Connect with us

Featured

ಮಾಜಿ VS ಹಾಲಿ ಶಾಸಕರ ಮಾತಿನ ಫೈಟ್- -ಕೆರೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿಲ್ಲ- ದೊಡ್ಡನಗೌಡ ವಿರುದ್ಧ ಅಮರೇಗೌಡ ವಾಗ್ದಾಳಿ- ಮಾಜಿ ಶಾಸಕರು ಹೇಳೋದೆಲ್ಲ ಸುಳ್ಳು: ಬಯ್ಯಾಪುರ

ರೈಸಿಂಗ್​ ಕನ್ನಡ:

ನಾಗರಾಜ್​.Y. ಕೊಪ್ಪಳ

Advertisement

ಕೊಪ್ಪಳ ಜಿಲ್ಲೆಯ ಕುಷ್ಟಗಿ ಮಾಜಿ ಶಾಸಕ ಕೆರೆ ಕಾಮಗಾರಿ ವಿಷಯಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳುತ್ತಿದ್ದಾರೆ. ಇದನ್ನ ರಾಜಕೀಯ ಕಾರಣಕ್ಕೆ ಬಳಸಿಕೊಂಡು ಸುಖಾಸುಮ್ಮನೆ ಅವ್ಯವಹಾರದ ಆರೋಪ ಮಾಡುತ್ತಿದ್ದಾರೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಕಿಡಿಕಾರಿದ್ದಾರೆ.

ಕುಷ್ಟಗಿಯಲ್ಲಿ ಮಾತನಾಡಿದ ಶಾಸಕ ಬಯ್ಯಾಪುರ ಕೆರೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ, ಶಾಸಕ ಅಮರೇಗೌಡರು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ಮಾಜಿ ಶಾಸಕ ದೊಡ್ಡನಗೌಡ ಪಾಟೀಲರ ಆರೋಪ ಶುದ್ಧ ಸುಳ್ಳು. ಈಗ ರಾಜ್ಯದಲ್ಲಿ ಅವರದೇ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಬೇಕಾದರೆ ತನಿಖೆ ನಡೆಸಲಿ ಎಂದು ಸವಾಲು ಎಸೆದರು.

ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಇಲ್ಲಸಲ್ಲದ ಆರೋಪ ಮಾಡಿ, ಅವರ ಕೆಲಸಕ್ಕೆ ತಡೆಯೊಡ್ಡುವ ಕಾರ್ಯ ಮಾಡಬಾರದು. ನಿತ್ಯ ಕೆರೆ ಪಕ್ಕದಲ್ಲೇ ತಮ್ಮೂರಿಗೆ ತೆರಳುವ ದೊಡ್ಡನಗೌಡರು ಅವ್ಯವಹಾರ, ಕಳಪೆ ಕಾಮಗಾರಿ ನಡೆದಿದ್ದರೆ ಕೆಲಸ ನಡೆಯುವ ವೇಳೆಯೇ ಪ್ರಶ್ನಿಸಬಹುದಿತ್ತು ಎಂದು ಕಿಡಿ ಕಾರಿದರು.

ಮೊದಲು ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಕೆರೆ ಕೆಲಸ ನಡೆಯುತ್ತಿತ್ತು. ಸರಕಾರದೊಂದಿಗೆ ಚರ್ಚಿಸಿ ಕೆರೆ ಅಭಿವೃದ್ಧಿಗಾಗಿ 3 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದೇನೆ. ಅದರಲ್ಲಿ ಈಗಾಗಲೇ 1 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಮುಗಿದಿದ್ದು, 2 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಕೊರೊನಾ ಕಾರಣದಿಂದ ಯಾವ ಕಾಮಗಾರಿಯನ್ನೂ ನಡೆಸದಂತೆ ಸರಕಾರ ಸೂಚಿಸಿದ್ದರಿಂದ ಸ್ಥಗಿತಗೊಂಡಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ವಿವರಿಸಿದರು.

ಚೀನಾ ವಸ್ತು ಖರೀದಿಸಿದ್ದರೆ ಹಾಳು ಮಾಡಬೇಡಿ!

ಈಗಾಗಲೇ ಚೀನಾದೊಂದಿದೆ ರಾಷ್ಟ್ರದ ಬಾಂಧವ್ಯ ಹದಗೆಟ್ಟಿದೆ. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಜಾಗರೂಕ ಹೆಜ್ಜೆಗಳನ್ನು ಇಡಬೇಕಿದೆ. ದೇಶದ ತಂಟೆಗೆ ಬಂದರೆ ನಮ್ಮ ಭಾರತ ತಕ್ಕ ಪ್ರತ್ಯುತ್ತರ ನೀಡುತ್ತಲೇ ಬಂದಿರುವುದನ್ನು ಗಮನಿಸಬಹುದು. ಈಗಲೂ ಸದೃಢವಾಗಿರುವ ಭಾರತ ಸೇನೆ ಎದುರಾಳಿಗೆ ಪ್ರತಿ ದಾಳಿ ನಡೆಸುವಷ್ಟು ಸಮರ್ಥ, ಸಶಕ್ತವಾಗಿದೆ. ಆದಾಗ್ಯೂ ಚೀನಾ ಸಂಘರ್ಷದಲ್ಲಿ ದೇಶದ ಯೋಧರು ಹುತಾತ್ಮರಾಗಿರುವುದು ವಿಷಾದನೀಯ ಎಂದರು.

ಈ ನಿಟ್ಟಿನಲ್ಲಿ ಚೀನಾ ಉತ್ಪನ್ನಗಳನ್ನು ಖರೀದಿಸಬಾರದು ಎಂಬ ಜಾಗೃತಿ ಜನರಲ್ಲಿ ಮೂಡಿರುವುದು ಸ್ವಾಗತಾರ್ಹ. ಆದರೆ ಈಗಾಗಲೇ ಖರೀದಿಸಿರುವ ಚೀನಾ ಉತ್ಪನ್ನಗಳನ್ನ ಹಾಳು ಮಾಡುವುದು ಮೂರ್ಖತನದ್ದು. ಈಗಾಗಲೇ ಚೀನಾ ವಸ್ತುವನ್ನು ಹಣ ಕೊಟ್ಟು ಖರೀದಿಸಿ ನಮ್ಮ ಸಂಪತ್ತನ್ನಾಗಿ ಮಾಡಿಕೊಂಡಿದ್ದೇವೆ. ಅದನ್ನ ಹಾಳು ಮಾಡಿದರೆ, ನಮ್ಮ ಸಂಪತ್ತನ್ನ ನಾವೇ ಹಾಳು ಮಾಡಿದಂತೆ ಎಂದು ಬಯ್ಯಾಪುರ ತಿಳಿಸಿದರು.

Advertisement

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಬೇಡ

ರಾಜ್ಯ ಸರಕಾರ ಜಾರಿಗೆ ತರಲು ಹೊರಟಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಸರಿ‌ ಇಲ್ಲ. ಈ ಕಾಯ್ದೆಯ ಪ್ರಕಾರ ಯಾರಾದರೂ ಎಷ್ಟಾದರೂ ಭೂಮಿ ಖರೀದಿಸಬಹುದು. ಅಂದ್ರೆ ಹಣವುಳ್ಳವರ ಪರವಾದ ಕಾಯ್ದೆ ಇದು. ಶ್ರೀಮಂತರು ನಾನಾ ಉದ್ದೇಶಗಳಿಗಾಗಿ ಭೂಮಿ ಖರೀದಿಸಿ, ನಂತರ ಆ ಭೂಮಿಯನ್ನು ನಿಗದಿತ ಉದ್ದೇಶಕ್ಕೆ ಬಳಸದೇ ರಿಯಲ್ ಎಸ್ಟೇಟ್ ದಂಧೆ ಮಾಡುವ ಅಪಾಯ ಇದೆ. ಹಾಗಾಗಿ ಈ ಕಾಯ್ದೆ ಜಾರಿಗೆ ತರಲು ಹೊರಟಿರುವ ಸರಕಾರದ ನಿಲುವು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ