕಿಗೆ ಗುರಿಯಾಗಿರುವ ಮಾಜಿ ಆಟಗಾರನಿಗೆ ಐಸಿಯುವಿನಲ್ಲಿ ಚಿಕಿತ್ಸೆ
![](https://risingkannada.com/wp-content/uploads/2020/08/CHETANCHAUHAN-1.jpg)
ರೈಸಿಂಗ್ ಕನ್ನಡ :
ನವದೆಹಲಿ:
ಕೊರೊನಾ ಸೋಂಕಿಗೆ ಗುರಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಚೇತನ್ ಚೌಹಾಣ್ ಸ್ಥಿತಿ ಗಂಭೀರವಾಗಿದೆ.
72 ವರ್ಷದ ಚೇತನ್ ಚೌಹಾಣ್ಗೆ ಕಳೆದ ತಿಂಗಳು ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲು ಲಖನೌನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಮೆದಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
![](https://risingkannada.com/wp-content/uploads/2020/08/SIDDARAMA-1024x460.jpg)
ಶುಕ್ರವಾರ ಮಾಜಿ ಆಟಗಾರ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಕಿಡ್ನಿ ಸಮಸ್ಯೆ ಮತ್ತು ಬಿಪಿ ಸಮಸ್ಯೆ ಉಲ್ಬಣಿಸಿತು. ಇದೀಗ ಗುರುಗ್ರಾಮ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದ್ದು ಚೇತನ್ ಚೌಹಾಣ್ ಕಿಡ್ನಿ ವೈಫಲ್ಯ ಅನುಭವಿಸುತ್ತಿದ್ದು ವೆಂಟಿಲೇಟರ್ ಅಳವಡಿಸಲಾಗಿದೆ.
ಚೇತನ್ ಚೌಹಾಣ್ ಮತ್ತು ಮಾಜಿ ನಾಯಕ ಸುನಿಲ್ ಗಾವಸ್ಕರ್ ಒಂದು ಶ್ರೇಷ್ಠ ಆರಂಭಿಕ ಬ್ಯಾಟ್ಸ್ಮನ್ಗಳಾಗಿದ್ದರು. 1970ರಲ್ಲಿ ಇಬ್ಬರು 10 ಶತಕಗಳನ್ನ ಸಿಡಿಸಿ 3 ಸಾವಿರ ರನ್ ಕಲೆ ಹಾಕಿದ್ದರು. ಚೇತನ್ ಚೌಹಾಣ್ ಅವರಿಗೆ 1981ರಲ್ಲಿ ಪ್ರತಿಷ್ಠಿತ ಅರ್ಜುನಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?